ಇರಬಲ್ಲೆ ನೀನಿರದೆ.
ಇದ್ದೇನು ಮಾಡಲಿ?-
ಬೀಳದ ಮಳೆಯ ಹನಿ:
ಹರಿವಿಗೆ , ಆವಿಗೆ?
ದೇಹಕ್ಕೆ, ದಾಹಕ್ಕೆ?
ಮಣ್ಣಿಗೆ , ಹಣ್ಣಿಗೆ?
ಚಿಗುರಿಗೆ , ಬೇರಿಗೆ?
ಊರಿಗೆ, ಕಾಡಿಗೆ?
ನನಗೆ, ನಿನಗೆ?
ಇಂದಿಗೆ, ನಾಳೆಗೆ?
ಯಾರಿಗೆ?-
ಹೇಗಿರಬೇಕು?
ಎಲ್ಲ ಹೋಗಳುವಂತೆ? ಎಲ್ಲೂ ಹೊಳೆಯದಂತೆ?
ನಗಿಸುವಂತೆ? ನಗುವಾಗುವಂತೆ?
ಮಗುವಿನಂತೆ? ಮರುಗದಂತೆ?
ಕಲ್ಲಿನಂತೆ? ಕಡಲಿನಂತೆ?
ಚಿಗುರಿನಂತೆ? ಚಿಲುಮೆಯಂತೆ?
ನೆನಪಾಗುವಂತೆ? ನೆಪವಾಗುವಂತೆ?
ಅವರಂತೆ? ಇವರಂತೆ?
ಇರುವಂತೆ? ಇದ್ದೂ ಇಲ್ಲದಂತೆ?
ಹೇಗಿರಬೇಕು?-
I'm not worried that, you don't know.
I'm worried for; you don't know that, you don't know.-
I like to face the sky with eyes closed and arms open, when it rains.
I feel as if all the raindrops are falling from the sky just to hug me.-
ಬಿಟ್ಟು ಹೋಗುವುದಿಲ್ಲ ಯಾರೂ;
ನಮ್ಮಲ್ಲೇ ಉಳಿದು ಬಿಡುತ್ತಾರೆ.
ನೆನಪುಗಳಾಗಿ, ಪಾಠಗಳಾಗಿ, ತಿರುವುಗಳಾಗಿ;
ಮರುಗೊ ಅಳುವಾಗಿ, ಮುಗುಳು ನಗೆಯಾಗಿ
ಕೆಲವೊಮ್ಮೆ ಪೂರ್ತಿ ಜೀವನವಾಗಿ!!-
ಜೀವನ-ಜಾರುಬಂಡೆ
ಅಷ್ಟು ಕಷ್ಟಪಟ್ಟು ಮೇಲೇರಿ,
ಸ್ವಲ್ಪ ನಿಂತು ಕೆಳಗೆ ನೋಡಿದರೆ
ಅನಾಯಾಸವಾಗಿ ಜಾರಿ,
ಸೇರುವುದು ಶುರುವಾದಲ್ಲೇ!!-
Don't get fooled by what you see;
People tend to advertise always the best about themselves.-