ಬದುಕಿನ ಪಯಣದಲಿ,
ತಿಳಿಯದ ಹಾದಿಯಲಿ,
ಸಂತಸದ ಸೆಲೆಯಲಿ,
ದಿನಗಳು ಸಾಗುತಿರಲಿ.
ಜೀವನದ ಅಲೆಯಲಿ,
ಏರಿಳಿತಗಳ ಬಲೆಯಲಿ,
ದೃಢತೆಯ ಜೊತೆಯಲಿ,
ದಿನಗಳು ಸಾಗುತಿರಲಿ.-
never ending thoughts.
Sometimes which
Pushes the patience,
Draws the disturbance,
Shines the shallowness,
Reveals the imbalance.
Trying to be liberate
From irking thoughts,
Yet it holds the power
To remain entangled.-
ನನ್ನ ಭಾಷೆ ನನ್ನ ಗರಿಮೆ,
ಭಾವನೆಗಳ ಅಭಿವ್ಯಕ್ತಿಗೆ,
ಬದುಕಿನ ಬೆಳವಣಿಗೆಗೆ,
ಬುನಾದಿಯೇ ಭಾಷೆ,
ನನ್ನ ಕನ್ನಡ ನನ್ನ ಹೆಮ್ಮೆ.-
ಮನಸ್ಸಿಗೆ ಮುದ ನೀಡುವ, ಸೌಹಾರ್ದತೆಯ ಸಾರುವ,
ಸಂತಸದಿ ಸರ್ವರನ್ನೂ ಸಹಭಾಗಿಗಳನ್ನಾಗಿಸುವ ಸಂಭ್ರಮ.-
ಬದುಕಿನ ಕವಲುದಾರಿಯಲಿ,
ಸಂಕಷ್ಟಗಳ ಸುಳಿಗಳಲಿ,
ಮನೋಸ್ಥೈರ್ಯದ ಆಸರೆ,
ಧೈರ್ಯಕ್ಕಿರುವ ಶಕ್ತಿಸೆಲೆ,
ವಿಘ್ನ ವಿನಾಶಕನಿಗೆ ನಮೋ ನಮಃ.-
ಮಹಿಳೆಯೆಂದರೆ ಬರಿ ಪದವಲ್ಲ,
ಅನಂತ ಶಕ್ತಿಯ ಮೂಲಾಧಾರ,
ತಾಳ್ಮೆ, ಮಮತೆಯ ಆಗರ,
ಧೈರ್ಯ, ದೃಢತೆಯ ಸಾಗರ.
ತನ್ನಾಸೆಗಳ ಅಡಗಿಸಿ,
ಸಂಸಾರದ ಅಡಿಪಾಯವಾಗಿ,
ನಿಸ್ವಾರ್ಥ ಮನಸಿನಲಿ,
ಬದುಕು ರೂಪಿಸುವ ಸಾಧಕಿ.-
ಮನಸ್ಸಿನ ಆಳದೀ ತಮಸ್ಸಿನ ಕುರುಹು,
ದೀಪದ ಹೊಳಹಲಿ ಜ್ಞಾನದ ಹರಿವು,
ಕಾಣದ ಶಕ್ತಿಯ ಸೆಳೆತದೀ ಬದುಕು,
ಬದಲಾಗಲು ಬೆದರಿಹ ಜೀವವು ನೋಡಾ...
-
ಆಗು ನೀ ಅನಿಕೇತನ.
ಎಂದಿಗೂ ನೆನೆಯುವಂತಹ ಹಲವಾರು ಕೃತಿಗಳನ್ನು ನೀಡಿದ ಕವಿ ಕುವೆಂಪು.-
I have not trusted people so soon,
and not be kind and more supportive.
Because the after behaviour of the people,
when they forget leads to regret in life.
-
ನೋವಿರಲಿ ನಲಿವಿರಲಿ,
ಕಾಲವಿದು ತಿರುಗುವ ಚಕ್ರ.
ಯಾವ ಕ್ಷಣವೂ ಶಾಶ್ವತವಲ್ಲ,
ವ್ಯರ್ಥಯಿಸದೆ ಸಾಗಲಿ ಜೀವನ.-