Shashikala Shashi   (ಶಿವಪ್ರಿಯೆ)
1.2k Followers · 299 Following

ಕಾಲಾಯ ತಸ್ಮೈ ನಮಃ
Joined 17 April 2020


ಕಾಲಾಯ ತಸ್ಮೈ ನಮಃ
Joined 17 April 2020
12 APR AT 19:07

ವೇದಾಂತ-ಸಿದ್ಧಾಂತಗಳನ್ನು
ಸಿದ್ಧ ವಸ್ತುಗಳಂತೆ ಬೇಕಾದಾಗ
ಬಳಸುವರೇ ಸಾವಿರವಿಹರಿಲ್ಲಿ,
ಕಚ್ಚಾವಸ್ತುಗಳಂತೆ ಸ್ವತಃ ಸ್ವಚ್ಚ
ಮನಸಿನಿಂದ ಲಾಲಿಸಿ ಪಾಲಿಸುವರು
ಎಣಿಸಲೂ ಸಿಗಲಾರರು ಜಗದಲ್ಲಿ ...
ಬುದ್ಧಿ ಜೀವಿಗಳೆಂಬ ಕಳ್ಳರ ಸಂತೆಯಲ್ಲಿ
ನಿಷ್ಪಕ್ಷಪಾತವೇ ಪಕ್ಷ ಸೇರಲು
ಕಾದುನಿಂತಿದೆ ಈ ಕಲಿಗಾಲದಲ್ಲಿ..

-


3 APR AT 0:04

ನಿದಿರೆಯ ಬೆಚ್ಚನೆಯ
ಹೊದಿಕೆಯ ಕಾಣದಿಹುದು,
ಇದಾವುದಿದು ರಾತ್ರಿ...
ಕರ್ತವ್ಯದ ನೆಪದಲಿ
ಮರ್ತಂತಿದೆ, ಕನಸ
ಮಂಪರಿನ ಛತ್ರಿ...

-


30 MAR AT 17:56

ದೊಡ್ಡ ಗುಣವದು ಹತ್ತಿರದಲ್ಲಿಲ್ಲ,
ಹತ್ತರಷ್ಟು ಹತ್ತಬೇಕು,
ಹತ್ತತ್ತಿ ಇಳಿಯಬೇಕು,
ಇಳಿದಷ್ಟೂ ಬೆಳೆಯಬೇಕು,
ಆತ್ಮದ ಕಳೆ ಕಳೆಯಬೇಕು,
ಮನುಷ್ಯತ್ವ ಉಳಿಯಬೇಕು....

-


14 MAR AT 12:44

ಶಿವಪ್ರಿಯೆ

-


18 FEB AT 17:41

ಸತ್ತ ಬಾಯಿಗಳ ಮುಂದೆ
ಪೌರುಷ ತೋರಿದಂತಲ್ಲ,
ಹತ್ತು ಮನಸುಗಳ ಗೆಲ್ಲುವುದು....

-


8 MAR 2022 AT 18:53

ತನುವೊಳಗೆ ಮನೆ ಮಾಡಿ
ಮನದೊಳಗೆ ಬಿಡಾರ
ಹೂಡಿರುವ, ನೀ ನನ್ನವನೆಂದು
ನನ್ನೀ ಹೃದಯದ ಪ್ರತಿ ಗೋಡೆಗೂ
ತಿಳಿದಿದೆ....

ಈಗೊಮ್ಮೆ ನಿನಗೆ ಕೊರಳ ಬಳಸಿ
ಮೆಲುದನಿಯಲಿ ತಿಳಿಸಲು
ಈ ಅಚಲೆಯ ಚಂಚಲ
ಮನವಿದು ಕಾತರದಿ ಕಾದಿದೆ,
ನಿನಗಾಗಿಯೇ ಪ್ರತಿಕ್ಷಣ ಹಂಬಲಿಸಿ
ಕಾದು-ಕಾದು ಸೋಲುತಿದೆ....

ಆಗಾಗ ಎದೆಯೊಳಗೆ ಒದಗುವ
ಸಿಹಿ ವಿಪತ್ತಿಗೆ ನೀನೇ ಅಪರಾಧಿಯಾದೆ,
ಹಾಗಾಗಿಯೇ ಆಗಾಗ ನಾನಂತೂ
ನಿನ್ನ ಕಾಡುವ ಹಾದಿಯ
ತುಳಿಯಬಯಸುವ ಯಾತ್ರಿಯಾದೆ....

ಪ್ರತಿಸಲವೂ ಹೆಚ್ಚಾಗುವ
ನಿನಗಾಗಿಯ ಹಂಬಲದ ಪ್ರೇಮಿಯಾದೆ,
ಹಂಬಲದೊಳಗೂ, ಇದ್ದಲ್ಲಿಯೇ
ಬೆಂಬಲಕೊಡುವ ನಿನ್ನ ಮುದ್ದು
ಮೌನವೇ ವರ್ಣಿಸಲಾಗದ ಭಾವದ
ಅಭಿಮಾನಿಯಾದೆ....

-


15 FEB 2022 AT 23:19

ದೇಹದ ಚರ್ಮಕ್ಕಂಟಿದ
ಸುಕ್ಕಿನ ಸಪೂರ ನೋಟದಿಂದ
ವ್ಯಕ್ತಿ ದೊಡ್ಡವನಾಗುವುದಿಲ್ಲ,
ಮೃದು ಮನಸ್ಸಿಗೆ ಅಂಟಿದ
ಭಾರವಾದ ಅನುಭವಗಳಿಂದ,
ತುಕ್ಕು ಹಿಡಿಯಲು ಬಿಡದ
ಕನಸುಗಳನ್ನು ಹೊತ್ತ
ಮಿಡಿಯುವ ಹೃದಯದಿಂದ
ದೊಡ್ಡವನಾಗುತ್ತಾನೆ.... — % &

-


2 JAN 2022 AT 11:17

ಮುಂಗುರುಳಿಗೂ ಮುಂಗೋಪ
ಅವನುಸಿರ ಸನಿಹವು ತಡವಾದಾಗ.
ಹಸಿ ಕೊರಳಿಗೂ ಸಂಕೋಚ
ಅರಸಿದ ಕೈಬೆರಳು ಸುಳಿದಾಗ.
ಕಾಲ್ಗೆಜ್ಜೆಗೂ ಮೌನವ್ರತ
ಆ ಹೆಜ್ಜೆಯ ಗೈರಿನ ಸಹಿತ.
ಕಣ್ಣೋಟವೂ ಸ್ತಬ್ಧ
ಇಲ್ಲದೆಯೇ ಆ ಕೊರಳಿನ ಶಬ್ಧ.
ಇವೆಲ್ಲವೂ ಅವನಿಗಾಗಿಯೇ,
ಹಸಿಹೃದಯದೊಳಗೆ
ಬೆಚ್ಚನೆ ಇಳಿದು
ಹಸಿರ ಹಚ್ಚೆ ಹಾಕಿದ
ಚೋರನಿಗಾಗಿಯೇ..— % &

-


28 DEC 2021 AT 20:12

ಎಲ್ಲಕ್ಕೂ ಮೌನ,
ತಾಳ್ಮೆ ಎಂದು ಭಜನೆ ಮಾಡಲು
ಇದು ತ್ರೇತಾಯುಗವೋ,
ದ್ವಾಪರವೋ ಅಲ್ಲ...
ಒಳ್ಳೆಯತನ ಕೇವಲ ಮೌನ, ಶಿವಪ್ರಿಯೆ
ತಾಳ್ಮೆಯೊಳಗಡಗಿಲ್ಲ...
ಇದು ಕಲಿಯುಗ,
ಒಂದು ಕಲಿಯಬೇಕು,
ಇಲ್ಲವೆಂದರೆ ಕಲಿಸಬೇಕು...
ಕಲ್ಕಿ ಬರುವವರೆಗೂ ಇದು
ಹೀಗೆಯೇ ಸಾಗಬೇಕು......

-


17 DEC 2021 AT 9:43

ಎಚ್ಚರಿಸದ ಕನಸು
ಕನಸೇ ಅಲ್ಲ.. ಶಿವಪ್ರಿಯೆ
ಹುಚ್ಚು ಹಿಡಿಸದ ಗುರಿ
ಗುರಿಯೇ ಅಲ್ಲ..

-


Fetching Shashikala Shashi Quotes