ನಮ್ಮ ಬದುಕಿನಲ್ಲಿ ಯಾವುದೋ ಒಂದು
ಸಂಬಂಧ ಮುಗಿಯಿತೆಂಬ ಕಾರಣಕ್ಕೆ
ಇನ್ಯಾವ ಹೊಸ ಸಂಬಂಧಗಳು
ಹುಟ್ಟುವುದಿಲ್ಲ ಎಂದರ್ಥವಲ್ಲ.
-
ಖುಷಿ ಇರಲಿ ದುಃಖ ಇರಲಿ
ಯಾವುದೇ Mood ಇರಲಿ
ಒಂದು ಟೀ ಸಾಕು
ಎಲ್ಲವನ್ನೂ ಮರೆಸಲು.
-
ಬರುವ ದಿನಗಳು
ಆಶಾದಾಯಕವಾಗಿರುವವು
ಎನ್ನುವ ಸಕರಾತ್ಮಕ ಚಿಂತನೆ
ಇಂದಿನ ನೆಮ್ಮದಿಗೆ ಕಾರಣ.
-
ಬರವಣಿಗೆ ಅಂತ ಶುರು ಮಾಡಿ
ವರ್ಷಗಳೇ ಕಳೆದರೂ ಇನ್ನೂ ಪರಿ ಪಕ್ವವಾಗಿಲ್ಲ,
ಕಲಿಯುವಿಕೆ ನಿಂತಿಲ್ಲ,
ಜೀವನದ ಅನುಭವ, ನೋಡಿದ್ದು, ಕೇಳಿದ್ದು,
ಇವುಗಳನೆಲ್ಲಾ ಅಕ್ಷರ ರೂಪಕ್ಕೆ ತರುವ ಪ್ರಯತ್ನ
ನಿರಂತರವಾಗಿ ಸಾಗುತ್ತಲೇ ಇದೆ.
ನಿಮ್ಮ ಪ್ರೋತ್ಸಾಹವೇ
ನನ್ನ ಬರೆವಣಿಗೆಗೆ ಉತ್ಸಾಹ.-
ಎಲ್ಲವನ್ನೂ ಅರ್ಥಮಾಡಿಕೊಳ್ಳುವ
ಸಾಮರ್ಥ್ಯ ನಮಗಿದ್ದಾಗ ,
ಎಂತಹ ಸಮಸ್ಯೆಯನ್ನು ನಾವು
ಸುಲಭವಾಗಿ ಎದುರಿಸಬಹುದು.
-
ಮೊನ್ನೆ ಕನಸಲ್ಲಿ ಕಾಡಿದಳು ಕಣ್ಮಣಿ
ಇಂದು ಕಣ್ಮುಂದೆ ಸೆಳೆದು ನಿಂತಾಗ
ಸೆರೆಯಾಯಿತು ಅವಳ ನೋಟಕ್ಕೆ
ನನ್ನ ಮನ.-
ಕಲ್ಪನಾ ಲೋಕದಲ್ಲಿ ವಿವರಿಸುತ್ತಾ,
ಅಕ್ಷರಗಳನ್ನು ಹೆಕ್ಕಿ ತೆಗೆದು ಪ್ರತಿ ಪದಕ್ಕೂ ಅರ್ಥ,
ಭಾವ ಮತ್ತು ಮನ ತಟ್ಟುವ ಹಾಗೆ
ಬರೆಯುವುದು ತುಸು ಕಷ್ಟವೇ,
ಬರೆದ ಮೇಲೆ ಅದು ಓದುಗನ ಮನ ಮುಟ್ಟಬೇಕು
ಅದು ಅವರ ಮನಸ್ಸಿನ ದನಿಯಂತನಿಸಬೇಕು,
ನನ್ನ ಮನಸ್ಸಿನ ಮಾತೇ ಅಕ್ಷರ ರೂಪಕ್ಕೆ
ಬಂದತಿಂದೆ ಎಂದೆನಿಸಬೇಕು.
ಆವಾಗಲೇ ಬರಹಗಾರನಿಗೆ ಮತ್ತು ಬರಹಕ್ಕು
ಒಂದು ಸಾರ್ಥಕತೆ.
-
ಕಳೆದುಕೊಂಡು ಪರದಾಡುವ ಮೊದಲು
ನಮ್ಮ ಎಚ್ಚರಿಕೆಯಿಂದ ನಾವು ಇರುವುದು ಒಳ್ಳೆಯದು
ಕೊರೋನಾ ಈ ಸಲ ಕಂಡರಿಯದ ರೀತಿಯಲ್ಲಿ
ಭಯಾನಕವಾಗಿದೆ, ನಿರ್ಲಕ್ಷ್ಯ ಬೇಡ
ಮುಂಜಾಗ್ರತೆ ವಹಿಸಿ ನಿಮ್ಮ ಕುಟುಂಬದೊಂದಿಗೆ
ಎಚ್ಚರಿಕೆಯಿಂದ ಇರಿ.-