30 JAN 2018 AT 15:11

ಜಗವೆಲ್ಲ ಮಲಗಿರಲು
ನೀ ಎಳುತಿರಲು
ಕನಸುಗಳ ರಾಶಿ ಕಣ್ಣ ಮುಂದೆ
ಕಷ್ಟದ ದಿನಗಳು ಬೆನ್ನ ಹಿಂದೆ
ಎಂದೋ ಕಂಡ ಕನಸನ್ನು ಇಂದು ಬದುಕಲು
ಮುಂದೆ ಬದುಕುವ ಬಗೆಯನ್ನು ಇಂದು ಕಾಣಲು
ಶ್ರಮದ ಹಾದಿಯಲ್ಲಿ ಕಷ್ಟಗಳನ್ನ ನೋಡಿ
ಸಿಗಬಹುದು ಮುಂದೆ ಗೆಲುವೆಂಬ ಕುಡಿ
ಮರೆತು ಹೋಗಿದೆ ಮನೆಯ ದಾರಿ
ಹಿಡಿದು ಹೊರಟಿರುವೆ ಕಾಲು ದಾರಿ
ಪಯಣ ಮುಗಿಯುವ ತನಕ
ಸಾಗುತ್ತದೆ ನಮ್ಮ ಬದುಕು - ಜಟಕಾಬಂಡಿ

-