QUOTES ON #ಮಳೆ

#ಮಳೆ quotes

Trending | Latest
14 JUL 2020 AT 22:03

ವಾಗ್ದೇವಿಗೆ
ವಾಗ್ದಾನವ ನೀಡಿರುವಿರಾ
ವಿವರವಾಗಿ
ಬರೆಯುವುದಿಲ್ಲವೆಂದು!
ಬರವಣಿಗೆ
ಪಾಪ! ಈ ಕಲೆಗೆ
ನೋಯಿಸಬೇಡಿ
ಇದು ನಮ್ಮೆಲ್ಲರಿಗೂ
ಶಾರದೆಯ ಬಳುವಳಿ
ಮರೆಯದಿರಿ!
ನೋವೂ ದುಃಖ ಯಾರಿಗಿಲ್ಲ
ಅದಕ್ಕಾಗಿ ತಮ್ಮೊಳಗಿರುವ
ಪ್ರತಿಭೆಗೆ ಮೋಸಮಾಡದೆ
ಮತ್ತೆ ಬರಲಿ ನಿಮ್ಮೀ
ಬರವಣಿಗೆಯ
ಮೆರವಣಿಗೆ...

-



ಈ ಸಂಜೆಯ ತಂಪಿನ
ಮಳೆಯ ಇಂಪಿನ ಹಾಡಿಗೆ
ನಿನ್ನ ಜೊತೆ ಕಳೆಯುವ
ಹಿತ ಬೇರೊಂದಿಲ್ಲ

ಬಿಸಿ ಉಸಿರಿಗೆ ಉಸಿರ ತಾಗಿಸಿ
ಅಧರಗಳ ಸ್ಪರ್ಶ
ಸವಿಯುತಿಹ ಭಾವನೆಗಳ
ಝೇಂಕಾರಕೆ ನಿನ್ನೊಂದಿಗೆ
ಕಳೆಯುವ ಸುಖ

ಒಂದೊಂದು ಗುಟುಕಿಗೂ
ನೀ ನೀಡುತಿಹ ರುಚಿಯ
ಅನುಭವ ಒಳಗೊಳಗೆ
ಒಲವ ತಳಮಳ

ಏನಿದೆಂಥ ಮೋಹ
ಕಂಗಳು ಬಿಗಿದಪ್ಪಿ
ನುಡಿಯುತಿಹ ನುಡಿ ಮುತ್ತಿನ
ಮಾತಿನ ಸ್ವಾದ....ಆಹಾ!!! ಚಹಾ,,,,💙
✍Thilaka kulal











-




ಸುರಿಯುತಿಹ ಮಳೆಯಲಿ
ಮಿನುಗುತ್ತಿದೆ ಭಾವನೆಗಳು
ಈ ಪುಟ್ಟ ಹನಿಗಳಂತೆ
ನಿನ್ನೊಲವ ಸಾಮರಸ್ಯದಲಿ

ಸವಿಗನಸಿನ ಸವಿನೋಟದಲಿ
ಮುದ್ದಾಡುತಿಹ ಹನಿಗವನ
ಒಲವಿನ ಸವಿನುಡಿಯಲಿ
ಜಿನುಗುತಿದೆ ನಿನಾದ ನೂಪುರಕೆ

ಮರೆತೆ ಮನವೇ ಅರೆಕ್ಷಣ
ಸುಂದರ ಸೊಜಿಗಕೆ
ಹೇ ಮಳೆರಾಯ ತಬ್ಬಿಕೊ ಒಮ್ಮೆ
ಈ ಭಾವನೆಗಳ ಹುದ್ದೆಗೆ
ನಾಯಕನಂತೆ ಹೃದಯಕೆ...
✍Thilaka kulal











-



ಕನಸಿನ ಗೋಪುರದ
ಹಿಂದೆ ನಡೆದಾಡುತಿದೆ
ಒಲವ ನೂಪುರದ
ಕಿರುನಗೆಯ ಹೆಜ್ಜೆ

ಮನದಿ ನುಡಿಪ
ತಾಳಕೆ ನಿನ್ನ ಹೆಸರಿನ
ನಾದ ಲಹರಿ ಮೆಲುಕು
ಹಾಕುತ್ತಿದೆ ಭಾವನೆಗಳ ಮೀರಿ
ಪ್ರೀತಿಯ ಮಳೆ

ಹೆಚ್ಚೇನು ಹೇಳದೆ ಹುಚ್ಚು
ಪ್ರೀತಿಯ ನಗೆ
ನಿನ್ನೊಲವ ಧಾರೆಗೆ
ನಾಚಿ ತುಸು ಮೆತ್ತಗೆ
ಕನವರಿಸಿದೆ ಹೃದಯದ ಕರೆ...
✍️ Thilaka kulal


-


7 APR 2020 AT 18:29

ಭೂಮಿಯು ಕಾಯುತ್ತ ಕುಳಿತಿಹಳು
ವರುಣನ ಆಗಮನಕ್ಕೆ,
ವರುಣನ ಮೊದಲ ಭೂ ಸ್ಪರ್ಶಕ್ಕೆ
ನಾಚುತ್ತ ಮೆತ್ತಗೆ ಆಗುವಳು ಇಳೆ
ಬಾನು ಕೊಟ್ಟಂತಹ
ಸಿಹಿ ಮುತ್ತು ಮೈ ಮೆತ್ತಿಹುದು
ಅದಕ್ಕೆ ಸರಿ ಹೊಂದುವ ಹಾಗೆ
ಸುತ್ತಲೂ ಕತ್ತಲು ತುಂಬಿಹುದು
ತಂಗಾಳಿಯು ಸಿಹಿಯಾಗಿಯೇ
ರಭಸದಿಂದ ಬೀಸುತಿಹುದು..

-




ಅಂತರಾಳದ ಭಾವ
ಹೂ ನಗೆಯಲಿ ಅರಳುತಿದೆ
ಭಾವನೆಗಳ ಬಳ್ಳಿ
ಚಿಗುರುತಿದೆ ಎಲೆಯಾಗಿ

ಇಬ್ಬನಿ ತಬ್ಬಿ
ನಳನಳಿಸುತಿಹ ಸೌಂದರ್ಯಕೆ
ಮೆರಗು ನೀಡುತಿಹ ವಯ್ಯಾರ
ಒಂಟಿತನದ ಕುಂಟು ನೆಪ ಒಡ್ಡಿ
ಕಾಯುತಿದೆ ಹೃದಯದ ವಾಣಿಗಾಗಿ

ನಾಚಿ ನಿಂತ ಭಾವಕೆ
ಇಳೆಯ ಬೆಳಕು ಹಸಿರಾಗಿ
ಮಧುರ ಬಾಂಧವ್ಯದ ಇಂಚರ
ಬೆಸೆದಿದೆ ತನುವು ಮಳೆಯಾಗಿ...
✍Thilaka kulal















-


6 APR 2020 AT 21:14

ಅದು ಕೂಡ
ಬರಿ ಅವಳ
ನೆನಪ ಹನಿಯನ್ನೆ
ಸುರಿಸಿತು...

-


6 APR 2020 AT 22:14

ಮನಕೀಗ ಕುಣಿವಾಸೆ, ಸುರಿವ ಮಳೆಯಲಿ,
ಆದರೆ,
ಶೀತ, ಕೆಮ್ಮು, ಜ್ವರ ಬಂದರೆ ಎಂಬುದೇ ದೊಡ್ಡ ಆತಂಕ ಈ ಕೊರೋನ ದಿನಗಳಲಿ.

-


3 MAY 2021 AT 13:35

ನಿಮ್ಮಿಬ್ಬರ ಈ ಹುಚ್ಚು ಮೊಂಡಾಟವ
ಮುರಿಯಲಾದರೂ ನಾನಿರಬೇಕಿತ್ತು 😜

-


31 JUL 2020 AT 2:51

ಭಾವನೆಗಳಿರದೆ ಮರಳುಗಾಡಾಗಿದ್ದ ಈ ಹೃದಯದಿ,
ಪ್ರೀತಿ ಮಳೆಯ ನೀ ಸುರಿಸಿದೆ.
ಬರಡು ಭೂಮಿಯಂತಿದ್ದೆನ್ನ ಮನದಿ,
ಪ್ರೇಮದಾ ಹೂ ಚಿಗುರಿಸಿದೆ.

-