ಕಾಲಕ್ಕೆ ತಕ್ಕಂತೆ
ಆಹಾರ ವಿಹಾರವೇ
ಆರೋಗ್ಯ..!
-
ಶುರುವಾದಗಿನಿಂದ ಕಳೆದೊದೆ ನಾ ನನ್ನಿಂದ..!!
ಅದ್ಭುತ ಬರಹಗಾರರು ನೀವು.
ನಿಮ್ಮ ಬರಹದ ಆತ್ಮ ಸೌಂದರ್ಯ ನೋಡಿದರೆ ಮನದ ಅಂಧಕಾರ ಕಳೆದು ಜ್ಞಾನದ ಬೆಳಕು ಮೂಡುವದು.!
ತುಂಬಾ ಚೆನ್ನಾಗಿ ಬರೆಯುತ್ತಿರಾ . ಹೀಗೆಯೇ ಮುಂದುವರೆಸಿ..!!-
ಧನ್ಯವಾದಗಳು ರವೀಂದ್ರನಾಥರಿಗೆ,
ಬರಹದಲ್ಲಿ ಭಾವಗಳ ಚಲನೆ ತುಂಬಾ ವೇಗವಾದದ್ದು .ಆ ವೇಗ ಬೆಳಕಿಗೂ ಇಲ್ಲ ಅನಿಸುತ್ತದೆ. ಭಾವದ ಅಭಾವ ಬರಹದಲ್ಲಿ ಬರದ ಹಾಗೆ ,ಬರಹದಲ್ಲಿ ವೇಗ ಇರಲೇಬೇಕು. ಒಮ್ಮೆ ಮಿಂಚಿ ಹೋದ ವಿಚಾರ ಬರಹದಲ್ಲಿ ಮೂಡಿಸುವುದು ಅಸಾಧ್ಯ. ಕುದುರೆಯ ರೇಸಿನಂತೆ ಓಡುವ ವಿಚಾರಗಳಿಗೆ ಪದಗಳ ಲಗಾಮು ಹಾಕಲು ಅಷ್ಟೇ ವೇಗ ಬೇಕಾಗುತ್ತದೆ.-
ನಿನ್ನಂಥೆ ನಮಗೂ ಕಲಿಸಿಕೊಡು
ಅಂತರ್ ದೃಷ್ಟಿಯಿಂದ
ಬಾಳಿನ ಆಗುಹೋಗುಗಳನ್ನು ನೋಡಿಕೊಳ್ಳಲು.
ಆಗ ಸದಾ ನಾವು ಮಾಡುವೆವು
ನಿನ್ನದೇ ಧ್ಯಾನ.-
ನೀ ಮೌನವಾದೇ
ಆದರೆ ನನಗ್ಯಾಕೆ
ನೀಡಿದೆ ಈ ವೇದನೆ.
ನೀ ಧ್ಯಾನವಾದೇ
ಆದರೆ ನನಗ್ಯಾಕೆ
ನೀಡಿದೆ ಈ ರೋಧನೆ
ನಾ ಮೌನ ಧ್ಯಾನವಾಗದ
ವಿನಃ ತೋರದು ನಿನ್ನಯ
ಅಂತರಂಗದ ಭಾವನೆ.-
ನೀನು ಜೊತೆ ಇರುವ ವೇಳೆ
ನಲಿಯುದೆನ್ನ ಮನಸು
ನೀ ಮಾತಾಡದೆ ಮೌನವಾದಾಗ
ಮುನಿಯುವುದೆನ್ನ ನನ್ನಿ ಮನಸು
ಮಾತಾಡು ನಿನ್ನ ಮಾತು ಕೇಳಲು
ಕಾಯುತ್ತಿದೆ ನನ್ನೀ ಮನಸು
ನಿನ್ನ ಧನಿಯ ಜೇನ ಹನಿಗೆ
ಚಡಪಡಿಸುವ ಮನಸು
ನಿನ್ನ ಕೂಗಿ ಕರೆಯುವದು
ನನ್ನೀ ಮನಸು..!! 😍-
ದೇವನ ಮನೆ ಇದು
ಈ ಜಗವೆಲ್ಲ
ಬಾಡಿಗೆದಾರರು
ನಾವು ನೀವೆಲ್ಲ.
ಇಷ್ಟೇ ದಿವಸ ಇಷ್ಟೇ ವರುಷ
ಇರಬೇಕೆನ್ನುವ ಕಟ್ಟು ಕರಾರು
ಎನಿಹುದೇನೊ ಅರಿತವರಾರು
ದೇವನ ಮನೆ ಇದು
ಈ ಜಗವೆಲ್ಲ
ಇಗಲೇ ಬಿಡು ಎನ್ನಿ ಬಿಡಬೇಕಲ್ಲ
ನಾವಾಗೀಯೂ ಸಹ ಬಿಡಬಹುದಲ್ಲ
ನಾನೇ ಹುಟ್ಟಿಸಿದೆ, ನಾನೆ ಕಟ್ಟಿಸಿದೆ
ಎನ್ನುವದಲ್ಲ ಜಂಭದ ಸೊಲ್ಲು
ಅಂತ್ಯಕ್ಕೆ ತಿಳಿಯುವ ಈ ನುಡು ಡೊಳ್ಳು
ದೇವನ ಮನೆ ಇದು
ಬಾಡಿಗೆ ದಾರರು
ನಾವು ನೀವೆಲ್ಲ
ನಮ್ಮಯ ದಿನಗಳು ಮುಗಿಯುತ್ತ ಬರಲು
ಬಿಡು ಎಂದು ಈಶನು ಆಜ್ಞಾಪಿಸಲು
ಇನ್ನು ಇರುವೆ, ನಾನಿರಲಾರೆ
ಎಂದರೆ ನಡೆಯದು ಈ ಪ್ರತಿಕಾರ
ಬಿಡಿಸುವ ದಿವಿಸ ದವಣಧಿಕಾರ
ದೇವನ ಮನೆ ಇದು
ಈ ಜಗವೆಲ್ಲ
ಇಷ್ಟನ್ನು ಕೊಟ್ಟಿಹ ಆತನ ಕರುಣೆ
ಒಂದಿಷ್ಟಾದರೂ ಉಪಕಾರ ಸ್ಮರಣೆ
ತಿಳಿದರೆ ಒಳಿತೊ,ಬಾಡಿಗೆ ಸಲ್ಲಿತೊ
ಈ ನವಮಿದವಿದು ದೇವನ ಅಸ್ತಿ
ಈ ಜಗವೆಲ್ಲ ದೇವನ ವಸತಿ
ದೇವನ ಮನೆ ಇದು
ಈ ಜಗವೆಲ್ಲ.
-
ನದಿಯ ಅಲೆಗಳ ವಿರುದ್ಧ ಉತ್ಸಾಹವಾಗಿ ದೋಣಿ ನಡೆಸಲು , ತುಂಬುವ ಮನೋಬಲವೆ ಪ್ರೋತ್ಸಾಹ
-