ಬೆಳಗೆದ್ದು ಕಣ್ಣುಜ್ಜಿ ದೇವರ ಫೋಟೋ ನೋಡುವ ಬದಲು ಆಕಸ್ಮಿಕವಾಗಿ ಅಮ್ಮನ ಮುಖ ನೋಡಿದೆ, ತಕ್ಷಣ ಮತ್ತೆ ಮಲಗಿ ಎದ್ದು ದೇವರ ಫೋಟೋ ನೋಡು ಎಂದೇಳಿ ಕೋಣೆಗೆ ಹೋದಳು. ಮುಂಜಾನೆ 4 ಗಂಟೆಗೆ ಎದ್ದು ನಮಗಾಗಿ ಶ್ರಮೆಪಡುತ್ತಿದ್ದ ಅವಳಿಗಿಂತ ಬೇರೆ ದೇವರ ಫೋಟೋ ಬೇಕೇ?
😊😊😊-
ಮನದಲ್ಲೆಷ್ಟೋ ಭಾವನೆಗಳು ತಂತಾನೆ ಹುಟ್ಟಿ
ತಂತಾನೆ ಸಾಯತೊಡಗಿವೆ,
ಹೀಗಾಗಲೇ ನೊಂದಿರುವ ಜೀವವೆಂಬ ಅನುಕಂಪ ಅವುಗಳಿಗೆ.-
ಕಾಣದೂರಿಗೆ ಪಯಣಿಸಲು ಹೊರಟ ನನಗೆ ಅರಿವಾಯಿತೊಂದು,
ನನಗೆ ನೋವ ಮಾಡಿದವರು ಆತ ಕೊಟ್ಟವರಲ್ಲ,
ನಾ ಬಯಸಿದವರೆಂದು.
-- ಅನಾಮಿಕ 💯-
ಕಾಯುತಿಹುದು ಕಡಲ ದಾರಿ
ಬರುವೆನೆಂದು ಹರುಷ ತೋರಿ,
ಸೇರಿಬಿಡುವೆ ಕಡಲನೊಡಲ
ಮರೆಮಾಡಿ ನನ್ನ ಭಾವನೆಗಳ,
ಅತ್ತತ್ತು ಉಕ್ಕಿ ಹರಿವೆ ನನ್ನ ನೋವ ನೆನೆಸಿ,
ಅಲ್ಲು ಬಯಕೆಯುಂಟು ಹುಣ್ಣಿಮೆಯ ಚಂದ್ರನರಸಿ.
-- ಅನಾಮಿಕ 💯-
ಬೆಳಗಾಗುವದಕ್ಕಿಂತ ಮುಂಚೆ ಏಳುವವರೇ, ಹೊತ್ತು ಮೀರಿ ಮಲಗುವವರೇ, ನೀವು ಆಹಾರಕ್ಕಾಗಿ ಇಷ್ಟು ಕಷ್ಟಪಡುವದು ವ್ಯರ್ಥ; ಆತನು(ದೇವರು) ಅದನ್ನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಕೊಡುತ್ತಾನೆ.
-ಕೀರ್ತನೆಗಳು 127:2 (ಬೈಬಲ್)-
ಮಾತಿನಲ್ಲು, ಮೌನದಲ್ಲೂ
ಅರ್ಥಮಾಡಿಸಲಾಗದ ಭಾವನೆಗಳನ್ನ
ಸಾವಾದರೂ ಅರ್ಥಮಾಡಿಸಬಹುದೋ ಏನೋ.-
ಹೆಣ್ಣು ನೀರಿನಂತೆ ಅಮೂಲ್ಯಳು,
ಬೆಂಕಿಯಷ್ಟೇ ಪವಿತ್ರಳು,
ಗಾಳಿ, ನೀರು, ಬೆಳಕು
ಉಚಿತವಾಗಿ ಸಿಗುವಂತೆ ಯಾವುದೇ ಸ್ವಾರ್ಥವಿಲ್ಲದೆ,
ಸೂರ್ಯ-ಚಂದ್ರರು ತಮ್ಮ ಕೆಲಸವನ್ನ
ನಿಷ್ಠೆಯಿಂದ ಮಾಡುವಂತೆ,
ಹೆಣ್ಣು ಜವಾಬ್ದಾರಿಗಳನ್ನ ನಿರ್ವಹಿಸುವಳು,
ಕೆಲವು ಸಲ ಕಡಲ ಸೇರಲು
ಆತೊರೆದು ಓಡವಂತ ನದಿಯಂತೆ ಚಂಚಲಳು,
ಪ್ರೀತಿ ತೋರಿದರೆ
ಪುಷ್ಪವಾಗಿ ಕಾಲ ಕೆಳಗೂ ಇರುವಳು,
ನೋಯಿಸಿ ನಿಂದಿಸಿದರೆ
ಹೆಣದ ಮೇಲಿನ ಹಾರವಾಗುವಳು,
ಅವಳ ಮನ ಫಲವತ್ತಾದ ಭೂಮಿ,
ಕೆಲವರು ಉತ್ತಮ ಬೆಳೆ ಬೆಳೆಯುವರು,
ಕೆಲವರು ಮುಳ್ಳು ಗಿಡಗಳನ್ನು ನೆಟ್ಟು
ಅದನ್ನು ಹಾಳು ಮಾಡುವರು.
ಅವಳು ದಟ್ಟವಾಗಿ ಬೆಳೆದು ನೆರಳು ಕೊಡುವ ಮರ,
ತಾ ಶ್ರಮಿಸಿ ಇತರರ ಕ್ಷೇಮವ ಬಯಸುವವಳು,
ಬದುಕಿನುದ್ದಕ್ಕೂ ತನ್ನ ಜೀವವ ತೇದು,
ಕೊನೆಗೆ ಚಿತೆಗೂ ಕಟ್ಟಿಗೆಯಾಗಿ ಇತರರಿಗೆ
ಉಪಯೋಗವಾಗುವ ಆ ಮರದಂತೆ
ಸಾಯುವಾಗಲೂ
ತನ್ನ ಮನೆಯ ಹರಸಿ ಹೋಗುವಳು.
-- ಅನಾಮಿಕ 💯-
Friends value ಗೊತ್ತಿಲ್ದೆ ಇರೋ ಅಯೋಗ್ಯರೆಲ್ಲಾ ಇವತ್ತು 'Friendship Day' ವಿಶ್ ಮಾಡ್ತಾ ಇದಾರೆ 🤦♂️🤦♂️
-
ಹಣೆಬರಹದ ನೆಪವೊಡ್ಡಿ
ಸಹಿಸಿಕೊಂಡು ಬಂದದ್ದೇ ಹೆಚ್ಚು,
ಇನ್ನೆಷ್ಟರ ವರೆಗೆ ಈ ಹುಚ್ಟುತನ ?-