"ಕೊಟ್ಟಾದರು ಕೊಡು ಶಿವನೇ.. ಅವಳ ಸೂಚನೆಯೆನ್ನ! 🧐
ಎಷ್ಟು ಕಾಯೋದು.. ನಾ_ಅವಳನ್ನ! 🥴
ಇನ್ನೆಷ್ಟು ಪರೀಕ್ಷೆ ಮಾಡ್ತಿಯಪ್ಪ.. ನನ್ನ ತಾಳ್ಮೆಯೆನ್ನ! 🙃
ಆದಷ್ಟು ಬೇಗನೆ ಕರುಣಿಸೋ ಶಿವನೇ.. ನನ್ನವಳನ್ನ! 😘
.
.
ಅವಳಿಗು ತಿಳಿಸೋ ಶಿವನೇ✨..
ನಾ_ಅವಳ ಆಗಮನವ ನಿರೀಕ್ಷಿಸುತ್ತಿರುವುದನ್ನ!!"😉❤️
-
ನೇರ ಹೃದಯದಿಂದಲೇ💗 😘!!
Instagram id : right_from_d_heart
"ಇವರ ವಿವೇಕತೆ ಎಷ್ಟು ಪ್ರಬಲವಾಗಿತ್ತು ಎಂದರೇ🔥..
ಪ್ರಪಂಚವೆ.. ಇವರನ್ನು ಮನಸಾರೆ ಕೊಂಡಾಡುವಂತೆ! ✨
ಭಾರತದ.. ಮನೆ_ಮನಸ್ಸುಗಳು ಹೆಮ್ಮೆ ಪಡುವಂತೆ! ✨
ವಿವೇಕಕ್ಕೆ.. ಆನಂದ ವಾಗುವಂತೆ! ✨
ಪ್ರತಿ_ಕಾಲದ ಯುವಪೀಳಿಗೆಯನ್ನು.. ಪ್ರೇರೇಪಿಸುವಂತೆ!✨
ಹೀಗೆ.. ನಾನಾ_ರೀತಿ!
ತುಂಬಾನೆ.. ಶ್ಲಾಘ್ಯನೀಯ_ರೀತಿ! 😊
.
.
ಎಂದೋ ಒಪ್ಪಿ_ಅಪ್ಪಿದೆ ಇವರನ್ನು.. ಪ್ರಪಂಚವು!
ನಾ_ಹೇಳಿ ತಿಳಿಯಬೇಕಿಲ್ಲ.. ಇವೆಲ್ಲವು!
ಆದರು ಗೀಚಿರುವೆ.. ಇವರ ಕುರಿತ ಕವನವು!
ಈ ರೀತಿ ಸಲ್ಲಿಸಿಹೆ.. ಇವರಿಗೆ ನನ್ನ ನಮನವು!!" 😊✨-
"ಸಾಗುತಿಹೆ_ನಾ ಮನ ಹೋದ ಕಡೆಗೆ.. ಏನು ಎತ್ತವ ಕೇಳದೆ!
ಮಾಮೂಲಿ ಪಯಣವನ್ನು.. ಅಲ್ಪಮಟ್ಟಿಗಾದರು ಬದಲಿಸಿದೆ!
ಜೊತೆಯ ಹುಡುಕೋ ಗೋಜಿಗೆ ನಾ.. ದೂರ ಉಳಿದಿಹೆ!
ಕಾರಣ.. ನಾ_ನನ್ನನೇ ತುಂಬಾ ಪ್ರೀತಿಸಿಹೇ!
ಹೀಗಿರುವಾಗ.. ಕಷ್ಟವು ಜೊತೆಯನ್ನೊ ಕಲ್ಪನೆಯೆ! 🙃
.
.
ಈ ರೀತಿಯ ಭಾವನೆ ಬರಿ_ನನಗೇನ?
ಇಲ್ಲ ಈ_ವಯಸಲಿ ಸಹಜವೇನ?!
ನಾ ಅರಿಯೆನು...
ಸ್ಪಷ್ಟತೆ ಇಲ್ಲದೆ ಸಾಗುತಿಹೆ!
ಬಿಡುವಿಲ್ಲದೆ ಇರುತಿಹೆ!
ಬರಿ ಪದಗಳ_ಸಹವಾಸದಿ.. ನಾನಿಹೆ!!" 🙇✨-
"ಧಾವಿಸಿ ಬರುತಿದೆ ಒಲವು..
ನಿನ್ನಯ ಮನಸಿನ ಬಳಿಯೇ!
ದಾರಿಯು ತಪ್ಪದ ಹಾಗೆ..
ಕರೆದುಕೋ ನಿನ್ನಯ ಬಳಿಯೇ!
ಒಲವಿನ ಅಪ್ಪುಗೆಯಲ್ಲಿ..
ಇರಿಸಿಕೋ ನಿನ್ನಯ ಬಳಿಯೇ!
ನನ್ನ ಜೊತೆಯು ನೀನೆ ಎಂದಿಗೂ.. ತಿಳಿಯೇ!!"
"ರಾಶಿ_ರಾಶಿ ಕನಸದು ನನ್ನ ಮನದಲಿ..
ಎಲ್ಲ ಕನಸಿನಲ್ಲಿಯೂ ನೀನೆ ಕೇಳಿಲ್ಲಿ!
ಕೋಟಿ_ಕೋಟಿ ಕಾರಣ ಹುಡುಕ ಬೇಡವೆ..
ಬಂದಹಾಗೆ ಒಲವನು ಅಪ್ಪಿಕೊಳ್ಳೆಯೇ!
ಸಾಧಾರಣ ಹುಡುಗನ!
ಅಸಾಧಾರಣ ಒಲವನು!
ಹೊತ್ತು ನಿಂತಿಹ.. ಅಪ್ಪಿ ತಬ್ಬಿಕೋ.. ಒಲವ ಹುಡುಗನ!!" 💕-
"ನೀನಿಲ್ಲದ ನಾನು.. ನಾನಿಲ್ಲದ ನಾನೇ!
ನೀನ್_ಒಪ್ಪದ ನಾನು.. ಹೇಗಿದ್ದರೇನೇ!
ನೀನಿಲ್ಲದೆ ಜೊತೆಗೆ.. ಏನಿದ್ದರೇನೇ!
ನಿನ್_ಅಪ್ಪುಗೆ ಹೊರೆತು.. ನಾ_ಇರುವೆನೇನೆ?
ನಿನಗಲ್ಲದ ಮನವು.. ಏನಾದರೇನೆ!
ನಿನಗೆ ಬೇಡದ ನಾನು.. ನನಗು ಸಹ ಬೇಡದವನೇ!!" 💔-
"ಇಷ್ಟವಿಲ್ಲದ..
ಕಷ್ಟದೊಡನೆಯೇ ಬದುಕು! 🙄
ಇಷ್ಟವಿರುವ ಇಷ್ಟದೊಡನೆ ಇರಲು..
ಪಡೆದುಕೊಂಡು ಬಂದಿರಬೇಕು! 😟-
"ಒಂದೊಳ್ಳೆ ಒಲವಾಗಿ!
ಬದುಕಿಗೆ ನೆರವಾಗಿ!
ಸಿಕ್ಕರೆ ನಾ_ಧನ್ಯನು..
ಒಂದೊಳ್ಳೆ ತಿರುವಲ್ಲಿ!
ಬದುಕಿನ ಪಥದಲ್ಲಿ!
ಇದ್ದರೆ ನಾ_ಧನ್ಯನು.."
"ಒಲವೊಂದು ಒಲಿದಾಗ!
ಮನವೆಲ್ಲ ಕುಣಿದಾಗ!
ಕನಸೆಲ್ಲ ನನಸಾಗಿ ರಂಗೇರಿದಂತಾದಾಗ!
ಕಣ ಕಣದಿ ಅನುರಾಗ!
ಮೈ ಮನದಿ ಹರಿದಾಗ!
ಆದಂತೆಯೇ ನಾ ಧನ್ಯ.. ಅಂದು!! ❤️-
"ಕನಸುಗಳ ಸಲುವಾಗಿಯೇ ಈ ಬದುಕು!
ಅದ ಹೊರೆತು.. ಎಲ್ಲ ಕಾಲ್_ಕಾಲಿಯೇ ತುಣುಕು! ✨
ಒಲವಿನ ತಾಣವೆ ಈ ಮನಸು!
ಅದ ಹೊರೆತು.. ಇನ್ನೆಲ್ಲಿ ಸೊಗಸು! ✨
ಸ್ನೇಹದ ರೀತಿಯೆ ಒರಟು ಒಮ್ಮೊಮ್ಮೆ!
ನಿಜವೆಲ್ಲ.. ಕಹಿನೆ ಅಲ್ವ ಸುಮ್_ಸುಮ್ನೆ! ✨
ಆಡಂಬರಗಳ ಮೇಲೆಯೆ ಸದಾ ಮನಸು!
ಸರಳತನದ ಶ್ರೀಮಂತಿಕೆ.. ಅರಿಯದು ಎಲ್ಲ ಮನಸು!!" ✨-
"ಶಾಲೆಯಲ್ಲಿ ಪಾಠ ಹೇಳಿದ 'ಶಿಕ್ಷಕರು'.. ಒಂದ್_ಕಡೆ!
ಜೀವನಕ್ಕೆ ಪಾಠವಾಗಿ ಬಂದ 'She_ಕ್ಷಕರು'.. ಇನ್ನೊಂದ್_ಕಡೆ ✨
ಒಂದ್_ಕಡೆ.. professional!
ಇನ್ನೊಂದ್_ಕಡೆ.. award winning actors all! ✨
ಒಂದ್_ಕಡೆ.. knowledge ಬಗ್ಗೆ ತಿಳಿಸೋರು!
ಇನ್ನೊಂದ್_ಕಡೆ.. don't judge people blindly ಬಗ್ಗೆ ಅರ್ಥ ಮಾಡಿಸೋರು! ✨
ಒಂದ್_ಕಡೆ..
ಏನ್_ಕಲಿಬೇಕು.. ಹೇಗ್_ಇರಬೇಕು.. ಅಂತ ತಿಳಿಸೋರು!
ಇನ್ನೊಂದ್_ಕಡೆ..
ಏನ್_ಮರಿಬೇಕು.. ಹೇಗ್_ಇರಬಾರದು.. ಅಂತ ಹೇಳಿಕೊಡೋರು! ✨
.
.
ಇಬ್ಬರ ಪಾತ್ರವು ದೊಡ್ಡದೆ ಬದುಕಲ್ಲಿ!
'ಒಳ್ಳೇದು' ಜೊತೆಗೆ 'ಕೆಟ್ಟದು' ಇಲ್ಲದೆ ಬದುಕೆಲ್ಲಿ!!" 🙃-
"ಸಾಧನೇ..
ಸರಳವಾಗಿ ಬದುಕುವುದು!
ನಿಷ್ಕಲ್ಮಷದಿ ಇರೋದು! ✨
ಸಾಧನೇ..
ನಿನ್ನ ನೀ ಅರಿಯುವುದು!
ಮತ್ತೊಬ್ಬರನ್ನು ಮೆಚ್ಚಿಸುವ ಯೋಚನೆ ಮಾಡದಿರುವುದು! ✨
ಸಾಧನೇ..
ಹಂಚಿಕೊಂಡು ಬಾಳುವುದು!
ಹೊಂಚಾಕದೇ ಇರುವುದು! ✨
ಸಾಧನೇ..
ನಗುವಿನಲ್ಲೆ ಉತ್ತರಿಸುವುದು!
ನಗುವಿನಲೆ ತರಿಸುವುದು! ✨
ಸಾಧನೇ..
ಕನಸುಗಳು ಕರಗಿದರು ಬಾಳುವುದು!
ಮನಗಳವು ದೂರಕ್ಕೆ ಸರಿದರು ಸಾಗುವುದು!!" ✨-