❤️ 🖤   (Suchi(sm)🖤)
11 Followers · 10 Following

Joined 4 January 2023


Joined 4 January 2023
15 AUG 2023 AT 22:19

ಯಾರದೋ ಕಣ್ಣೀರನ್ನು ಕಸವ ಮಾಡಿ,
ಇರಲು ಸಂತೋಷದಿ ಎಲ್ಲ ಮರೆತು,
ಇರಲಿ ಆ ನಗು ಚಿರಕಾಲ ಅ ಮುಖದಲ್ಲಿ,
ನಮ್ಮಿಂದ ದೂರಗುವುದೆಂದು ತಿಳಿದು ಅ ನಗು,
ಹೊರಟಿರುವೆ ಶಾಶ್ವತದಿ ತಿರುಗಿ ಬರೆನು ನಾ ಕನಸಲು,
ಹೇಳುತಿರುವೆ ಕೊನೆಯದಾಗಿ ನನ್ನ ವಿದಾಯ,
ಅದಕು ಮೊದಲು ಹೇಳುವೆ ಮನದಿಂದ ಒಂದು ಧನ್ಯವಾದ.

-


14 AUG 2023 AT 22:18

ಒಮ್ಮೊಮ್ಮೆ ಕೇಳಲೇ ಬೇಕು ಮನಸಿನ ಮಾತು,
ನೆನಪಿದ್ದರು ನೋವು ಮರೆತಂತೆ ನಟಿಸಬೇಕು ಕೆಲವೊಮ್ಮೆ ಪ್ರೀತಿಯಲಿ ಸೋತು.
ಕಂಬನಿ ತರಿಸಿದೆ ನೆನೆದು ಆಡಿದ ಪಿಸು ಮಾತು,
ಎಲ್ಲ ಮರೆಯುವುದರೊಳಗೆ ಕೊಡುವೆಯ ಇದಕ್ಕೊಂದು ರುಜುವಾತು.

-


16 APR 2023 AT 22:54

ಯಾವುದೇ ಸಂಬಂದವಾಗಲಿ ಹೊಸದರಲ್ಲಸ್ಟೆ ಚೆಂದ,
ಕೊಟ್ಟು ಹೋದ ನೋವುಗಳೆ ದಿನಕ್ಕೊಂದು ಪಾಠ ಕಲಿಸುತ್ತದೆ ನೆನಪಾದಾಗಲೆಲ್ಲ ಸದ್ದಿಲ್ಲದೆ ಕಣ್ಣಂಚಲಿ ಕಣ್ಣೀರು ಜಾರುತಿದೆ,
ಕೆಲವರು ನನ್ನವರು ಎನ್ನುವ ಕಲ್ಪನೆ ಬಹಳ ಇತ್ತು,
ಒಮ್ಮೆ ಹಿಂದೆ ನೋಡಿದಾಗಲೇ ನನಗೂ ತಿಳಿದಿದ್ದು,
ನನ್ನ ನೆರಳ ಬಿಟ್ಟು ಮತ್ಯಾರು ನಂಗಿಲ್ಲವೆಂದು,
ಕಳೆದ ಸಮಯ ತುಂಬಾ ಕಡಿಮೆಯೇ ಇರಬಹುದು,
ಜೀವದ ಕೊನೆ ಉಸಿರಿರೂವರೆಗು ನೆನನಪುಗಳನ್ನು ಜೋಪಾನವಾಗಿ ಕಾಪಾಡುವೆ,
ಒಂಟಿ ತನದ ನೋವನ್ನು ಸಾರಿ ಸಾರಿ ಹೇಳುತ್ತಿದೆ ಮನಸ್ಸು,
ಒಬ್ಬರ ನೋವನ್ನಾ ಅರ್ಥ ಮಾಡ್ಕೋಳಕಿಂತ ಅದನ್ನ ಅನುಭವಿಸಿದಾಗಲೆ ಅದರ ನೋವು ಏನು ಅಂತ ನಮಗೂ ಅರಿವು ಆಗೋದು ಎನ್ನುತ್ತಿದೆ ಹೃದಯ.....,

-


12 APR 2023 AT 23:06

ನಮ್ಮ ಬಳಿ ಇರಲು ಕಷ್ಟ ಪಡುವವರನ್ನು ಅವರ ಇಷ್ಟದಂತೆ ಬಿಟ್ಟರೆ ಅವರಿಗೆ ನಮ್ಮಿಂದ ಸಿಕ್ಕ ಕೊಂಚ ನೆಮ್ಮದಿಯ ಖುಷಿ ಕೊನೆವರೆಗೂ ನಮ್ಮದಾಗುತ್ತದೆ.

-


11 APR 2023 AT 14:02

ಹುಟ್ಟುತಿದೆ ನಾ ಇಡುವ ಹೊಸ ಹೆಜ್ಜೆಯ ಹಂಬಲಗಳ ಆಲೋಚನೆ,
ನನ್ನ ಮನದಲ್ಲಿ ಹೇಳಿಕೊಳ್ಳಲಾಗದ ವೇದನೆ,
ನನ್ನ ಕಾಡುತಿದೆ ಬಿಡದೆ ನೆನಪುಗಳ ಯಾತನೆ,
ಆದರೂ ಯತಾಕೊ ಯಾರದೋ ಯೋಚನೆ,
ಬಿಡಬೇಕು ಮೊದಲು ನಾ ಎಲ್ಲ ಕಲ್ಪನೆ,
ಇನ್ನಾದರೂ ಮಾಡಬೇಕು ನಾ ನನ್ನ ಖುಷಿಯ ಚಿಂತನೆ.

-


9 APR 2023 AT 18:44

ಸಂತೋಷದ ಅಲೆದಾಟದಲ್ಲಿ ಸಿಕ್ಕ ಕೊಂಚ ನೆಮ್ಮದಿಗೆ ಎಂದಿಗೂ ವಿದಾಯ ಬಾರದಿರಲಿ.

-


9 APR 2023 AT 17:12

ಮೊದಲು ಈ ಜೀವಕೆ ಸಿಕ್ಕ ಚಿಕ್ಕ ಜಗವೇ ನೀ,
ಸ್ನೇಹವೆಂದರೆ ಏನೆಂದು ತೋರಿಸಿ ಕೊಟ್ಟಿದ್ದೆ ನೀನು,
ಸ್ನೇಹವೆಂಬ ಬುತ್ತಿಯಲಿ ಮೊದಲು ತುತ್ತು ಕೊಟ್ಟವ ನೀನು,
ಎಂದಿಗೂ ಮರೆಯದಿರು ಅ ಬುತ್ತಿಯಲ್ಲಿ ನನಗೊಂದು ತುತ್ತು,
ನೀ ಬಂದುವಲ್ಲ ಬಳಗವಲ್ಲ ಆದರೂ ಇಬ್ಬರ ನಡುವೆ ಸ್ನೇಹವೆಂಬ ಪುಟ್ಟ ಮನಸಿನ ನಂಟಿದೆ,
ಯಾವುದೋ ಒಂದು ಚಿಕ್ಕ ಮನಸ್ತಾಪ ಆಯಿತು ನಮ್ಮಿಬ್ಬರ ನಡುವೆ ದೊಡ್ಡ ಬಿರುಕು,
ಇಬ್ಬರು ಇದ್ದೆವು ಬಹು ದೂರ ಆದರೆ ಎಂದಿಗೂ ಮನಸ್ಸಿಂದ ಕೊಟ್ಟಿಲ್ಲ ಇಬ್ಬರೂ ಬೀಳ್ಕೊಡುಗೆ,
ಹೀಗೆ ಇರಲಿ ಎಂದಿಗೂ ನಮ್ಮ ಗೆಳೆತನ ಮುಂದೆಂದೂ ಬಾರದಿರಲಿ ನಮ್ಮಿಬ್ಬರ ನಡುವೆ ಹಗೆತನ,
ಕೊನೆತನಕ ಕೊಡುವೆಯಾ ನಿನ್ನ ಪ್ರೀತಿಯಲಿ ನನಗೊಂದು ಚಿಕ್ಕ ಪಾಲು,
ಮುಗಿದರೂ ಮರೆಯಲಾಗದ ಸ್ವಾರ್ತವಿಲ್ಲದ ಪವಿತ್ರವಾದ ಬಂದವೇ ನಮ್ಮಿಬ್ಬರ ಪರಿಶುದ್ಧವಾದ ಸ್ನೇಹ,
ಅರಿಯದ ಪ್ರೀತಿ ಮರೆಯದ ಸ್ನೇಹ ಬೆಟ್ಟದಷ್ಟಿರುವಾಗ ಅಳಿಸುವ ಅಕ್ಷರಗಳಲಿ ಏನೆಂದು ಬರೆಯಲಿ,
ಆದರೂ ಬರೆಯುವೆ ನಿನಗಾಗಿ ಎರಡು ಸಾಲನು, ಸ್ನೇಹವೆಂಬ ಎರಡಕ್ಷರ ಚಿರಕಾಲ ಇರಲಿ ನಮ್ಮಿಬ್ಬರಲ್ಲು,
ನಿನ್ನ ಜೀವದ ಜೀವವಾಗಿರುವ ಹೊಸ ಪ್ರಪಂಚದಲ್ಲಿ ನೋವೆಂಬುದೆ ಬಾರದಿರಲಿ,
ನಿಮ್ಮಿಬ್ಬರ ಖುಷಿಗೆ ಮಿತಿಯೆಂಬುದೆ ಇರದಿರಲಿ,
ಕೊನೆ ತನಕ ನಿನ್ನ ಕಷ್ಟ ಸುಖದಲ್ಲಿ ನಿನಗಾಗಿರುವೇ ನಾನೊಬ್ಬಳು ಹಿಥೈಶಿ.

-


24 FEB 2023 AT 21:54

ನೀ ನನ್ನ ದಿನ ನಂಬಿಸುವುದರ ಬದಲು ಒಂದು ದಿನ ಒಂದೇ ಒಂದು ದಿನ ಮನಸಿಂದ ನೋಡಿದದ್ದರು ಕೂಡ ನನ್ನ ನೋವಿನ ಅರಿವು ನಿನಗಾಗುತಿತ್ತು😭.

-


24 FEB 2023 AT 21:47

ನಾ ಮಾಡಿದ ತಪ್ಪಾದರೂ ಏನೂ,
ಅತಿಯಾಗಿ ನಂಬಿದ್ದೆ ನನ್ನ ತಪ್ಪಾ,
ನನ್ನ ತಪ್ಪಿಗೆ ನೋವೆಂಬಾ ಶಿಕ್ಷೆಯಾದರೆ,
ಅತಿಯಾಗಿ ನಂಬಿಸಿ ಮೋಸ ಮಾಡಿದವರಿಗೆ ಯಾವ ಶಿಕ್ಷೆ,

-


8 FEB 2023 AT 14:24

ಪ್ರೀತಿಯೆಂಬ ಸಮುದ್ರದಲ್ಲಿ ಚಿಕ್ಕ ಮೀನು ನಾನು,
ಅ ಸಮುದ್ರದಲ್ಲಿ ನಂಗೆ ಸಿಕ್ಕ ದೊಡ್ಡ ಮುತ್ತು ನೀನು,
ನಿನ್ನ ಪ್ರೀತಿಯಾ ಬಲೆಯಲ್ಲಿ ಬಂದಿಯಿದ್ದೆ ನಾನು,
ಬೇರೆ ಪ್ರೀತಿಯಾ ಬಯಸಿ ಮತ್ತೆ ಎಸೆದೆಯಾ ನೀನು,

-


Fetching ❤️ 🖤 Quotes