Old_Monk   (vi RAW gi)
1.6k Followers · 1 Following

⚫ಭಾಷೆ ಕನ್ನಡ ಭಾವನೆ ಕನ್ನಡಿಗ
#respectwomen
Joined 25 April 2018


⚫ಭಾಷೆ ಕನ್ನಡ ಭಾವನೆ ಕನ್ನಡಿಗ
#respectwomen
Joined 25 April 2018
Old_Monk YESTERDAY AT 22:49

ಸ್ವರ್ಗವಾಸಿ ತಂದೆಯವರಿಗೆ,

ನಿಮ್ಮ ಮಗನ ದುಃಖತಪ್ತ ನಮಸ್ಕಾರಗಳು, ನಾವಿಲ್ಲಿ ಎಲ್ಲ ಕ್ಷೇಮವಾಗಿದ್ದೇವೆ. ನಿಮ್ಮ ಆತ್ಮ ಖುಷಿಯಾಗಿದೆ ಎಂದು ಭಾವಿಸುತ್ತೇನೆ. ಅಮ್ಮ ಅಕ್ಕಂದಿರನ್ನು ನಿಮ್ಮಷ್ಟು ಖುಷಿಯಾಗಿ ನೋಡಿಕೊಳ್ಳದಿದ್ದರು,ದುಃಖವನ್ನಅಂತೂ ಕೊಟ್ಟಿಲ್ಲ.ನಿವಿಲ್ಲದ ದಿನಗಳು ಸುಲಭವಂತು ಇಲ್ಲ. ಕಷ್ಟ!! ಆದರೂ ಸಾಗುತ್ತಿದ್ದೇವೆ.
ನೀವಿದ್ದಾಗ ಬೇವರು ಬಾರದ ನನಗೆ,ನೀವಿಲ್ಲದಾಗ ರಕ್ತ ಹರಿಸಿದ್ದೇನೆ. ಹೇಳಿಕೊಳ್ಳುತ್ತಿಲ್ಲ!!! ಕಷ್ಟ ಸುಖ ತೋಡಿಕೊಳ್ಳುತ್ತಿದ್ದೆನೆ.
ಹತ್ತು ವರ್ಷ ಹಾಗೆ ಉರುಳಿಲ್ಲ, ಸುಖವಾಗಿರಲು ಸಾಲ ಬೇಕಿತ್ತು, ದುಃಖ ಕಳೆಯಲು ಬಡ್ಡಿ ಕಟ್ಟಬೇಕಿತ್ತು. ಇದೆಲ್ಲವನ್ನು ಮೀರಿ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕಿತ್ತು.
ನಿಮ್ಮ ಆಶೀರ್ವಾದ,ಅಡೆ ತಡೆಗಳ ಮಿರಿ ಎದ್ದು ಬಂದಿರುವೆ, ಗೆಲುವಿನ ಮೆಟ್ಟಿಲು ಹತ್ತುತ್ತಿರುವೆ.
ಅಕ್ಕಂದಿರ ಮಕ್ಕಳು ನಿಮ್ಮ ಫೋಟೊವನ್ನೆ ಪ್ರೀತಿಸುತ್ತಿದ್ದಾರೆ,ಅಮ್ಮ ಹೇಳುವ ಎಲ್ಲ ಕಥೆಗಳಿಗೆ ಈಗಲೂ ನೀವೇ ನಾಯಕ. ಬದುಕುತ್ತಿದ್ದೆವೆ ಎನ್ನುವುದಕ್ಕಿಂತ ಬೆಳೆಯುತ್ತಿದ್ದೆನೆ ಎಂದು ಹೇಳಲು ಖುಷಿ ಪಡುತ್ತೇನೆ.
ದೈಹಿಕವಾಗಿ ನಿವಿಲ್ಲದಿದ್ದರು ಮಾನಸಿಕವಾಗಿ ನಮ್ಮನ್ನು ಆವರಿಸಿದ್ದಿರಿ. ಆಶೀರ್ವಾದ ಕೇಳಿದರೆ ಅಲ್ಪನಾಗುವೆನೆನೋ,ನೋವು ನಲಿವಿನೊಳಗೊಂದಾಗಿ ಬದುಕಿಗೆ ಸ್ಫೂರ್ತಿಯಾಗಿ, ಎಂದಿಗೂ ನಮ್ಮೊಂದಿಗೆ.

"ಎಂದೂ ಇಲ್ಲ ಎಂದುಕೊಂಡಿಲ್ಲ,ಎಲ್ಲಾರೊಳಗೊಂದಾಗಿ
ಬೆಲ್ಲದ ಸವಿಯಂತಿರಲು ನಿಮ್ಮ ನೆನಪು"

-


37 likes · 13 comments · 1 share
Old_Monk 12 OCT AT 16:25


ಅಂದು ನೀನೇ ಹೇಳಿದ್ದೆ
ನಾವಿಬ್ಬರೂ ಪ್ರೀತಿಯ ಸಾಗರದಲ್ಲಿ ಮುಳುಗಿದ್ದೇವೆಂದು
ಅದಕ್ಕೆ ನಾನು ಬರೀ"ಮುತ್ತು"ಹುಡುಕುವ ಕಾಮಗಾರಿ ಶುರುಮಾಡಿದೆ

ನೀವೇ ಹೇಳಿ ಇದು ನನ್ನ ತಪ್ಪಾ..? 😉

-


54 likes · 22 comments
Old_Monk 10 OCT AT 19:04

ಬಿಳಿ ಬಣ್ಣ ಬದಲಾಗಿ ಇಳಿಸಂಜೆ ರಂಗು
ಅದೇ ತಂಗಾಳಿ ಹೊಸದೊಂದು ಗುಂಗು
ಹರಿವ ನದಿ ನಿಂತಂತೆ,ಮರಳಿ ನೀನು ಬಂದಂತೆ
ಎಲ್ಲೋ ದೂರದ ಹಾಡಿಗೆ ಇಬ್ಬರೂ ದನಿಯಾದಂತೆ
ನನ್ನ ನಿನ್ನ ತಪ್ಪಿಲ್ಲ,ಒಪ್ಪಿಕೊಳ್ಳಲು ಮನಸ್ಸಿಲ್ಲ
ಯಾರೇನೆ ಅಂದರು ಕಹಿ ಒಲವಿಗೆ ಬರವಿಲ್ಲ ಸಿಹಿ ಒಲವಿಗೆ ಸಾವಿಲ್ಲ

-


38 likes · 14 comments
Old_Monk 7 OCT AT 17:02

"ಸುತ್ತ ಇರುವ ದುಷ್ಟ ಶಕ್ತಿಗಳ ನಾಶಕ್ಕೆ ನಿಮ್ಮ ಒಳ್ಳೆಯ ಚಿಂತನೆಗಳು ಆಯುಧಗಳಾಗಲಿ"

HAPPY AYUDHA POOJA AND DASARA TO YOU AND YOUR FAMILY 💐💐

-


49 likes · 12 comments
Old_Monk 6 OCT AT 22:31

ಬೀಡಿ ಸಿಗರೇಟ ಎಳೆದು ಬಿಡು
ಎಣ್ಣೆ ಅಂಗಡಿಗೆ ವಿಸಿಟು ಕೊಡು
ಇರೋದೊಂದೇ ಲೈಫು ಮಗ
ಖುಷಿಯಾಗಿ ಬದುಕಿ ಬಿಡು

-


47 likes · 15 comments
Old_Monk 6 OCT AT 22:24

ಹೋದ್ರೆ ಹೋಗ್ಲಿ ಬಿಟ್ಟಾಕು
ನೆನಪನೆಲ್ಲ ಸುಟ್ಟಾಕು
ಅವಳ ಹೋದ್ರೆ ಏನಂತೆ
ಇನ್ನೊಂದ ಹುಡ್ಗಿಗೆ ಕಾಳ ಹಾಕು

-


45 likes · 12 comments
Old_Monk 6 OCT AT 16:59

ಒಂದು ಊರು ಎರಡು ಮನೆ
ಒಂದು ನೀತಿ ಇನ್ನೊಂದು ಅನೀತಿ
ನೀತಿ ನಿದ್ದೆಯಲಿ ಕನವರಿಸುತಿತ್ತು
ಅನೀತಿ ನಿದ್ದೆಗೆಟ್ಟು ಹೊರಳಾಡುತ್ತಿತ್ತು

-


44 likes · 16 comments · 1 share
Old_Monk 6 OCT AT 16:50

ಹೀಗೆ ಬದುಕಬೇಕೆಂದು ಯಾರು ಬರೆದಿಟ್ಟಿಲ್ಲ

"ನಮ್ಮ ಬದುಕು ನಮ್ಮ ಆಯ್ಕೆ"

-


43 likes · 2 comments
Old_Monk 6 OCT AT 16:39

ಹಳೆ ಮಾತು,ಹೊಸ ಮೌನ
ಇಳಿಸಂಜೆಯಲಿ ತಲ್ಲಿಣ
ಅವಳಿದ್ದರೆ ಜೊತೆಯಲ್ಲಿ ಅದೇ ನನಗೆ ಸಾಂತ್ವನ

-


38 likes · 12 comments
Old_Monk 5 OCT AT 19:05

ಬದುಕಿನಲ್ಲಿ ಬಣ್ಣಗಳಿವೆ
ಬೇಕಾದ ಬಣ್ಣ ಬಳಿದುಕೊಳ್ಳುವುದು ನಿನಗೆ ಬಿಟ್ಟದ್ದು

-


36 likes · 1 share

Fetching Old_Monk Quotes

YQ_Launcher Write your own quotes on YourQuote app
Open App