ಕಲ್ಲಾಗು ಮನವೇ ಕಲ್ಲಾಗು
ಭಾವನೆಗಳಿಲ್ಲದ ಕಲ್ಲಾಗು
ಕೊಡುವ ಪೆಟ್ಟುಗಳಿಗೆಲ್ಲ ಜಗ್ಗದ ಕಲ್ಲಾಗು
ನೋವಾಕೊಟ್ಟವರೆಲ್ಲ ಮುಂದೊಂದು ದಿನ ಪೂಜಿಸುವ ಶಿಲೆಯಾಗು
ಕಲ್ಲಾಗು ಮನವೇ ಕಲ್ಲಾಗು
-
ಮೊದ್ಲೇ ದಿವಾಳಿ ಆಗಿರೋ ಲೈಫ್..
ಶುಭಾಶಯ ಕೋರುವ ಬಯಕೆ ಇದ್ದರೆ
ಹ್ಯಾಪಿ ದಿವಾಳಿ ಬದಲು
ಹಿಂಗೇಳಿ
ಮುಂದಿನ ದೀಪಾವಳಿಗಾದರು ಸಿಗಲೇನಗೆ
ದೀಪಾ ಹಚ್ಚಿ ಪ್ರೀತಿ ಹಂಚೋ ಮುದ್ದಾದ ವೈಪೂ...-
ಶಾರ್ಟ್ ಟೆಂಪೆರ್ ಆದ್ರೂ ಬರೀ ಒಳ್ಳೆಯವರಿಗಷ್ಟೇ ಒಳ್ಳೇದ್ ಬಯಸೋ ನನ್ ಹಾರ್ಟ್ ಪ್ರಿಡ್ಜ್ ಅಲ್ಲಿ ಇಟ್ಟಿರೋ ಐಸ್ ಅಷ್ಟೇ ಫುಲ್ ಕೋಲ್ಡ್...
ವೀಕೆಂಡ್, ಎಣ್ಣೆ, ಸಿಗರೇಟ್ ಮೋಜು ಮಸ್ತಿ ಅನ್ನೋಕಾಲದಲ್ಲೂ ಯಾವ್ದೆ ದುಸ್ಚಟ ಇಲ್ದೆ ಇರೋ ನಾನು ಪ್ಯೂರ್ ಗೋಲ್ಡ್....-
ಹೆಣ್ಣವಳು
ಜಗದ ಸೃಷ್ಟಿಯ ಕಣ್ಣವಳು
ಮನೆ ಬೆಳಗೋ ದೀಪಾವವಳು
ಸುಂದರ ಶಿಲ್ಪಿ ಅವಳು
ಉಳಿಯಿಲ್ಲದೇ ಪ್ರೀತಿ ತ್ಯಾಗದಿಂದ
ನಮಗೆ ಸುಂದರ ರೂಪ ಕೊಟ್ಟವಳು
ತ್ಯಾಗದಲ್ಲಿ ಶಿಖರ ಅವಳು
ಪ್ರೀತಿ ಮಮತೆಗೆ ಆಕಾರ ಅವಳು
ಶಕ್ತಿ ಸ್ವರೂಪ ಅವಳು
ಹೆಣ್ಣವಳು
ಜಗದ ಸೃಷ್ಟಿಯ ಕಣ್ಣವಳು
-
ನಿನ್ನ ನಗುವಿನ ಹೋಳಿಯಲಿ
ದಿನ ಮಿಂದೇಳುತಿದ್ದ ನನಗೆ
ನಿನ್ನ ನಿಜವಾದ ಬಣ್ಣದ ಅರಿವಾಗಲಿಲ್ಲ-
ಈ ಬಾಳೊಂದು ಹೋರಾಟ
ನಿಲ್ಲದಿರು, ಯಾರನ್ನು ಕೊಲ್ಲದಿರು
ಇರುವಷ್ಟು ಕಾಲ ಹೋರಾಟವ ಮಾಡುತಲಿರು.-
ಕನಸಿಗೆ ಬಣ್ಣ ಹಚ್ಚಿದೆ
ಕಾಣದೂರಿಗೆ ದಾರಿ ತೋರಿದೆ
ಪ್ರೇಮವಾದೆ,ಜೀವವಾದೆ, ಜೀವನವಾದೆ-
"ಸುತ್ತದ ಜಾತ್ರೆ ಇಲ್ಲಾ
ಹೋಗದ ಹಬ್ಬ ಇಲ್ಲಾ
ಆದರೇನಂತೆ ಅಲ್ಲೆಲ್ಲೂ ನೀನಿಲ್ಲ...
ಹೃದಯದ ಬಾಗಿಲ ಬಳಿ ಬಂದು
ನಿಂತು ಬಾಗಿಲು ಬಡಿದು ಹೋದವರ್ಯಾರು ನೀನಾಗಿರಲಿಲ್ಲ...
ಕನಸ್ಸಲ್ಲಿ ಬಂದು ಕಾಡುವ ನೆನಸಾಗದ
ಕನಸಾಷ್ಟೇನಾ ನೀನು.
ಎಂದಾದರೂ ಎದುರಿಗೆ ಬರುವ
ಯೋಚನೆ ಇದಿಯಾ ಏನು..
ಎಲ್ಲಿರುವೆ ನೀನು
ಕಾಯುತ್ತಿರುವೆ ನಾನು....-
ಅವಳಂದ್ರೆ ಅಷ್ಟಿಷ್ಟಲ್ಲ ತುಂಬಾ ಇಷ್ಟ
ತುಂಬಾ ವರ್ಷಗಳಿಂದ
ಮನೆಯವರೆಲ್ಲ ಬೇಡಾ ಅವಳ ಸವಾಸ ಬಿಟ್ಟುಬಿಡು ಅಂತ ಎಷ್ಟ್ ಹೊಡೆದ್ರು ಬೈದ್ರು ನಾನು ತಲೆ ಕೆಡಿಸ್ಕೊಂಡವನಲ್ಲ , ಬಹುಶ ನಾನು ಹೆಚ್ಚಾಗಿ ನಮ್ಮ ಅಪ್ಪನತ್ರ ಅಟ್ಟಡಿಸಿ ಹೊಡಿಸಿ ಕೊಂಡಿದ್ದು ಅವಳಿಂದಲೇ,
ಟೀಚರ್ಸ್ ಕೂಡ ಹೆಚ್ಚು ಬೈದಿದ್ದೆ ಅವಳ ಕಾರಣದಿಂದ ಅದನ್ನೆಲ್ಲಾ ಬಿಟ್ಬಿಟ್ಟು ಚನ್ನಾಗಿ ಓದು ಅನ್ನೋರು, ನಂಗೂ ಅವಳಂದ್ರೆ ಹುಚ್ಚು ಏನ್ ಮಾಡೋದು ಎಕ್ಸಾಮ್ ಇದ್ರು ಅಷ್ಟೇ ಎಂಥ ಇಂಪಾರ್ಟೆಂಟ್ ಕೆಲಸ ಇದ್ರು ಅಷ್ಟೇ ಅವಳ ಮುಂದೆ ಆಜರ್ ಇರ್ತಿದ್ದೆ ಯಾಕಂದ್ರೆ ನಂಗೆ ಅವಳೇ ಮೊದ್ಲ ಪ್ರೆಫೆರೆನ್ಸ್, ಫ್ರೆಂಡ್ಸ್ ಕರೆದ್ರು ಅಷ್ಟೇ ಒಂದು ಸುಳ್ಳು ನೆಪ ಹೇಳಿ ತಪ್ಪಿಸಿಕೊಳ್ಳೋದು ಇಲ್ಲ ಅಂದ್ರೆ ಅವರನ್ನು ಅಲ್ಲೇ ಕರೆದುಕೊಂಡು ಹೋಗೋದು, ಅವಳ ಮುಂದೆ ಹೀರೋ ಆಗೋಕ್ ಹೋಗಿ ಕಾಮಿಡಿ ಪೀಸ್ / ವಿಲ್ಲನ್ ಆಗಿದ್ದೆ ಹೆಚ್ಚು, ಅವಳೇನಾದ್ರೂ ಟಿವಿ ನಲ್ಲಿ ಬಂದ್ರೆ ಅವತ್ತು ಅಮ್ಮ ತಂಗಿ ಯತ್ರ ಜಗಳ ಆಡಿ ಸೀರಿಯಲ್ ಫಿಲಂ ಎಲ್ಲಾ ಬಿಟ್ಟು ಅವಳನ್ನೇ ನೋಡ್ತಾ ಕುರೋದು, ಮೊದಲೆಲ್ಲ ಅವಳಿದ್ರೆ ಟೆನ್ಶನ್ ನನ್ ಹತ್ರ ಸುಳಿತ ಇರ್ಲಿಲ್ಲ ಈವಾಗ್ ಅವಳಂದ್ರೆ ಟೆನ್ಶನ್ ಆಗೋಕೆ ಸ್ಟಾರ್ಟ್ ಆಗೋಯ್ತು ಹಿಂಗೇ ನೆಡಿತಾ ಬಂದ ಕಥೆ ಈವಾಗ ಕೊನೆ ಹಂತ ತಲುಪಿದೆ ಅವ್ಳಿಗೂ ನಂಗು ಸೆಟ್ ಆಗಲ್ಲ ಅಂತ ಗೊತ್ತಾಗೋಕೆ ವರ್ಷಗಳೇ ಬೇಕಾಯ್ತು ಗುಡ್ ಬೈ ಹೇಳಲೇ ಬೇಕಾಯ್ತು....
ಇಷ್ಟೆಲ್ಲ ಕಥೆ ಕೇಳಿದ್ ಮೇಲೆ ಅವಳು ಯಾರು ಅಂತ ನಿಮಗೂ ಡೌಟು ಅಲ್ವಾ ಇಷ್ಟೆಲ್ಲ ಹೇಳಿ ಅವಳು ಯಾರು ಅಂತ ಹೇಳ್ದೆ ಇರ್ತಿನಾ....
"ಅವಳೇ ಕ್ರಿಕೆಟ್"
First Crush First Love❤
Its my time to Quit Cricket
Story End......-