Abhi Cool   (ಅಭಿ ಕೂಲ್ 😎)
27 Followers · 28 Following

Joined 6 May 2020


Joined 6 May 2020
20 OCT 2023 AT 21:15

ಅವಳಂದಕೆ ಸೋತವನಲ್ಲ ನಾ...!
ಅವಳ ಸ್ವಚ್ಛಂದದ ಮನದಂದಕೆ
ಶರಣಾದವ ನಾ...!

-


14 OCT 2023 AT 19:47

ಟೇಬಲ್ಲಿನ ಸುತ್ತ ಕುಳಿತವರದ್ದು
ಒಂದೇ ಗ್ಲಾಸ್ ನಲ್ಲಿ ಕುಡಿದಷ್ಟು ಸುಲಭದ್ದಲ್ಲ,
ಅವರವರ ಕಥೆಗಳನ್ನಂಚಿಕೊಳ್ಳುವುದು...
ಒಬ್ಬೊಬ್ಬರದು ಒಂದೊಂದು ಕಥೆ,
ನಶೆಯಲ್ಲಿ ಕೇಳಿ ಮರುಗುವರು,
ಇಳಿದಾಗ ಅವರೇ ಹೀಯಾಳಿಸಿ ನಗುವರು...

-


9 OCT 2023 AT 21:29

ಸಂಸಾರದಲ್ಲಿ 'ಸಾರ'ವಿಲ್ಲದಿದ್ದರೆ
'BAR' ನಲ್ಲಿ ಭಾರವಾದ ಮನಸ್ಸಿಂದ ಕೂರಬೇಕೇನೋ??
ಅಂಥ ಯೋಚಿಸೋ ಬದಲು
SOME 'ಸ್ವೀಕಾರ' ಮಾಡೋ ಅನುಗುಣ ಕಲಿತರೆ
'LIFE' ನಲ್ಲಿ ಸುಖ ಸಾಗರಕ್ಕೆ
ಜಾಗ ಸಿಕ್ಕರೂ ಸಿಗಬಹುದು ಅರಿತುಕೋ...!

-


20 SEP 2023 AT 8:43

ನಮ್ಮಿಬ್ಬರ ನಡುವಿನ ಮಧ್ಯಂತರಕ್ಕೆ
ಯಾವ ಮದ್ಯವು ಮದ್ದಾಗದು...
ನಿನ್ನ ಅರೆಕ್ಷಣ ಮರೆಸುವ ಮತ್ತೇರಿಸದೊರತು
ನಿನ್ನನು ಶಾಶ್ವತವಾಗಿ ನನ್ನಿಂದ ಮರೆಸದು...!

-


19 SEP 2023 AT 21:41

ಬದಲಾಗಬೇಕೆಂಬ ಮನಸ್ಥಿತಿ
ಹೊಂದಿರದವರ ಮುಂದೆ
ಬದಲಾವಣೆಯ ಬಗ್ಗೆ ಮಾತನಾಡಬಾರದು
ಮಾತಾಡಿದ್ದೆ ಆದರೆ ಕೊನೆಗೆ ನೀವೇ ಮೂರ್ಖರು...
ಸಮಯ ಬಂದಾಗ ತನ್ನಷ್ಟಕ್ಕೆ ತಾನೇ ಅರ್ಥವಾದೀತು,
ಎಂದು ಸುಮ್ಮನಾದರೆ ಯಾರು ಇಲ್ಲ ನಿಮ್ಮಷ್ಟು
ಸುಖೀ ಜಾಣರು...

-


13 SEP 2023 AT 22:28

ಎಲ್ಲರಿಗೂ ಅವರದೇ ಆದ
ಚಿಂತೆಗಳಿವೆ
ಆದರೆ, ಅದರ ಪರಿಹಾರಕ್ಕಾಗಿ
ಅಗತ್ಯವಾದ
ಚಿಂತನೆಗಳು ಯಾರ ಬಳಿಯೂ
ಇಲ್ಲದಾಗಿವೇ...

-


10 SEP 2023 AT 20:03

ಏರಿ ನಾ ಹೊರಟಿರಲು,
ಗೆದ್ದಂತಾಗಿದೆ ಯುದ್ಧಗಳು ಸಾಲು ಸಾಲು,
ಅಪ್ಪನೇ ಜೊತೆಯಾದಮೇಲೆ ಇನ್ನೂ ಹತ್ತಿರ ಸುಳಿಯದು ಸೋಲು...

-


8 SEP 2023 AT 21:56

ಬದುಕ ಹೋರಾಟದ ಹಾದಿ ಅಷ್ಟೇನು ಕಷ್ಟದ್ದಲ್ಲ
ಬಂದಂತೆ ಅನುಭವಿಸಿದರೆ ಸುಲಭದ್ದೇ,
ಆದರೆ ಅದನ್ನು ಕಠಿಣವನ್ನಾಗಿ ಮಾಡಿ
ವ್ಯಥೆ ಪಡುತ್ತಿರುವ ಕಾರಣ
ನಮ್ಮದೇ ಆಸೆಗಳ ಮಿತಿಯಿರದ ಲೆಕ್ಕದ್ದೇ....

-


5 SEP 2023 AT 23:40

ಎಲ್ಲರಂತೆ ಅವಳು
ಪ್ರೀತಿಯ ನಾಟಕವಾಡಿದ್ದರೆ
ಅವಳ ನೆನಪು ಈ ಜಡಿ ಮಳೆಯಲ್ಲೇ
ಕೊಚ್ಚಿ ಹೋಗುತ್ತಿತ್ತೇನೊ,
ಆದರೆ ಪರಿಸ್ಥಿತಿಗೆ ಶರಣಾಗಿ
ಸೋತ ಪ್ರೇಮಿಯವಳು,
ಅವಳ ನೆನಪಲ್ಲ,
ಅವಳ ಉಸಿರ ಸದ್ದನ್ನು ಸಹ ಮರೆಯಲಾಗಲ್ಲ,
ಮರೆಸುವ ಶಕ್ತಿ ಈ ಸೃಷ್ಟಿಯಲ್ಲೇ ಇಲ್ಲ
ಆ ವಿಧಿಯೊಬ್ಬನ ಹೊರತು...

-


2 SEP 2023 AT 11:03

ಗ್ರಹಗತಿಗಳು ಹೇಗಿದ್ದರೇನಂತೆ
ಮನಸ್ಥಿತಿಯೇ ಸರಿಯಿಲ್ಲದಿದ್ದಾಗ...!

-


Fetching Abhi Cool Quotes