ಆದರ್ಶ ಕೊಡಚಾದ್ರಿ  
22 Followers · 12 Following

Joined 29 April 2019


Joined 29 April 2019

ನಿನ್ನ ಪ್ರತಿ ಆರ್ಭಟಕ್ಕೆ
ನನ್ನ ಮೌನವೇ ಉತ್ತರವಾದಾಗ
ಕಣ್ಣೀರ ಪ್ರಶ್ನೆ ನನ್ನದಾಗುವುದಾದರೂ ಹೇಗೆ ಹೇಳು?

-



ಸುಮ್ಮನೆ ಕುಳಿತು ಬಿಡು ಅರೆ ಘಳಿಗೆ  
ನಿನ್ನ ಅಂತರಂಗದ ಮಾತು ಕೇಳಲು 
ಅರಿವಾದಿತು ನಿನ್ನಸ್ತಿತ್ವ 
ಅದೆಲ್ಲಿಗೆ ಬಂದು ತಲುಪಿದೆ ಎಂದು

-



ಅವಳೆಂದರೆ ಮುತ್ತಿಟ್ಟು ಮತ್ತೇರಿಸುವವಳಲ್ಲ
ಮೌನದಲ್ಲೇ ಎಲ್ಲ ಅರಿತು
ಮುಗುಳುನಗೆಯಲ್ಲೇ ನೋವ ಮರೆಸುವವಳು

-



ಅವಳೆಂದರೆ... ಕನಸಿನಲ್ಲಿ ಬರುವವಳಲ್ಲ 
ಕನಸುಗಳನ್ನು ಜೊತೆಯಾಗಿ ಕಟ್ಟುವವಳು 
ಕಟ್ಟಿದ ಕನಸುಗಳನ್ನು ನನಸಾಗಿಸುವವಳು

-



ಬಿಟ್ಟು ಹೋಗಿ ಹೊಸ ಬದುಕು ಕೊಟ್ಟ 
ಪುಣ್ಯಾತ್ಗಿತ್ತಿ ನೀನು.. ಎಲ್ಲೇ ಇದ್ರೂ
ಸುಖವಾಗಿರು ಎನ್ನುವವ ನಾನು..

-



ಅವಳೆಂದರೆ ತಂಗಾಳಿಯಲಿ ಸುರಿವ ಸೋನೆ ಮಳೆಯಲ್ಲ
ಬಿರು ಬೇಸಿಗೆ ಕಳೆದು ಬಂದ ಮುಂಗಾರು ಮಳೆ
ಒಂದಷ್ಟು ಆರ್ಭಟ, ಒಂದಷ್ಟು ಆವೇಶ
ಆದರೂ ನಿರಂತರ, ನಿಷ್ಕಲ್ಮಶ

-



ಅಮಾವಾಸ್ಯೆಯಲ್ಲಿ ಪಯಣ ಹೊರಟಿರುವೆ
ನೀನಿರುವಾಗ ಹುಣ್ಣಿಮೆಗೇಕೆ ಕಾಯಬೇಕೆಂದು 

-



ಆ ನಿನ್ನ ಸ್ಪರ್ಶದಿಂದಲೇ ಗೊತ್ತಾಗಿದ್ದು ನಾನಿನ್ನೂ ಬದುಕಿದ್ದೇನೆಂದು

-



ಕಳೆದುಕೊಂಡಿದ್ದು ನಾನಲ್ಲ ಬಿಡು
ಬಿಟ್ಟು ಹೋಗಿದ್ದು ನೀನಲ್ಲ ಬಿಡು
ಕಳೆದುಕೊಳ್ಳಲು ನೀ ನನ್ನವಳಾಗಿರಲಿಲ್ಲ
ಬಿಟ್ಟು ಹೋಗಲು ನಾ ನೀನಾಗಿರಲಿಲ್ಲ

-



ಭಯವಾಗಿದೆ ಬದುಕೆ...
ಮತ್ತೊಮ್ಮೆ ನೀನೆಲ್ಲಿ
ಕ್ರೂರಿಯಾಗಿಬಿಡುವೆಯೋ ಎಂದು

-


Fetching ಆದರ್ಶ ಕೊಡಚಾದ್ರಿ Quotes