Alien Somanna   (Alien Somanna)
126 Followers · 175 Following

Don't try to know me more, I may abduct you! 👽✌️
Joined 5 May 2018


Don't try to know me more, I may abduct you! 👽✌️
Joined 5 May 2018
28 NOV 2023 AT 21:25

ನಾಚಿಕೆ ಬಿಟ್ಟ ಹೃದಯ,
ಮಾನ ಮರ್ಯಾದೆಗೆ ಹೆದರದೆ,
ಪ್ರೀತಿಗಾಗಿ ಅಂಗಲಾಚಿ ಬೇಡಿತು,
ಕರುಣೆ ಇಲ್ಲದವಳ ಬಳಿ ... 🥺

-


28 AUG 2019 AT 13:18

ಹೇ ಹುಡುಗಿ....
ನಾನಿಂದು ನಿನ್ನ ಪ್ರೆಮ ಪೀಡಿತ
ನನ್ನವಳಂತು ನೀ ಖಂಡಿತ
ನನಗರಿವಿಲ್ಲ ಏನಿದ್ದಕ್ಕೆ ಪ್ರೇರೇಪಿತ
ನೀನಿಲ್ಲದೆ ನಿಲ್ಲುತ್ತೆ ನನ್ನ ಎದೆಬಡಿತ..!

ನನ್ನನೇಕೆ ಕಾಡಿಸುತೀಯ ಓ ಹೆಣ್ಣೇ
ಮರೆಯಲಾರೆ ಕಣ್ಣಲ್ಲಿ ನೀ ಕೊಟ್ಟ ಸನ್ನೆ
ನಿನ್ನಾ ಜೋಡಿಸಿರುವ ಹಲ್ಲುಗಳು ದಾಳಿಂಬೆ ಹಣ್ಣೇ
ನೀನಿರದೆ ಬದುಕಲಾರೆ ಭೂಮಿ ತಾಯಾಣೇ...!

ಮನದಲಿರುವುದನ್ನು ಹೇಳುವಾಸೆ ಚೆಲುವೆ
ನನಗಿಂತ ಮೊದಲು ನೀನೇ ಹೇಳು ನನ್ನೋಲವೆ
ಕಣ್ಣ ನೋಟದಲ್ಲೇ ನೀ ನನ್ನ ಸೆಳೆವೆ
ನಿದ್ದೆಯಲ್ಲೊ ನಾ ನಿನ್ನೆಸರೇ ಕನವರಿಸುವೆ...!

ನೀನೊಂದು ಮುಗ್ದತೆಯ ‌‌‌‌ಮಂಪರು ಗೊಂಬೆ
ನನ್ನ ಮನದಾಸೆಯ ಉರ್ವಷಿ, ಮೇನಕೆ, ರಂಬೆ
ಓ ಹುಡುಗಿ,
ನೀನಿರದೆ ನಾನಾಗುವೇ ಬಾಡಿದ ಮರದ ಕೊಂಬೆ..!

-


19 SEP 2019 AT 20:48



ಮೌನ : ಏಕಾಂತದ ಸಂಗಾತಿ :
[ಶೀರ್ಷಿಕೆ ಓದಿ]

-


28 AUG 2019 AT 22:42

ಕಣ್ಣ ಅಂಚಿನ ಕರೆಯೋಲೆ, ಕಣ್ ಮುಚ್ಚಿತ್ತು ಮೊದಲೇನೆ
ನಾ ಮರೆಯದ ಉಯ್ಯಾಲೆ, ನಿಂತಿದೆ ಗಾಳಿ ಇಲ್ಲದೆ
ಮೋಡವಿರದ ಆಕಾಶ, ಅದು ಹೇಗೆ ತಾನೇ ಕರಗುವುದೋ
ಉಸಿರೇ ಇರದ ದೇಹದಲ್ಲಿ ಅದು ಹೇಗೆ ಜೀವ ಅರಳುವುದೋ
ಮರೆಮಾಚುವ ಮಾಯೆ ನಿನ್ನಲ್ಲಿ, ಅದು ಹೇಗೆ ಇಂದು ತಿಳಿಯಲಿ
ನೀನೆ ಇರದ ನನ್ನಲ್ಲಿ ನಾ ಹೇಗೆ ಇಂದು ಬೆರೆಯಲಿ.

-


28 AUG 2019 AT 15:35

ಮೂರು ವರ್ಷದ ಪುಟ್ಟ ಕಂದ,
ಕೊಟ್ಟಿದ್ದು ಮೂವತ್ತು ವರ್ಷದ ಅನುಭವ.
ಎಲ್ಲರು ಬಿಟ್ಟು ಹೋದಾಗ ಜೊತೆಯಲ್ಲಿ ಇದ್ದಳು,
ದುಃಖದಲ್ಲಿ ಇದ್ದಾಗ ಹೇಗೋ ನಗಿಸಿದಳು,
ಅತ್ತಾಗ ಕಣ್ಣೀರು ಒರೆಸಿದಳು,
ಇವಳೇ ನನ್ನ ಊಟ, ಇವಳೇ ನನ್ನ ಪಾಠ,
ದಿನನಿತ್ಯ ಇವಳದ್ದೇ ತುಂಟಾಟ,
ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಗುರುವು ಇವಳೇ,
ಗೆದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವವಳು ಇವಳೇ,
ಇವಳೇ ನನ್ನ ಹೃದಯಸ್ಪರ್ಶಿ, ಇವಳೇ ನನ್ನ ಮಾರ್ಗದರ್ಶಿ,
ಇವಳಿಂದಲೇ ಮರುಜನ್ಮ ಪಡೆದವ ನಾನು. 

ಹುಟ್ಟು ಹಬ್ಬದ ಶುಭಾಶಯಗಳು ಕಂದ! ❤️

-


28 AUG 2019 AT 13:48

ನನ್ನ ಕನಸು ನನ್ನ ಭಾಷೆ ನಿನಗಾಗಿಯೇ,
ನನ್ನ ಎದೆಯ ಈ ಬಡಿತ ನಿನಗಾಗಿಯೇ,
ನೀನು ನನ್ನ ಜೊತೆಯಲ್ಲಿಯೇ ಇರು ಯಾಕಾಗುವೆ ಅಪರಿಚಿತೆ,
ಪ್ರೀತಿಯಿಂದ ನನ್ನ ಒಮ್ಮೆ ನೋಡು, ನನಗಷ್ಟೇ ಸಾಕು. 

ಏಕಾಂತ ಏಕಾಂತ ಶುರುವಾಯಿತು ಶುರುವಾಯಿತು,
ಕಣ್ಣು ನನ್ನ ನಿನ್ನ ನೆನಪಿನಲ್ಲಿ ಮುಳುಗಿಹೋಯಿತು ಮುಳುಗಿಹೋಯಿತು.

-


27 AUG 2019 AT 18:16

ನಿನ್ನ ಚೆಂದದ ಮೂಗವ ತೋರಿ, ಮೂಗುತಿ ಕಾಂತಕಲ್ಲಿನಿಂದ ನನ್ನ ದರದರನೆ ಎಳೆಯಬೇಡ.
ನಿನ್ನ ಕಣ್ಣ ತೀಕ್ಷ್ಣತೆಯನ್ನೇ ಈಟಿಯನ್ನಾಗಿಸಿ ನನ್ನ ಪುಟ್ಟ ಎದೆಯ ಗೂಡಿಗೆ ಇರಿಯಬೇಡ.
ಪ್ರತಿರಾತ್ರಿ ಕನಸಲ್ಲಿ ಬಂದು ನಿದ್ದೆ ಕೆಡಿಸುವಂತೆ ಕಾಡಬೇಡ.
ಹಗಲುಗನಸಿನಲ್ಲೂ ನುಸುಳಿ ಬಂದು ಅದೇನೋ ಹೇಳಿ ಮಾಯವಾಗಬೇಡ.
ತುಟಿಯಂಚಿನ ನಗುವಿನಲ್ಲೇ ನನ್ನ ಎಲ್ಲಾ ಪ್ರಶ್ನೆಗೂ ಉತ್ತರಿಸಬೇಡ.
ಯಾವಾಗಲೂ ಹೀಗೆ ನೀನು ನನ್ನ ಪ್ರಶ್ನೆಗಳಿಗೆ ಅಡ್ಡ ಗೋಡೆಯ ಮೇಲಿನ ದೀಪದಂತೆ ಉತ್ತರಿಸಿ ಗೆಲ್ಲಬೇಡ.
ಒಮ್ಮೆಯಾದರೂ ಸೋತುಬಿಡು, ನನ್ನ ಪ್ರೀತಿಯಲ್ಲಿ!!!

-


27 AUG 2019 AT 15:08

ದೇವರೇ,
ಮರುಜನ್ಮ ಅಂತ ಏನಾದರು ಇದ್ದರೆ, ನನ್ನ ಒಂದು ಕೋರಿಕೆ ಈಡೇರಿಸಬೇಕು.
ಈ ಜನ್ಮದ್ದಲಂತು ಅವಳು ಸಿಗಲಿಲ್ಲ, ಮುಂದಿನ ಜನ್ಮದಲ್ಲಾದರೊ ಅವಳ ಬಿಸಿ ಉಸಿರ ಹೀರಿಕೊಂಡು ಚಿಗುರುವ ಮರವಾಗಿಸು ದೇವಾ. 😊

-


27 AUG 2019 AT 14:40

ನೀವು ಮನಸಾರೆ ಪ್ರೀತಿಯಿಂದ ಹಣೆಯನ್ನು ಚುಂಬಿಸಿದರೆ; ಅದು ಆತ್ಮವನ್ನೇ ಬಿಗಿದು ಅಪ್ಪಿಕೊಂಡಂತೆ ಭಾಸವಾಗುತ್ತದೆ.

-


26 AUG 2019 AT 15:15

ಇದೇನಾ ನಂಬಿಕೆ ??
[ಶೀರ್ಷಿಕೆ ಓದಿ]

-


Fetching Alien Somanna Quotes