ಆ ದೇವನಿತ್ತ ಉಡುಗೊರೆ
ಈ ಮುದ್ದು ಕಂದನಾಸರೆ
ಎನ್ನ ತಾಯ ಪ್ರತಿರೂಪ ನೀನು
ನಿನ್ನ ನಿಷ್ಕಲ್ಮಶ ಕಾಳಜಿಗೆ ಬೆರಗಾದೆನು ನಾನು
ಚಿರಕಾಲ ಸುಖವಾಗಿರು ಕಂದ
ನಿನ್ನ ನಗುವೇ ಎನ್ನ ಬಾಳಿಗಂದ
-
Amrutha Arasa
(ಅರಸಿ)
207 Followers · 74 Following
Joined 16 July 2018
12 NOV 2024 AT 19:47
24 JUL 2024 AT 19:28
ಜಗಳಗಂಟಿ ಎನ್ನುವನವನು
ಎನ್ನ ತಲೆ ಕೂದಲ್ಹಿಡಿದೆಳೆದು,
ಮಾತು ಮಾತಿಗೂ ಹೀಗಳೆಯುವನವನು
ತನ್ನವಳೆಂಬ ಭಾವವನ್ನೂ ಜರಿದು..-
16 NOV 2022 AT 21:39
ಬೇಡವೆಂದಷ್ಟೂ ಬಳಿ ಬರುವವು ನೋವುಗಳ ಸರತಿ ಸಾಲು
ಬರಡಾಗಿಹ ಬಾಳಿನಲಿ ನಲಿವೆಂಬುವುದೊಂದು ಸೋಲು-
8 NOV 2022 AT 15:52
ನಗುವ ಮಗುವ ಮೊಗವ ಕಂಡು
ಶಶಿಯು ನಾಚಿ ಮೋಡ ಹೊಕ್ಕು
ಮಿನುಗುತಾರೆ ನಲಿಯುತಿರಲು
ಮಂದಹಾಸದಿ ಗಾಳಿಯೊಂದು
ಹಾಡುತ್ತಿತ್ತು ಲಾಲಿ ಹಾಡು
-
4 SEP 2022 AT 11:16
ದೈಹಿಕ ಸುಖಕಷ್ಟೇ ಸೀಮಿತವಲ್ಲ ದಾಂಪತ್ಯ
ಏಳು ಬೀಳುಗಳೊಳ್ ಜೊತೆಯಾಗಿ ಸಾಗುವುದೇ ದಾಂಪತ್ಯ
-