ಅಘನಾಶಿನಿ   (ದಿವ್ಯ ಭಾರತಿ)
416 Followers · 59 Following

Joined 23 June 2018


Joined 23 June 2018
23 DEC 2023 AT 18:05

ಮೊದಲ ಭೇಟಿ...!
(Continued in caption)

-


9 JUL 2023 AT 1:54

ನಿಶೆಯ
ಹಾಡು - ಪಾಡಿನಿಂದ...!
(Read the caption)

-


25 JUN 2023 AT 23:36

ಬದುಕೆಂದರೆ...

ಭಾಗಶಃ ಚಿರಪರಿತವಾಗುಳಿದುಬಿಡುವ ಅರ್ಧ ತೊಯ್ದ ನಿಟ್ಟುಸಿರು,
ಪ್ರಾಯಶಃ ಶಾಯಿಗೆ ದಕ್ಕಲಿಚ್ಛಿಸದ ಆರ್ದ್ರವಾದ ಕನಸಿನ ಚೂರು!
ಬಹುಶಃ ಒಡೆದು ಬರೆದ ಬಿಸುಪಿರದ ಖಾಲಿ ಅಂಚೆ,
ಮೂಲತಃ ನಿಶೆಯು ಹಡೆದ ಸುಕ್ಕು ಬಿದ್ದ ನೀರಸ ಕವಿತೆ!!

-


17 DEC 2022 AT 1:08

ಅಡವಿಟ್ಟ ಕನಸುಗಳ ಸಮಾಧಿಯೊಂದಿಗಿನ ಸಂಭಾವ್ಯ ಭೇಟಿ
ಮುಸುಕುಹೊದ್ದು ಮಲಗಿದ್ದ ಭಾವಗಳೊಂದಿಗಿನ ಸಂವಾದ
ಮಾಸಿಹೋದ ಸಂಜೆಯೊಳಗೆ ತೇಲಿಬಂದ ಬಿಂಬಗಳ ಹೆಕ್ಕುವಿಕೆ
ಬದುಕು ಬಯಲಾಗಲು ಆಯ್ದುಕೊಂಡ ಆಪ್ತ ಸಂಗಾತಿ - ಇರುಳು

-


16 DEC 2022 AT 18:37

ಬದುಕಿನ ಅನಿರ್ದಿಷ್ಟ ಅಂಕಣದೊಳಗೆ,
ಸಿಂಕಾಗುವ ನೆನಪುಗಳ ಇಂಪಿಗಿಂತ
ಸುಕ್ಕಾಗುವ ನೆನಪುಗಳ ಕಂಪನವೇ ಹೆಚ್ಚು

-


6 JUL 2022 AT 18:12

ಎಂದೂ ಹುಡುಕದ ಪದಗಳಿಗೆ ಖಾಸಗಿಯಾಗುವ ಅರೆ ಘಳಿಗೆ
ಸೋತೂ ಸಿಲುಕದ ಮುಗುಳುನಗೆ ಸಾರ್ಥಕವೆನಿಸುವ ಮಳೆಹನಿಗೆ

-


13 MAY 2022 AT 15:24

ಕಾಡುವಿಕೆಯಿಂದರೆ
ಹೀಗೇ ಇರಬೇಕು
ಬರೆಯದೇ ಉಳಿದುಬಿಟ್ಟ
ಜಿಡ್ಡುಗಟ್ಟಿ ನೋಟನೆಟ್ಟ
ಎಲ್ಲ ಭಾವಗಳ ಎದುರಿಸಿ
ಸಂಭಾಳಿಸುವಾಗ,
ರಾಶಿ ಕನಸು
ಸಪ್ಪೆಯಾಗುತ್ತದೆ
ಮನದ ಮೊರೆತ
ಸ್ತಬ್ಧವಾಗುತ್ತದೆ.

-


7 FEB 2022 AT 7:49

ಬದುಕಿನ ಸರದಿಯೊಳಗೆ ಕನಸುಗಳ ಕಾಗುಣಿತ ಏರುಪೇರಾಗುವಾಗ, ಮತ್ತೆ ಸೆರೆಯಾಗುವ ವಿಷಾದಗಳ ಒಳಹರಿವು ಇನ್ನೂ ಸರಾಗ. — % &

-


9 NOV 2021 AT 22:09

ಕನಸೊಂದು ಸೋಕಿ ಹೋಗಬಹುದು ಇಶಾರೆಯೊಂದು ಸದ್ದಾಗದೆ ಎದ್ದು ನಡೆಯುವಾಗ,
ಎಲ್ಲವೂ ಸ್ಪಷ್ಟವಾಗಬಹುದು ನಿನ್ನೆಗಳ ಹೊದಿಕೆ ಇಂದು ಹೊಂದಿಕೆಯಾಗದಿರುವಾಗ;
ಮಧ್ಯಂತರವೊಂದು ಬೇಕಾಗಬಹುದು ಬದುಕಿನ ಹಾದಿ ಗೋಜಲಾದಾಗ,
ನೆರಳು ಬೆಳಕಿನ ಹರಿವು ನೆಲೆಕಾಣಬಹುದು ಭಾವಗಳ ಹರವು ಹಗುರಾದಾಗ...

-


24 OCT 2021 AT 21:39

ತಣ್ಣಗಿನ ಮೌನವಾಗುತ್ತೇನೆ ಭಾವಗಳ ಬಸಿದು ಉಸಿರಾಡುವಾಗ,
ಆಗಾಗ ಉಳಿದುಬಿಡುತ್ತೇನೆ ಭಾವ ಶರಧಿಯೊಳಗೆ ಮತ್ತೆ ಮಾತಾಗಲು;
ಕಾಪಿಟ್ಟುಕೊಂಡ ಸಾಲುಗಳಿಗೀಗ ಕುಸುರಿಯ ಅಗತ್ಯವಿಲ್ಲ,
ಇರುಳಿನ ಕವಿತೆ ಸ್ವರವ ಚೆಲ್ಲುವಾಗ ನೆಲೆಯಿರದ ತೆರೆಯಾಗುತ್ತೇನೆ, ತೆರವಾಗುವಾಗ...

-


Fetching ಅಘನಾಶಿನಿ Quotes