QUOTES ON #ಬಿಸಿಲಮಲ್ಲಿಗೆ_ಸುಭಾಷಿತ

#ಬಿಸಿಲಮಲ್ಲಿಗೆ_ಸುಭಾಷಿತ quotes

Trending | Latest
26 OCT 2021 AT 7:00

"ಸುಶೋಭಿತ ಸುಭಾಷಿತ"
ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್|
ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್||
- ಹಿತೋಪದೇಶ ಸುಹೃದ್ಭೇದ - ೪೬

ಸ್ವಭಾವತಃ ಸುಂದರವಾದುದು ಮತ್ತು ಸುಂದರವಲ್ಲದು ಎಂದು ಏನಾದರೂ ಇದೆಯೇನು? ಯಾರಿಗೆ ಯಾವುದು ಇಷ್ಟವಾಗುತ್ತದೆಯೋ ಅವರವರಿಗೆ ಅದು ಸುಂದರ.
(ಸೌಂದರ್ಯವು ನೋಡುಗರ ಕಣ್ಣುಗಳಲ್ಲಿದೆ)

-


23 OCT 2021 AT 7:14

"ಸುಶೋಭಿತ ಸುಭಾಷಿತ"
ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ|
ಪಶ್ಯೇಹ ಮಧುಕರೀಣಾಂ ಸಂಚಿತಮರ್ಥಂ ಹರಂತ್ಯನ್ಯೇ||
ಪಂ ತಂ. ಮಿತ್ರಪ್ರಾಪ್ತಿ- ೧೫೬

ಕೂಡಿಟ್ಟ ಹಣವನ್ನು ಅನುಭವಿಸಬೇಕು, ಸದುದ್ದೇಶದಿಂದ ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು. ಸುಮ್ಮನೇ ಧನ ಸಂಗ್ರಹ ಮಾಡಬಾರದು. ಜೇನುಗಳು ಕೂಡಿಟ್ಟ ಜೇನುತುಪ್ಪವನ್ನು ಹೇಗೆ ಇತರರು ಅಪಹರಿಸುವರೋ ಹಾಗೆಯೇ ಅನವಶ್ಯಕವಾಗಿ ಸಂಗ್ರಹಿಸಿಟ್ಟ ಸಂಪತ್ತು ಅನ್ಯರ ಪಾಲಾಗುವುದು.
(ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು ನೆನಪಿರಲಿ)

-


7 OCT 2021 AT 7:10

"ಸುಶೋಭಿತ ಸುಭಾಷಿತ"
ಅನುಭವೇನ ವಿನಾಧಿಗತಂ ಶ್ರುತಂ
ಭವತಿ ನೈವ ನೃಣಾಮ್ ಉಪಕಾರಕಂ|
ದಧನಿ ವರ್ತತ ಏವ ಹವಿಃ ಪುನಃ ನ
ಮಥನೇನ ವಿನಾ ತದವಾಪ್ಯತೇ||
- ಸುಭಾಷಿತ ರತ್ನಭಾಂಡಾಗಾರ

ಎಷ್ಟೇ ಓದಿ ಕಲಿತಿರಲಿ ಅಥವಾ ಕೇಳಿ ತಿಳಿದಿರಲಿ, ಸ್ವತಃ ಅನುಭವವಿಲ್ಲದೆ ಗಳಿಸಿದ ಜ್ಞಾನ ಯಾರಿಗೂ ಉಪಯುಕ್ತವಾಗುವುದಿಲ್ಲ. ಮೊಸರಲ್ಲಿ ತುಪ್ಪವಿದ್ದರೂ
ಮೊಸರನ್ನು ಕಡೆಯದೇ ತುಪ್ಪ ಸಿಗುವುದೇ?

-


6 AUG 2021 AT 7:11

" ಸುಶೋಭಿತ ಸುಭಾಷಿತ "
(ಸುಂದರವಾದ ಒಳ್ಳೆಯ ಮಾತು ಸಂಗ್ರಹ)

ಚಿಂತಾ ಚಿತಾ ಸಮಾನಾsಸ್ತಿ ಬಿಂದು ಮಾತ್ರ ವಿಶೇಷತಃ |
ಸಜೀವಂ ದಹತೇ ಚಿಂತಾ ನಿರ್ಜೀವಂ ದಹತೇ ಚಿತಾ ||

ಚಿಂತೆ ಮತ್ತು ಚಿತೆಯಲ್ಲಿ ಕೇವಲ ಅನುಸ್ವಾರದ ವ್ಯತ್ಯಾಸವಿದೆ,
ಆದರೆ ಎರಡೂ ಒಂದೇ ಕೆಲಸ ಮಾಡುವುದು.
ಚಿಂತೆಯು ಜೀವವಿರುವಾಗಲೆ ನಮ್ಮನ್ನು ಸುಟ್ಟರೆ,
ಚಿತೆಯು ಜೀವವಿಲ್ಲದ ಶವವನ್ನು ಸುಡುವುದು.

-


12 OCT 2021 AT 6:01

"ಸುಶೋಭಿತ ಸುಭಾಷಿತ"

ಸಂಯೋಗೋ ಹಿ ವಿಯೋಗಸ್ಯ ಸಂಸೂಚಯತಿ ಸಂಭವಮ್|
ಅನತಿಕ್ರಮಣೀಯಸ್ಯ ಜನ್ಮ ಮೃತ್ಯೋರಿವಾಗಮಮ್||
- ಹಿತೋಪದೇಶ-೭೭

ತಪ್ಪಿಸಿಕೊಳ್ಳಲಾರದ ಸಾವಿನ ಆಗಮನವನ್ನು ಹುಟ್ಟು ಸೂಚಿಸುವಂತೆ, ಒಡನಾಟ ಬಾಂಧವ್ಯಗಳು ಅಗಲುವಿಕೆಯನ್ನು ಸೂಚಿಸುತ್ತವೆ. ಸದಾ ಜೊತೆಗಿರಲು ಯಾರಿಗೂ ಸಾಧ್ಯವಿಲ್ಲ, ಯಾವುದೂ ಶಾಶ್ವತವಲ್ಲ.

-


26 SEP 2021 AT 7:51

"ಸುಶೋಭಿತ ಸುಭಾಷಿತ"

ಕಾಯಃ ಸನ್ನಿಹಿತಾಪಾಯಃ ಸಂಪದಃ ಕ್ಷಣಭಂಗುರಾಃ|
ಸಮಾಗಮಾಃ ಸಾಪಗಮಾಃ ಸರ್ವೇಷಾಮೇವ ದೇಹಿನಾಮ್||
ಪಂಚತಂತ್ರ, ಮಿತ್ರ ಸಂಪ್ರಾಪ್ತಿ - ೧೯೧

ಅಪಾಯಗಳು ಸದಾ ನಮ್ಮ ಹತ್ತಿರದಲ್ಲೇ ಇರುತ್ತವೆ; ನಮ್ಮಲ್ಲಿರುವ ಸಂಪತ್ತು ಶಾಶ್ವತವಲ್ಲ. ಜೀವನದಲ್ಲಿ ಜೊತೆಯಾಗಿರುವುದು ಮತ್ತು ಬಿಟ್ಟುಹೋಗುವುದು ಸ್ವಾಭಾವಿಕ. ಆದುದರಿಂದ ಇದು ನನ್ನದು, ಅವರು ನನ್ನವರು ಎಂದು ಅಂಟಿಕೊಂಡು ಕೂರುವುದು ಮೂರ್ಖತನವಾಗುತ್ತದೆ.

-


9 AUG 2021 AT 6:17

" ಸುಶೋಭಿತ ಸುಭಾಷಿತ "
(ಸುಂದರವಾದ ಒಳ್ಳೆಯ ಮಾತು ಸಂಗ್ರಹ)

ನಂದಂತ್ಯುದಿತ ಆದಿತ್ಯೇ ನಂದಂತ್ಯಸ್ತಮಿತೇ ರವೌ|
ಆತ್ಮನೋ ನಾವಬುದ್ಯಂತೇ ಮನುಷ್ಯಾ ಜೀವಿತಕ್ಷಯಂ||
-ರಾಮಾಯಣ

ಸೂರ್ಯನು ಉದಯಿಸಿದನೆಂದು ಜನರು ಆನಂದಿಸುತ್ತಾರೆ. ಅಸ್ತಮಿಸಿದನೆಂದೂ ಆನಂದಿಸುತ್ತಾರೆ. ತಮ್ಮ ಆಯುಸ್ಸು ಕ್ಷಯಿಸಿ ಹೊಗುತ್ತದೆಯಂಬುದನ್ನು ಮಾತ್ರ ಅವರು ಗಮನಿಸುವುದಿಲ್ಲ.

-


4 AUG 2021 AT 7:10

" ಸುಶೋಭಿತ ಸುಭಾಷಿತ "
(ಸುಂದರವಾದ ಒಳ್ಳೆಯ ಮಾತು ಸಂಗ್ರಹ)

ಪ್ರಜನಾರ್ಥಂ ಮಹಾಭಾಗಾಃ ಪೂಜಾರ್ಹಾ ಗೃಹ ದೀಪ್ತಯಃ l
ಸ್ತ್ರಿಯಃ ಶ್ರಿಯಶ್ಚ ಗೇಹೇಷು ನ ವಿಶೇಷೋಸ್ತಿ ಕಶ್ಚನ ll 
(ಮನುಸ್ಮೃತಿ ೯-೨೬)
       
ಸಂತಾನವನ್ನು ಹೊಂದಲು ಕಾರಣರಾದ ಸ್ತ್ರೀಯರು ಅತ್ಯಂತವಾದ ಗೌರವಕ್ಕೆ ಅರ್ಹರು. ಅವರು ಮನೆಗೆ ಬೆಳಕಿನಂತಹವರು. ಯಾವ ವಿಧವಾಗಿ ಸಿರಿಸಂಪದಗಳಿಲ್ಲದ ಮನೆಯು ಶೋಭಿಸುವುದಿಲ್ಲವೋ ಅದೇ ವಿಧವಾಗಿ ಸ್ತ್ರೀಯರಿಲ್ಲದ ಮನೆಯು ಕಾಂತಿಹೀನವಾಗಿರುತ್ತದೆ.

-


6 OCT 2021 AT 6:51

"ಸುಶೋಭಿತ ಸುಭಾಷಿತ"
ಸ್ವಭಾವಂ ನೈವ ಮುಂಚಂತಿ ಸಂತಃ ಸಂಸರ್ಗತೋ ಸತಾಂ|
ನ ತ್ಯಜಂತಿ ರುತಂ ಮಂಜು ಕಾಕ ಸಂಸರ್ಗತಃ ಪಿಕಾಃ||

ಕೋಗಿಲೆಗಳು ಕಾಗೆಗಳ ಜೊತೆಗಿದ್ದರೂ ಸಹ ತಮ್ಮ ಇಂಪಾದ ಧ್ವನಿಯನ್ನು ಬಿಡಲಾರದಂತೆ, ಸಜ್ಜನರು ಕೆಟ್ಟ ಜನರ ಸಹವಾಸದಲ್ಲಿದ್ದರೂ ತಮ್ಮ ಸಜ್ಜನಿಕೆಯನ್ನು ಎಂದಿಗೂ ಬಿಡುವುದಿಲ್ಲ. ಅವರವರ ಮೂಲ ಸ್ವಭಾವವನ್ನು ಕೇವಲ ಸಹವಾಸದಿಂದ ಬದಲಾಯಿಸಲು ಆಗದು.

-


10 AUG 2021 AT 7:45

" ಸುಶೋಭಿತ ಸುಭಾಷಿತ "
(ಸುಂದರವಾದ ಒಳ್ಳೆಯ ಮಾತು ಸಂಗ್ರಹ)

ಮೂಲಂ ದೋಷಸ್ಯ ಹಿಂಸಾದೇರರ್ಥಕಾಮೌ ಸ್ಮ ಮಾ ಪುಷಃ |
ತೌ ಹಿ ತತ್ತ್ವಾವಭೋದಸ್ಯ ದುರುಚ್ಛೇದಾವುಪಪ್ಲವೌ ||
-- ಕಿರಾತುರ್ಜನೀಯ

ಅರ್ಥ ಅಂದರೆ ಹಣ, ಕಾಮ ಅಂದರೆ ಸುಖ. ಇವೆರಡೂ ಹಿಂಸೆ, ಸುಳ್ಳು, ಕಳ್ಳತನ ಮೊದಲಾದ ದೋಷಗಳಿಗೆ ಮೂಲ. ಆದ್ದರಿಂದ ಬದುಕಿನಲ್ಲಿ ಇವುಗಳ ಅಗತ್ಯ ಅತಿಯಾಗಬಾರದು. ಜೀವನ ತತ್ವವನ್ನು ತಿಳಿದು ಸನ್ಮಾರ್ಗದಲ್ಲಿ ನಡೆಯಲು ಇವೆರಡೂ ದೊಡ್ಡ ಕಂಟಕ (ಅಡಚಣೆ)ಗಳು.

-