19 NOV 2017 AT 3:58

ಸೌಂದರ್ಯ
# # # # # # #
ಹೆಣ್ಣು ತಾನೇನು ಬಲ್ಲಳು
ತನ್ನ ಸೌಂದರ್ಯದ ಆಳ
ಗಂಡು ವರ್ಣಿಸಿದರಷ್ಟೇ ಅರ್ಥ
ಅವಳ ಅಂದ ಚಂದ.

ಗಂಡು ತಾನೇನು ಬಲ್ಲನು
ತನ್ನ ಸೌಂದರ್ಯದ ಚಲುವ
ಹೆಣ್ಣು ಬಂದೆರಗಲಷ್ಟೇ ಇಮ್ಮಡಿಯು
ಅವನ ಅಂದ ಚಂದ.

ತನ್ನ ತಾ ಸೌಂದರ್ಯವತಿ
ಎನಲು ಬೆಲೆ ಇರುವುದೇನು?
ತನ್ನ ತಾ ಸುರ ಸುಂದರನೆಂದು
ಜಂಭದಿ ಬೀಗಲು ಬೆಲೆಯುಂಟೇನು?

ನಿಜ ಸೌಂದರ್ಯ ಅರಿಯಲು
ಬೇಕಿದೆ ನಿರ್ಣಾಯಕರ ಬೆಳಕು
ಗಂಡೇ ಹೆಣ್ಣಿನ ಅಂದಕೆ ನಿರ್ಣಾಯಕ
ಹೆಣ್ಣೇ ಗಂಡಿನ ಚಂದಕೆ  ನಿರ್ಣಾಯಕಿ.

ಪರಸ್ಪರರ ಹೊಗಳಿಕೆ ವರ್ಣನೆ
ಮೆಚ್ಚುಗೆ ಮಾತುಗಳ ಬಣ್ಣನೆ
ಅರಳುವವು ಮನಗಳಾಗ ಘಮ್ಮನೆ
ಇದು ಸತ್ಯ ಸೌಂದರ್ಯದ ಸ್ಪಷ್ಟನೆ.

✍✍ ಮಹೇಂದ್ರ ಕುರ್ಡಿ

- Abdul ansal.c