Aishwarya Khandekar   (Aishwarya k)
204 Followers · 14 Following

read more
Joined 22 January 2020


read more
Joined 22 January 2020
28 OCT 2021 AT 22:28

ನಿನ್ನಲ್ಲೇ ನನ್ನ ಜಗವೆಲ್ಲ,

ಮಾತೊಂದ ಹೇಳಲೆ ಮೆಲ್ಲ,

ನೀನಿಲ್ಲದೆ ನಾನಿಲ್ಲ..!!

-


26 OCT 2021 AT 17:41

ನನ್ನ ನಿನ್ನ ಬಂಧವಿದು

ಏಳೇಳು ಜನ್ಮದ್ದು

ನಿನಗೆ ನಾ ನನಗೆ ನೀ

ಈ ಪ್ರೇಮವೇ ಪರಿಶುದ್ಧವಾದದ್ದು

-


25 OCT 2021 AT 23:03

ನಿನ್ನ ಕಾಣದಿದ್ದರೂ

ಅದೇಕೊ ನಿನ್ನ ಮೇಲೆ ಮೋಹ

ಅದೇಕೊ ನಿನ್ನ ಮಾತು ಕೇಳಲು ತವಕ

ನಿನ್ನ ಕಣ್ಮಿಂಚಲ್ಲಿ ಕಳೆದುಹೋಗುವ ಆಸೆ

ನಿನ್ನ ಎದೆಯಲ್ಲಿ ತಲೆಯಿಟ್ಟು ಮಿಡಿತ ಕೇಳುವೆ ಕೂಸೆ

ನಿನ್ನಲ್ಲಿ ನನ್ನ ಹುಡುಕುವ ಆಸೆ

ಆಗುವುದು ಇದೆಲ್ಲ ನನಸೆ

-


21 OCT 2021 AT 19:54

ಅವ್ವ ನೀ ಯಾಕ ಹಿಂಗ..!

ನನ್ನ ನೋಡಿದರೂ ನೋಡದಂಗ ಹೋಗ್ತಿ

ತಿರುಗಿದರೂ ಮಾತಾಡದಂಗ ಕುರತಿ

ಕರೆದರೂ ಕಿವಿ ಕೇಳದಂಗ ನಿಂತಿ


ಅಕ್ಕ ಅಂದರೆ ಅಕ್ಕರೆ ಜಾಸ್ತಿ

ತಮ್ಮ ಅಂದರೆ ತುಸು ಪ್ರೀತಿ ಜಾಸ್ತಿ

ನಾ ಅಂದರೆ ಉರಿದು ಬೀಳ್ತಿ


ಆದರೂ ನಾ ಕೇಳುವೆ ದೇವರಿಗೆ

ಮರುಜನ್ಮವಿದ್ದರೆ ನನಗೆ

ಹಾಕಿಬಿಡು ನನ್ನವ್ವನ ಒಡಲಿಗೆ

-


11 FEB 2021 AT 23:32

ಸದ್ದಿಲ್ಲದೆ

ಮಿಡುಕಾಡಿದೆ

ನಿನ್ನ ಕಾಣದೆ

ಹೃದಯ..

ಗೊತ್ತಿದ್ದರೂ

ತುಸು ಕಾಡಿದೆ

ಹಾಳಾದ

ಈ ಹರೆಯ..

ನೀ ಬರುವ

ದಾರಿಯ

ಕಾಯುವೆ

ನಾ ಬಾಗಿಲ

ಬಳಿ ಬಂದು..

ಹರುಷದಿಂದಲಿ

ನೀ ಬಂದು

ನನ್ನ ಸೇರುವುದೆಂದು..!..

-


20 OCT 2021 AT 19:15

ಯಾರಿಗೂ ಹೇಳಲಾಗದು,

ಭಾವನೆಗಳ ನೂಕಲಾಟ,

ಎಂದೂ ಸಹಿಸಲಾಗದು.

-


19 OCT 2021 AT 22:32

ಚಂದ್ರಮನಿಲ್ಲದ ಕಾನನ

ನಗುವಿಲ್ಲದ ವದನ

ಭಾವನೆಯಿಲ್ಲದ ಮನ

ನಂಬಿಕೆಯಿಲ್ಲದ ಪ್ರೇಮ

ನೀನಿಲ್ಲದ ಜೀವನ

ಅರ್ಥವಿಲ್ಲದ ಯಾನ.

-


3 FEB 2021 AT 23:02

ಬಂದಿದ್ದೆ ನನ್ನೆದೆಯ ದಾಟಿ,

ಮಾಡಿದ್ದೆ ನನ್ನೊಲವ ಲೂಟಿ,

ಆಗಬೇಕಿದೆ ನಾವಿಬ್ಬರು ಜಂಟಿ..!

-


27 SEP 2020 AT 8:09

ಬ್ರಹ್ಮ ಬರೆಯೋ ಹಣೆ ಬರಹಾನ

ತಾಯಿ ಬರೆದಿದ್ದರೆ ಈ ಜಗತ್ತಿನಲ್ಲಿ

ಪಾಪಿಗಳೇ ಹುಟ್ಟುತ್ತಿರಲಿಲ್ಲ

-


10 SEP 2020 AT 15:53

ಮನಸ್ಸಿದ್ದರೂ

ಭಾವನೆಗಳಿಲ್ಲದ

ವೇಶ್ಯೆಯಿವಳು..!


ಹಣವಿದ್ದರೂ

ಗುಣಗಳೇ ಇಲ್ಲದ

ಸಭ್ಯಸ್ಥನಿವ..!


-


Fetching Aishwarya Khandekar Quotes