virawgi jain   (ವಿರಾಗಿ ಜೈನ್)
1.8k Followers · 1 Following

ಭಾಷೆ ಕನ್ನಡ ಭಾವನೆ ಕನ್ನಡಿಗ
Joined 25 April 2018


ಭಾಷೆ ಕನ್ನಡ ಭಾವನೆ ಕನ್ನಡಿಗ
Joined 25 April 2018
virawgi jain AN HOUR AGO

ಹಿಂದಿನ ಅರಿವಿರಲಿ ಈಗಿನ ಪರಿವಿರಲಿ
ನಾಳೆಯ ವಿಶ್ವಾಸ ಮೊದಲಿರಲಿ
ಮಾತು ಹಿಡಿತದಲಿ ಬದುಕು ಸರಳತೆಯಲಿ
ಗುಣ ನಡತೆ ಇನ್ನೊಬ್ಬರು ನೋಡಿ ಕಲಿಯುವಂತಿರಲಿ

-


22 likes · 2 comments
virawgi jain 9 HOURS AGO

ಒಣ ಹವೆಯಲ್ಲೂ ಎದೆಯೇಕೊ ನಡುಗುತ್ತಿದೆ
ನೀ ನೆನಪಾದ ಸಿಹಿ ಕಂಪನಕ್ಕೊ
ಇನ್ನೂ ಕಲೆಯಾಗೆ ಉಳಿದ ನಿನ್ನ ಪ್ರೀತಿಯ ಕ್ರೌರ್ಯಕ್ಕೊ

-


13 likes · 3 comments
virawgi jain YESTERDAY AT 21:11

ಅಂದು ಅಂತರ ಕಾಯಲು ಸರಿ ಇರಲಿಲ್ಲ ವಾತಾವರಣ
ಇಂದು ಅಂತರ ಕಾಯುತಿರುವೆ ಬರಬಾರೆಂದು "ಕರೊನ"

-


Show more
41 likes · 10 comments
virawgi jain YESTERDAY AT 19:49

(ಇಂದೇಕೊ ಕೊಂಚ ಹಂಚಿಕೊಳ್ಳುವ ಮನಸಾಗಿದೆ)

"ಅನು" ದಿನವೂ ಮತ್ತದೇ ಮೊಬೈಲನ ಮಂದ ಬೆಳಕಿನಲ್ಲಿ
ನಿನ್ನ ಮುಖ ದಿಟ್ಟಿಸುತ್ತಿರುವೆ
ಕಾರಣ ಇಷ್ಟೇ ನೀ ಇದ್ದ ಕೆಲವು ದಿನ ನನ್ನ ಬದುಕಿನ ಗೀತೆಗೆ "ರಾಗ"ವಾಗಿದ್ದೆ

-


42 likes · 6 comments
virawgi jain YESTERDAY AT 16:48

ಯಾರು ಎಲ್ಲಿ ಯಾವಾಗ ಯಾರಿಗೆ
ಕೊನೆಗೆ ಎಲ್ಲ ಸೇರುವ ಮಣ್ಣಿಗೆ

-


34 likes · 4 comments
virawgi jain 30 MAR AT 20:58

ಏನೆಂದು ಹೆಸರಿಡಲಿ
ಕಾಮನಬಿಲ್ಲಿಗೂ ಮೀರಿದ ಚೆಂದಕೆ
ಮಲ್ಲಿಗೆ ಹೂವಿಗೂ ಮೀರಿದ ಗಂಧಕೆ
ತಿದ್ದಿ ತಿಡಿದ ಮೈ ಮಾಟಕೆ
ಕದ್ದು ನೋಡುವ ಒರೆ ನೋಟಕೆ
ಮುತ್ತು ಹೆಚ್ಚಾಗಿ ಏರುವ ಮತ್ತಿಗೆ
ಕಾವು ಹೆಚ್ಚಾಗಿ ಏರಿಳಿಯುವ ಉಸಿರಿಗೆ
ನೋವು ಹೆಚ್ಚಾಗಿ ಪರಚುವ ಉಗುರಿಗೆ
ಏನೆಂದು ಹೆಸರಿಡಲಿ
ಏನೆಂದು ಹೆಸರಿಡಲಿ

(no offense)

-


46 likes · 6 comments
virawgi jain 29 MAR AT 12:36

ಉಸಿರಿನ ಜೊತೆಗೊಂದು ಹೆಸರು
ಮಾತಿನ ಜೊತೆಗೊಂದು ಮೌನ
ಕನಸಿನ ಜೊತೆಗೊಂದು ಆಸೆ
ಆಸೆಯ ಜೊತೆಗೊಂದು ಬದುಕು
ಬದುಕಿನಲ್ಲಿ ನಾನು,ನೀ ಇದ್ದರೂ ಇಲ್ಲದಿದ್ದರೂ
ಇಲ್ಲದಿದ್ದರೆ ಸ್ವಲ್ಪ ತೊಡಕು
ಇದ್ದರೆ ಪೂರ್ತಿ ಬೆಳಕು

-


54 likes · 23 comments
virawgi jain 28 MAR AT 20:16

ನಿನ್ನ ಕಾಲ್ಗೆಜ್ಜೆ ಒಳಗೊಂದು ನಿನಗೂ ಗೊತ್ತಿಲ್ಲದ ಜಾದು ಇದೆ
ಪ್ರತಿ ಬಾರಿ ಗೆಜ್ಜೆ ಸದ್ದು ಕೇಳಿದಾಗ ನಿನ್ನ ವಶವಾಗಿ ಬಿಡುವಷ್ಟು ನನ್ನ ಸೆಳೆಯುತ್ತದೆ

-


52 likes · 16 comments
virawgi jain 28 MAR AT 7:52

ಕೋರೊನಗೆ ಸಿದ್ದ ಸೂತ್ರ
"ಮಹಾವೀರ ವಾಣಿ"
ಮನೆಯಲ್ಲಿದ್ದು-ನೀವೂ ಬದುಕಿರಿ
ಹೊರಗಡೆ ಹೋಗದೆ- ಇನ್ನೊಬ್ಬರನ್ನು ಬದುಕಲು ಬಿಡಿರಿ

-


53 likes · 6 comments
virawgi jain 27 MAR AT 20:04

#555ನೇ ಬರಹ
ಉರಿವ ಬಿಸಿಲ ನಡುವೆ ಒಂದು ತಂಪು ಜಾಗ ಸಿಕ್ಕಂತೆ
ಮರಳುಗಾಡು ಮಧ್ಯ ಕುಡಿವ ನೀರು ಹರಿದು ಬಂದಂತೆ
ದಟ್ಟ ಕಾಡ ನಡುವೆ ಸ್ವಚ್ಛ ಕಾಲುದಾರಿ ಕಂಡಂತೆ
ಕೊರೆವ ಚಳಿಯ ಒಳಗೆ ಕಂಬಳಿಯ ಹೊದಿಸಿದಂತೆ
ಅಲೆಮಾರಿಯ ತಲೆಗೊಂದು ತಾಯಿ ಮಡಿಲು ಸಿಕ್ಕಂತೆ
ಬಡವನ ಕನಸು ಮರುದಿನವೆ ನನಸಾದಂತೆ
ಬೆಳೆಯುತ್ತಿದ್ದರೂ ಇನ್ನೂ ಮಕ್ಕಳಾಗೆ ಇರುವಂತೆ
ಕಷ್ಟ ಬಂದರೂ ಮಂಜಿನ ಹಾಗೆ ಕರಗಿ ಬಿಡುವಂತೆ
ಸುಖ ಬಂದರೂ ತಲೆಗೆರದೆ ಸರಳವಾಗಿರುವಂತೆ
ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋಗುವಂತೆ
ಅವಳದೇ ನೆನಪಿನಲ್ಲಿ ವಿರಹ ಗೀತೆ ಬರೆಯುವಂತೆ
ಸ್ನೇಹದಲಿ ಎಂದು ಬಿರುಕು ಬರದಂತೆ
ಬಂದರೂ ಸುಂದರ ಆಕಾರವಿರುವಂತೆ
ರೈತ ಜಗಕೆಲ್ಲ ಅನ್ನ ನೀಡುವಂತೆ
ತಿಂದು ಉಂಡು ಜಗವೆಲ್ಲ ಸುಖದಿಂದ ಇರುವಂತೆ
ಜಗದಗಲ ಎಲ್ಲರೂ ನಿನ್ನೆ ನಂಬಿರುವಂತೆ
ನೀ ಬಂದು ಎಲ್ಲರನು ಕಾಪಾಡಿದಂತೆ

"ಎಲ್ಲರೂ ಹೇಳುತಿಹರು ಇದು ನನ್ನ ಕನಸಂತೆ
ನಿಜ ಮಾಡಲೇಬೇಕು ಕಾರಣ ನೀ ದೇವರಂತೆ"

-


50 likes · 28 comments

Fetching virawgi jain Quotes

YQ_Launcher Write your own quotes on YourQuote app
Open App