ವ್ಯವಹಾರ ಮಾಡೋಕೆ ದುಡ್ಡು ಬೇಕು
ಸಂಬಂಧ ಬೆಳೆಸೋಕೆ ಸಮಯ ಬೇಕು
ದುಡಿಮೆಗೆ ಶಕ್ತಿ ಇರಬೇಕು
ಗೆಲ್ಲೋಕೆ ಬುದ್ದಿವಂತಿಕೆ ಇರಬೇಕು
ಪ್ರೀತಿ ಮಾಡೋಕೆ ಒಳ್ಳೆ ಮನಸ್ಸು ಇರಬೇಕು
ಈ ಬೇಕು ಬೇಕು ಅನ್ನೋ ಭ್ರಮೇಲೆ
ಹಣನೇ ಇಲ್ಲ ಅನ್ನೋ ಕಾಲ ಆಗಿದೆ
ಹಣ ಇದ್ರೆ ಏನ್ ಬೇಕಾದ್ರು ಗೆಲ್ತಿನಿ ಖರೀದಿಸುತ್ತಿನಿ ಅನ್ನೋ ಮನುಷ್ಯ
ಸಂಬಂಧಕ್ಕೆ ಸಮಯ ಕೊಡ್ದಲೆ
ಪ್ರೀತಿ ವಾತ್ಸಲ್ಯವನ್ನೇ ಮಾರ್ತಿದ್ದಾನೆ
ಹಣ ಹಣ ಅನ್ನೋ ಭ್ರಮೇಲಿ ಬದುಕಿದ್ದಾನೆ
ಅಭಿಷೇಕ್ ಗೌಡ ಡಿ ಎನ್-
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರ... read more
ಗೆಳೆತನದ ಪಯಣ,
ಬಾಲ್ಯದ ಆ ಕ್ಷಣ,
ನಾನು ನಾನೆನ್ನದಾ ದಿನ,
ನಾವೆಲ್ಲರು ಸೇರಿ ಆಡುತ್ತಾ ಬೆಳೆದ ಕ್ಷಣ,
ತುಂಟ ಆಟಕ್ಕೊಂದು ನಗುವು
ಬಿದ್ದ ನೋವಿಗೊಂದು ಅಳುವು,
ಜೊತೆಲೆ ಬೆಳೆದೆವು ಪ್ರತಿದಿನವು,
ಸ್ನೇಹವೆಂಬ ಹೆಸರಿನ ಸಹಪಾಠಿಯು,
ಸಂತಸದಲ್ಲಿ ಸಂತೃಪ್ತಿಯಾದ ನಮ್ಮೆಲ್ಲರ ಮನವು,
ಇದೇ ಗೆಳೆತನ ಬಾಲ್ಯದ ನನ್ನ ಕ್ಷಣ
ಕಳೆದಿರುವೆ ನಿಮ್ಮ ಜೊತೆಗೆ ಪ್ರತಿದಿನ.....
ಸ್ನೇಹವಿಲ್ಲದ ಸಂಬಂಧ ಅರ್ಥವಿಲ್ಲದ ದಾರಿಯಂತೆ ಸ್ನೇಹದ ಸಂಬಂಧ ಸವಿಯಾದ ಅನುಬಂಧದಂತೆ.....
ಈ ಸಾಲಿಗೆ ನಮ್ಮ ಸ್ನೇಹವೆ ಸ್ಪೂರ್ತಿಯಂತೆ
ಇರಲಿ ಸ್ನೇಹ ಸಂಬಂಧ ಸದಾ ನಗುವಿನಂತೆ....
ಇಂತಿ ನಿಮ್ಮ ಸ್ನೇಹ ವಿಶ್ವಾಸಿ....
ಅಭಿಷೇಕ್ ಗೌಡ ಡಿ ಎನ್-
ಪ್ರೀತಿ ಇದು ಕುರುಡಲ್ಲ,
ಪ್ರೇಮಿಯು ನಾನು ನಟ ನಾನಲ್ಲ,
ಇರುವೆ ನೀ ನನ್ನ ಮನವೆಲ್ಲ,
ತಿಳಿಯದೆ ನಿನಗೆಲ್ಲ,
ಕಾದಿರುವೆ ನಾನು ನಿನಗೆಂದೆ,
ಪ್ರೀತಿಸುವೆ ನಿನ್ನ ಪ್ರತಿ ಕ್ಷಣವು,
ಒಪ್ಪಿಗೆ ನಿಂದೆ,
ಪ್ರೀತಿಸುವೆ ನಾನಿನ್ನ ,ಪ್ರೀತಿಸೆ ನನ್ನ ,ಕಾದಿರುವೆ ನಿನಗೆಂದೆ,
ಅನುಮತಿಯೂ ನಿಂದೆ,
ಪ್ರೀತಿಯು ನಮ್ಮಿಬ್ಬರದೆ...
ಅಭಿಷೇಕ್ ಗೌಡ ಡಿ ಎನ್-
ತಂಗಾಳಿಯು ತಬ್ಬಿದೆ ನನ್ನ
ಬಿಸಿಲ ಕಿರಣಗಳ ಚುಂಬನ,ಮನಸಲ್ಲೆಲ್ಲೋ ಮೂಡಿರಲು ಮೋಹ,
ನನ್ನಲ್ಲೊಂದು ರೋಮಾಂಚನದ ಕ್ಷಣ,
ತೂಗೋ ರೈಲು ಬಂಡಿಯಲ್ಲಿ ನನ್ನ ಮನ,
ಆಹಾ ಎನ್ನುವ ಈ ಕ್ಷಣ,
ಈಗೆ ಸಾಗುತಿಹುದು ನನ್ನ ಪಯಣ.
ಅಭಿಷೇಕ್ ಗೌಡ ಡಿ ಎನ್-
ಕಾಡುವ ನೋಟ ಅವಳದು,
ನೆನಪಿನಲಿ ಜೋಪಾನ ಮಾಡುವ ಮನಸು ನನ್ನದು,
ದಾರಿಯಲಿ ಸಿಕ್ಕಳು,
ಪ್ರೀತಿಯಲಿ ಜೊತೆಯಾದಳು,
ಕೈ ಹಿಡಿಯೋ ದಾರಿಯಲಿ,
ಜೊತೆ ನಡೆದ ಪಯಣ,
ಸನಿಹಕೆ ಬಂದ ಆ ಕ್ಷಣ,
ಮೈ ಮರೆಸುತಿದೆ ಕ್ಷಣ ಕ್ಷಣ....
ಅಭಿಷೇಕ್ ಗೌಡ ಡಿ ಎನ್-
ಗೋಳೆಂದು ಕುಳಿತರೆ ಬರೀ ಗೋಳು,
ಎಲ್ಲವ ತಡೆ ಹಿಡಿದು ಮುನ್ನೆಡೆದರೆ ಬಾಳು,
ಬದುಕಿಗೊಂದು ಸಾಲು,
ಅನುಮತಿಗಾಗಿ ಕಾದು ಕುಳಿತರೆ, ಬರೀ ಸೋಲು,,
ನಿನ್ನ ಪ್ರಯತ್ನವ ನೀ ಬಿಡದೆ ಮುನ್ನುಗ್ಗಿ ಗೆಲ್ಲು,
ಸಮಯವು ನಿನ್ನದೇ,
ಬದುಕು ನಿನ್ನದೇ,
ಗೆದ್ದಾಗ ಎಲ್ಲವೂ ಬದಲಾಗುವುದು,
ಇದೇ ಬದುಕು,
ಇದೇ ಗೆಲುವು.......
ಅಭಿಷೇಕ್ ಗೌಡ ಡಿ ಎನ್..-
ನಿಂತಲ್ಲಿ ನಿಲ್ಲದು ನಮ್ಮ ಜೀವನ,
ಸದ್ದಿಲ್ಲದೆ ಸಾಗುತಿಹುದು ನಮ್ಮ ಪಯಣ ....
ಅಭಿಷೇಕ್ ಗೌಡ ಡಿ ಎನ್.-
ಬರುವ ನಿನ್ನವ,
ಕಾದು ಕುಳಿತಿರುವೆ ನಿನ್ನ ಒಲವ,
ಪ್ರೀತಿ ಎಂಬ ಮಾಯೆಯಲ್ಲಿ ತೇಲಿಸುವ,
ಮದುವೆ ಎಂಬ ಬಂಧನದಲ್ಲಿ ನಿನ್ನ ಒಲಿಸುವೆ.
ಅಭಿಷೇಕ್ ಗೌಡ ಡಿ ಎನ್-
ಇರಬೇಕು ಅವರಂತೆ ಇವರಂತೆ
ಎನ್ನುವುದೇ ನಿನಗೆ ದೊಡ್ಡ ಚಿಂತೆ,
ಎಂದೂ ಇರುವೆ ನೀನು ನಿನ್ನಂತೆ,
ಬಿಟ್ಟು ಬಿಡು ಇವೆಲ್ಲದರ ಚಿಂತೆ,
ಇವೆಲ್ಲಾ ಬರೀ ಅಂತೆ ಕಂತೆ,
ಬದುಕು ನೀನು ನಿನ್ನಿಷ್ಠದಂತೆ.
ಅಭಿಷೇಕ್ ಗೌಡ ಡಿ ಎನ್-