ನಿನ್ನ ತೋಳಲಿ ನಾ ಬಂದಿಯಾಗುವಾಸೆ
ಬೆಚ್ಚನೆಯ ಪ್ರೀತಿಯ ಸ್ಪರ್ಶಕೆ ಸೋಲುತ
ಪುಟ್ಟ ಮಗುವಿನಂತೆ ಬಿಗಿದಪ್ಪುವ ಆಸೆ
ನಿನ್ನ ಎದೆ ಬಡಿತವನ್ನು ಕೇಳುತ
🫂❤️-
linked in - Adarsh J Shetty
Insta - its_a4adarsh
ನಿನ್ನನ್ನು ಭೇಟಿಯಾಗಿದ್ದು ನನ್ನ ಅದೃಷ್ಟ...
ನಿನ್ನ ಪ್ರೀತಿ ಸಿಕ್ಕಿದ್ದು ನನ್ನ ಸೌಭಾಗ್ಯ...
ನೀಡುತ್ತೇನೆ ಈ ಪ್ರೀತಿ ನನ್ನ ಬದುಕಿನ ಕೊನೆವರೆಗೆ
ನಿನ್ನ ಜೊತೆಯಾಗಿರುವೆ ಕೊನೆ ಉಸಿರು ಇರುವವರೆಗೆ
ನಗುವಿಗೆ ಕಾರಣವಾಗಿ
ನೋವಿನಲಿ ಜೊತೆಯಾಗಿ
ಎಂದೆಂದು ನಿನ್ನವನಾಗಿ
🥰🫂
ನಿನ್ನ ಪ್ರೀತಿಯ ಆದರ್ಶ ❤️-
ಸುರಿವ ಮಳೆಯಂತೆ ನನ್ನವಳು
ಪ್ರತಿ ಹನಿಯಲು ಪ್ರೀತಿಯ ಸ್ಪರ್ಶವ ನೀಡಿ
ನನ್ನನು ನಾ ಮರೆವಂತೆ ಮಾಡುವಳು
❤️-
ನಾ ಭಗವಂತ ಕೃಷ್ಣನಲ್ಲಿ ಕೇಳಿದೆ
ಏಕೆ ನಾ ಪ್ರೀತಿಸಿದವಳನ್ನು ವರಿಸಲಾಗಲಿಲ್ಲ?
ನನ್ನದು ಪವಿತ್ರವಾದ ಪ್ರೇಮವಲ್ಲವೇ ಎಂದು
ಅದಕ್ಕೆ ಶ್ರೀ ಕೃಷ್ಣ ಹೇಳಿದ್ದಿಷ್ಟೇ
"ರಾಧೇ ರಾಧೇ"-
ಪ್ರತಿ ದಿನ ನೀ ನೆನಪಾಗುತ್ತಿರುವೆ
ಆದರೆ ನಿನ್ನೊಂದಿಗೆ ಮಾತಾಡಲಾರೆ
ನಿನಗಾಗಿ ನೂರಾರು ಕವಿತೆಗಳ ಗೀಚುತ್ತಿರುವೆ
ಆದರೂ ನಿನ್ನ ಹೆಸರ ನಾ ಬರೆಯಲಾರೆ
-
ನಿನ್ನ ಮಡಿಲಲ್ಲಿ ಮಲಗಿ
ಮುದ್ದಾದ ನಿನ್ನ ಮೊಗವನ್ನು ಕಂಡಾಗ
ಮತ್ತೆ ನಾ ಮಗುವಾದಂತೆ
-
ಸಿಗದ ಅವಳನ್ನು ನಾ ಬಿಡದೆ ಪ್ರೀತಿಸುವೆ
ಕಾರಣವಿಷ್ಟೇ
ಸಿಕ್ಕ ಯಾರಲ್ಲೂ, ಆ ಪ್ರೀತಿಯ ಕಾಣಲು ಸಾಧ್ಯವಿಲ್ಲ
-
ಈ ಬದುಕಿನ ಪಯಣದಲ್ಲಿ
ಕಳೆದು ಹೋದ ಮಗುವಂತಿದ್ದ ನನಗೆ, ಬೆಚ್ಚನೆಯ ಅಪ್ಪುಗೆಯ ಕೊಟ್ಟವಳು ನೀನು
ನಗುವ ಮರೆತಿದ್ದ ಈ ಮೊಗದಲ್ಲಿ, ಸಂತಸದ ಮಳೆಯನ್ನು ತಂದವಳು ನೀನು
ನಂಬಿಕೆಯೇ ಕಳೆದುಕೊಂಡ ಈ ಜೀವದ ಕೈಯಲ್ಲಿ, ಪ್ರೀತಿಯ ಮುತ್ತನ್ನು ಇತ್ತವಳು ನೀನು
ನೀ ತೋರಿದ ಕಾಳಜಿಗೆ, ನನಗರಿಯದೆ ನಿನ್ನ ಪ್ರೀತಿಸಿದ ಪ್ರೇಮಿ ನಾನು ❣️-