ನೆಚ್ಚಿಸಲು ನಾನಿಲ್ಲ
ನಿನ್ನಿಚ್ಛೆಯನರಿತು
ನೋವು - ನಲಿವಿನೊಳು ನಡುವೆ
ನಿನ್ನಯ ನಸುನಗೆಗಾಗಿ
ನಿನ್ನೊಂದಿಗೆ ನಾನೊಬ್ಬನಾಗಿರುವೆ.-ಎಜೆ
-
ಬಿಡುವಿದ್ದಾಗೆಲ್ಲ
ಆತ್ಮೀಯರೊಟ್ಟಿಗೆ
ಸಮಯ ವಿನಿಯೋಗಿಸಿ
ಯಾಕಂದ್ರ ಹೊಡೆದುಕೊಳ್ಳುವ
ಈ "ಎದೆ ಬಡಿತ"
ಯಾವಾಗ ಬೇಕಾದಾಗ
ತನ್ನ ಕಾರ್ಯಕ್ಕೆ ಪೂರ್ಣವಿರಾಮ ನೀಡಬಲ್ಲದು.
ಹಂಗಾಗಿ ಇರುವ ಗಳಿಗೆಯ ಸಂಭ್ರಮಿಸಿ
ಸಾಗಬೇಕಷ್ಟೇ
ನನಗಾಗಿ ಅಲ್ಲದಿದ್ದರೂ
ನನ್ನವರೇಸಿಕೊಂಡ "ಜೀವಗಳಿಗಾಗಿ".-ಎಜೆ-
ಅದೆಷ್ಟೇ ಬಲಶಾಲಿ;
ಉಳ್ಳವನಾಗಿದ್ರು,
ಮನಸ್ಸಿನ ಆಟ(Mind Game )ದ
ಮುಂದೆ ನೆಲೆ ಕಳೆದುಕೊಳ್ಳುವುದರಲ್ಲಿ
ಎರಡು ಮಾತಿಲ್ಲ.-ಎಜೆ-
ಅವಶ್ಯಕತೆ ಇರುವಾಗ
"ಹೌದೌದು" ಎಂದು ದುಂಬಾಲು ಬೀಳುವರಿಲ್ಲಿ ;
ಅದೇ ಅವಶ್ಯಕತೆ ಮುಗಿದಾಗ,
ಗೊತ್ತಿದ್ದವರನ್ನೇ ಗೊತ್ತಿಲ್ಲದಂತೆ
ಇದ್ದು ಎದುರು ಕಂಡಾಗ "ಮುಸುಡಿ"
ತಿರುಗಿಸಿಕೊಂಡು ಹೋಗುವವರೆ ಹೆಚ್ಚು.-ಎಜೆ-
ಬದುಕು ಮತ್ತೊಬ್ಬರ ಅನತಿಯಂತೆ ಸಾಗಬಾರದು.
ನಾವು ಕೈಗೊಳ್ಳುವ
ಪ್ರತಿ ನಿರ್ಧಾರಗಳು ಎದುರಿಗಿರುವವರು
ಸಹ ಕಂಡು
ತಮ್ಮ ತಮ್ಮ ಜೀವನದಲ್ಲಿ
ಅಳವಡಿಸಿಕೊಂಡು ಸಾಗುವಂತಿರಬೇಕು.
ಅದುವೇ ಪರಿಪೂರ್ಣ ಬದುಕಿಗೆ ಕೈಗನ್ನಡಿ.-ಎಜೆ-
ಏನೇ ಇದ್ರೂ ನೇರ ನುಡಿ ಇದ್ರೆ
ಬದುಕು ತೆರೆದ ಕನ್ನಡಿಯಂತಿರುತ್ತೆ
ಅದು ಬಿಟ್ಟು ಕೆಲವೊಮ್ಮೆ ಕೆಲವೊಂದು
ವಿಷಯಗಳಲ್ಲಿ ಮೌನ ತಾಳಿದಾಗ
ಬೂದಿ ಮುಚ್ಚಿದ ಕೆಂಡದಂತೆ
ಅವರವರ ಮನಸಾಕ್ಷಿಯನ್ನೇ
ಅನುಕ್ಷಣವೂ ಸುಡುತ್ತೆ.-ಎಜೆ-
ಕಷ್ಟಗಳು ಬಂದಿರಬಹುದು
ಕುಗ್ಗಲು ಹೋಗಬೇಡ
ಅದೆಷ್ಟೇ ಕಠಿಣವಿದ್ದರೂ
ಎದುರಿಸಿ ನೋಡು
ಗೆದ್ದರೆ ನೀ ಸುತ್ತಲಿರುವರಿಗೆ
ಸ್ಫೂರ್ತಿಯ ಚಿಲುಮೆಯಾದರೂ
ಆಗಬಹುದು ಅದು ಬಿಟ್ಟು
ನನ್ನಿಂದ ಆಗೋದಿಲ್ಲ ಎಂದು
ಕೈ ಚೆಲ್ಲಿ ಕುಳಿತರೆ ಆ ಗಳಿಗೆಯೇ
ನಿನಗೆ ನೀನೇ ಮರಣ
ಶಾಸನ ಬರೆದುಕೊಂಡಂತೆ.-ಎಜೆ-
ಪರಿಸ್ಥಿತಿಗೆ ತಕ್ಕಂತೆ ಮನಸ್ಥಿತಿ
ಹೊಂದಿಸಿಕೊಳ್ಳುವುದಕ್ಕಿಂತ
ಅದೆಷ್ಟೇ ಕಠಿಣತೆ ಎದುರಾದರು ಮೆಟ್ಟಿ ನಿಲ್ಲುವೆ ಎಂಬ ಮನಸ್ಥಿತಿ ನಿಮ್ಮದಾದರೆ ಎಲ್ಲವನ್ನು ಗೆದ್ದು ಬೀಗಬಹುದು.-ಎಜೆ-
ಅಲ್ಲಗಳೆದವರು ಮುಂದೊಂದು
ದಿನ ಅಳ್ಳಾಡಿ ಹೋಗುವಂತೆ
ಬೆಳೆದು ನಿಂತಾಗ
ಮಾತ್ರ ಬದುಕಿಗೊಂದು
ಪರಿಪೂರ್ಣ ಅರ್ಥ ಬರುವುದರಲ್ಲಿ
ಎರಡು ಮಾತಿಲ್ಲ.-ಎಜೆ-
ಮತ್ತೊಬ್ಬರನ್ನು ಪ್ರಶ್ನಿಸುವ ಮುನ್ನ
ನಿನ್ನ ಬಳಿ ಸಮರ್ಥಿಸಿಕೊಳ್ಳುವ
ತಾಕತ್ತು ಗತ್ತಿನ ಜೊತೆ ಜೊತೆಗೆ ಸರಿಯಾದ ವಿಷಯ ಮಂಡನೆಗೆ ತಕ್ಕಂತ "ಉತ್ತರ" ಅನ್ನೋದು ಇದ್ರೆ ಇಲ್ಲಿ ಯಾವನಿಗೂ/ಯಾವಳಿಗೂ ತಲೆ ಬಾಗಿ ನಡೆಯುವ
ಪ್ರಮೇಯವೇ ಬಾರದು.-ಎಜೆ
-