ಕಚ್ಛೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಲೋಕದಲಿ
ನಿಶ್ಚಿಂತನಪ್ಪ - ಸರ್ವಜ್ಞ-
ದೀಪ ಮುಡಿದಿದೆ ಬತ್ತಿ
ಬೆಳಕು ಬದುಕಿನ ಬುತ್ತಿ
ಪ್ರತಿ ಮಾತೂ ಮತಾಪು
ನಗೆಯರಳಿ ಹೂ ಕುಂಡ
ಜೀವನೋತ್ಸಾಹದ ಪಟಾಕಿ
ಸಿಡಿದು ಸಂಭ್ರಮಿಸಲಿ. . . .
ದೀಪಾವಳಿ.
ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.
-
ಮಳೆಗಾಲ
ಕಾದ ನೆಲದೆದೆಯ ಮೇಲೆ
ಪ್ರೇಮ ಪನ್ನೀರ ಸಿಂಚನ
ಒಳಗುದಿಯ ಬೇಗೆ ಉಗಿಯಾಗಿ
ಹಬೆಯಾಡಿದ ಉರವಣಿಗೆ
ಕಡಲ ಅಲೆಯ ಆವಿಗೆ ಬೀಜಕಟ್ಟಿದ
ಮೋಡ ತಣಿಯಲು ಗಿರಿ ಶೃಂಗ
ಹುಡುಕಿದಂತೆ ಈ ಮೆರವಣಿಗೆ-
ಮುಚ್ಚುಮರೆ ಇಲ್ಲದೆಯೇ
ನಿನ್ನ ಮುಂದೆಲ್ಲವನೂ
ಬಿಚ್ಚಿಡುವೆ ಹೇ ಗುರುವೆ
ಅಂತರಾತ್ಮ
~ ಕುವೆಂಪು-
"ಈ ಮದ್ವೆ ಅನ್ನೋದನ್ನಾ ಯಾರು ಕಂಡು ಹಿಡಿದರೂ ಸಾರ್. ಅವನವ್ನ. ಅವ್ನ ಮನೇ ಹಾಳಾಗೋಗ" ಎಂದು ಜೋರಾಗಿ ಕಿರುಚಿ ಅವ ಕೊಂಚ ಸುಧಾರಿಸಿಕೊಂಡ. ಅವನ ಏದುಸಿರು ಆವೇಗ ಸುಧಾರಿಸಲಿ ಎಂದೇ ನೀರು ಕೊಟ್ಟು, ಗಾಜಿನ ಲೋಟದಲ್ಲಿ ಟೀ ಹಾಕಿ ಕೊಟ್ಟ ಅವಿನಾಶ್.
ನೀರು ಕುಡಿದು ಸಮಾಧಾನವಾದಂತೆ, ಚಹಾವನ್ನು ಗುಟುಕರಿಸುತ್ತಾ " ನನಗಿವತ್ತೂ ಈ ಮದುವೆ ಎಂಬೋ ಕಾನ್ಸೆಪ್ಟೇ ಅರ್ಥವಾಗಿಲ್ಲ ಸಾರ್. ಅಲ್ಲ, ಎಲ್ಲೋ ಹೇಗೋ ಬೆಳೆದ ಒಂದು ಹುಡುಗ ಹುಡುಗೀನ ಹೀಗೆ ಜೊತೆ ಮಾಡೋದೇಕೆ!? ಅವರಿಬ್ಬರಿಗೂ ಬೇರೆ ಬೇರೆ ಅನಿಸಿಕೆ, ಅನುಭವಗಳಿರ್ತವೆ. ಭಿನ್ನ ಪರಿಸರದಲ್ಲಿ ಬೆಳೆದಿರ್ತಾರೆ. ಈಗೀಗ ಇಬ್ಬರೂ ಓದಿರ್ತಾರೆ, ಸಾಕಾಗುವಷ್ಟು ಸಂಪಾದಿಸ್ತಿರ್ತಾರೆ. ಏನು ಬರೀ ಮಕ್ಳಾಗಲಿ ಅಂತ ಮದುವೆ ಆಗಬೇಕಾ!?"
"ಸುಲಗ್ನಾ ಸಾವಧಾನ" ಕತೆಯಿಂದ
-
"ಕಾಲ ಬದಲಾದ್ರೂ ಹೆಣ್ಣ ಮನಸ್ಥಿತಿ ಬದಲಾಗಂಗಿಲ್ರಪ್ಪಾ. ಹೆಣ್ಣು ಒಲಿಯಾದು ಅಂದ್ರೆ ಆಕಿ ದೇಹ ಮನಸ್ಸು ಎರಡೂ ಜೊತೆಗೂಡೇ ಬರ್ಬೇಕು, ಅದೂ ಆತ್ಮಪೂರ್ವಕ. ಇಲ್ದಿದ್ರ ಅದು ಬರೀ ದೇಹದ ಹಾದರಾನಾ"
"ಯೇ, ನಿನ್ನ ಫಿಲಾಸಪಿ ಎಲ್ಲಾ ಬ್ಯಾಡಾ ತಮ್ಮಾ. ಆಕಿ ಮನ್ಸ ಕಟ್ಗಂಡು ನಾವೇನು ಮಾಡಣ? ನಮ್ಗ ಆಕಿ ಜಬರದಸ್ತ್ ದೇಹ ಸಾಕ. ಏನಪಾ ಚಿದಂಬ್ರ ಏನಂತೀ?"
ಬಸವರಾಜನ ಈ ಮಾತಿಗೆ ಪ್ರತಿಯಾಗಿ ಹನುಮಂತ ಏನೂ ಮಾತಾಡಲಿಲ್ಲ.
("ತೇರು" ಕತೆಯಿಂದ)
-
ಬೆಳಕ ಕಿರಣ ಕಣ್ಣ ಬಿಡಿಸಿ
ಕನಸ ತುರುಬಿಗೊಂದು ದೀಪ ಮುಡಿಸಿ
ಹಬ್ಬಲಿ ನಗೆ ಬೆಳಗು
ಬೆಳಕಿನ ಹಬ್ಬದ ಶುಭಾಶಯಗಳು
ಆನಂದ್ ಋಗ್ವೇದಿ
ದಾವಣಗೆರೆ
-