ಅನಿಲ್ ಕುಮಾರ್   (ಅನ್ವೇಷಿ 🔥🔥)
461 Followers · 234 Following

ಅಕ್ಷರಗಳ ಆತ್ಮೀಯ ಒಡನಾಡಿ

ಅಮ್ಮ ನನ್ನನ್ನ ಪ್ರಪಂಚಕ್ಕೆ ಪರಿಚಯಿಸಿದ್ದು ನವೆಂಬರ್ 13
Joined 10 January 2019


ಅಕ್ಷರಗಳ ಆತ್ಮೀಯ ಒಡನಾಡಿ

ಅಮ್ಮ ನನ್ನನ್ನ ಪ್ರಪಂಚಕ್ಕೆ ಪರಿಚಯಿಸಿದ್ದು ನವೆಂಬರ್ 13
Joined 10 January 2019

ಬದುಕೆ ಈ
ಬದುಕಿರುವುದೇ
ನಿನಗಾಗಿ...

ನಿನ್ನವರಲ್ಲದವರ ಚಿಂತೆ
ಮಾಡುವೆ ನೀ
ಯಾಕಾಗಿ...

ಎಲ್ಲಾ ಮರೆತು
ನಿನ್ನೊಳಗೆ ನೀ ಬೆರೆತು
ನಕ್ಕುಬಿಡು ಹಾಯಾಗಿ...

-



ತೆವಳುತ್ತಾ ಸಾಗುವ ಬದುಕೊಂದು
ಒಮ್ಮೆಲೆ ಚಿಟ್ಟೆಯಂತೆ ಹಾರಾಡುವ ರೀತಿ

-



ಆರಾಮವಾದ ಬದುಕನ್ನೇನು ಕೊಳೆತ ಹಣ್ಣಲ್ಲಿ ಕುಳಿತ ಹುಳು ಕೂಡ ಬದುಕುತ್ತೆ...
ಸಂಘಷ೯ದಲ್ಲಿ ಬದುಕುವ ಬದುಕು ಮಾತ್ರ ನವನವೀನ ಅನುಭವಗಳ ಸವಿ ನೀಡುತ್ತೆ...

-



ದಿನವು ಕಾದಿರುವೆ ಗೆಳತಿ
ನೀ ಬರುವ ನಿರೀಕ್ಷೆಯಲ್ಲಿ

ಕಾಯುತ್ತ ಕುಳಿತಿರುವೆ ಗೆಳತಿ
ಹಿಂದೊಮ್ಮೆ ಜೊತೆ ನಡೆದ ದಾರಿಯಲ್ಲಿ

ಮರೆತು ಹೋದೆಯಾ ನನ್ನ
ನಿನ್ನ ಬಾಳ ಪಯಣದಲ್ಲಿ

ಅಳಿಸಿ ಬಿಟ್ಟೆಯಾ ನನ್ನ
ನೆನಪ ನಿನ್ನ ಬಾಳ ಪುಟದಲ್ಲಿ

-



ದಡದಲ್ಲಿದ್ದು ಸಾಗರವನ್ನು ದಾಟಲಾಗದು ಗೆಳೆಯ ಜೊತೆಗಾರರಿದ್ದರೆಂದು ದುಡುಕಬೇಡ ಭಯಂಕರವಾದ ಅಲೆಗಳ ಎದುರಿನಲ್ಲಿ ನಂಬಿಕೆಯ ದೋಣಿ ಮುಳುಗಹುದು
ನೀ ಒಂಟಿಯಾಗಿದ್ದರೆ ತಡಮಾಡದೆ ದುಮುಕು ನಿನ್ನ ಸಾಮರ್ಥ್ಯದಷ್ಟು ದೂರದವರೆಗೆ ನೀ ತೆರಳಬಹುದು

-



ತಾಯಿಯ
ತುಟಿಯಂಚಲಿ
ಅರಳಿದ
ಸಾರ್ಥಕತೆಯ
ಮುದ್ದಾದ ನಗುವೇ
ನವ ಜೀವದ
ಉಸಿರಿನ ಕವಿತೆ...💖

-



ತಂದೆಯ
ಕೈಗಂಟಿದ ಕೆಸರಲ್ಲಿ
ಕಾಣದೆ ಹೋದ
ಬೊಬ್ಬೆಗಳೇ
ಒಲವಿನ
ಮುದ್ದಾದ ಕವಿತೆ💗..!!

-



ಹುಚ್ಚನಂತೆ
ಹಚ್ಚಿಕೊಂಡ
ಭಗ್ನಪ್ರೇಮಿಯೊಬ್ಬ
ಹೊರಗೆಡವದೆ
ಬಚ್ಚಿಟ್ಟ
ಕಣ್ಣಹನಿಯೇ
"ಕವಿತೆ"

-



ಯಾವುದೇ ವಿಷಯ ಆಗಿರಲಿ ಅದನ್ನ ಮಾಡಲು ಮನಸಿರಬೇಕು ಮನಸಿದ್ದರೆ ಮಾತ್ರ ಮಾರ್ಗ ಇರುತ್ತೆ ಮನಸಿಲ್ಲದಿದ್ದರೆ ನೆಪಗಳು ಸಾಕಷ್ಟು ಸಿಗುತ್ತೆ

-



ನಿನಗಾಗಿ ಹಚ್ಚಿರುವೆ ಗೆಳತಿ ನನ್ನೆದೆಯ
ಗುಡಿಯಲ್ಲೊಂದು ಪುಟ್ಟ ದೀಪ

ನನ್ನ ಮನ ಆಗಾಗ ನೋಡುತ್ತಲ್ಲ ಸಖಿ
ನಿನ್ನಲ್ಲೇ ನನ್ನ ತಾಯಿಯ ಪ್ರತಿರೂಪ

-


Fetching ಅನಿಲ್ ಕುಮಾರ್ Quotes