ಹೇಳೋಕೆ ಇಲ್ಲಿ ಏನಿಲ್ಲ
ಹೇಳಿದ ಮೇಲೆ ಏನಿಲ್ಲ
ಹೇಳುವುದು ಕೇಳು
ಕೇಳುವುದನು ಹೇಳು-
ಅಜ್ಞಾನ ಅಳಿಸಲು ಸದವಕಾಶ ಈ ರಾತ್ರಿ
ಮಹಾಶಿವರಾತ್ರಿ
Maha Shivaratri
is a great opportunity to let go tamasic nature-
ನೀ ನನ್ನ ಮನದಲ್ಲಿ
ನಾ ನಿನ್ನ ನೆನೆಪಿನ ದೋಣಿಯಲಿ
ಹೃದಯಗಳ ಸಂಪರ್ಕ ನಮ್ಮಿಬ್ಬರಲ್ಲಿ
ಹೀಗೆ ಶಾಶ್ವತವಾಗಿ ಪ್ರತಿಧ್ವನಿಸುತಿರಲಿ-
ಪ್ರೀತಿಯು ಅರಳಿದಾಗ
ಯಾವುದು ರಾತ್ರಿ
ಯಾವುದು ಹಗಲು
ಮನಸು ಮರಳಿ ಮರಳಿ
ಪ್ರೀತಿಯನೆ ಬಯಸುವುದಾಗ
ನನಸಿನ ಕನಸು ಕಾಣುವುದಾಗ-
ಏನೋ ಮಾಡುವುದಕ್ಕೆ, ಆಗೋದಕ್ಕೆ
ಕಾತುರ ಬೇಡ, ಆತುರ ಪಡಬೇಡ
ಸುಮ್ಮನಿರು, ಇಲ್ಲಿರುವುದು ಸುಮ್ಮನೆ
ಸುಮ್ಮನಿರುವುದೂ ಸಾಧ್ಯವಿಲ್ಲವಾ?-
ಬಿಡಿಸಿ ತಿಳಿಸಿದರೂ ಬಿಡದೆ ಹೇಳಿದರೂ
ಎದೆಗೇನು ಅಂಟದು ಮನಸಿನ ಗಂಟಿದು
ಜಗವನೆಳೆದು ಜನರ ಸೆಳೆವ ಅಮಲು
ಬೇಡದ ಸಹ'ವಾಸ'ದೊಳಗೆ ನಮ್ಮ್ಸೂರು-
ಕನಸಿನ ರಾಣಿ ಕಂಗೊಳಿಸುವ ಕಣ್ಮಣಿ
ಕೇಳು ಬಾ ಗೆಳತಿ ನನ್ನಿ ಹೃದಯವಾಣಿ
ನನಗೂ ನಿನಗೂ ಪ್ರೇಮದ ಪುಣ್ಯಕಾಲ
ಒಲವರಥವನೆರುವ ಬಾ ಈ ಸಂಕ್ರಮಣ-
ಆಂತರ್ಯದ ರಹಸ್ಯ ತಿಳಿದಿಲ್ಲ
ಕೊನೆಕ್ಷಣ ಮುಗಿಯೋವರೆಗು
ಕರ್ಮಫಲವೂ ತಪ್ಪುವುದಿಲ್ಲ
ಮನಸು ಕಲ್ಲೇನಲ್ಲ ಆದರೂ
ಮಾತು ನನ್ನದು ಮೌನ ನಿನ್ನದು
ನನ್ನ ಹೃದಯ ನಿನಗಷ್ಟೆ ಗೊತ್ತು
ಬಿಟ್ಟುಕೊಡುವವನಲ್ಲ ನೀನೆಂದು-
ಘಾಡ ಖೇಡ ಈ ಪ್ರೇಮಾ
ಗೂಢ ನಿಗೂಢ ಈ ಪ್ರೇಮಾ
ರಾಗ ವಿರಾಗ ಈ ಪ್ರೇಮಾ
ಗಾಯ ಮಾಯಾ ಈ ಪ್ರೇಮಾ
ಸ್ನೇಹ ದಾಹ ಈ ಪ್ರೇಮಾ
ಆಟ ತುಂಟಾಟ ಈ ಪ್ರೇಮಾ
ದಯಾ ಹೃದಯಾ ಈ ಪ್ರೇಮಾ
ಮೌನ ಧ್ಯಾನ ಈ ಪ್ರೇಮಾ-