(ದಿನಕ್ಕೊಂದು ಭಗವದ್ಗೀತೆಯ ಅಧ್ಯಾಯದ ಸಾರಾಂಶ
ಹದಿನೆಂಟು ಅಧ್ಯಾಯ ಹದಿನೆಂಟು ದಿನದಲ್ಲಿ)
ಅಧ್ಯಾಯ 18: ಪರಮಾತ್ಮನೊಂದಿಗೆ ಐಕ್ಯ
ಫಲದ ಬಯಕೆಯಿಂದ ಮಾಡುವ ಕರ್ಮಗಳನ್ನು ಬಿಡುವುದು ಸಂನ್ಯಾಸ, ಆ ಎಲ್ಲಾ ಕರ್ಮಗಳನ್ನು ಮಾಡಿ ಫಲವನ್ನ ಬಯಸದೇ ಇರುವುದು ತ್ಯಾಗ ಎಂದು ಹೇಳುವ ಕೃಷ್ಣನು, ಕರ್ಮಯೋಗಿಯಾಗಿ ಬದುಕಬೇಕು. ನಿಮ್ಮ ಕೆಲಸವೇ ನಿಮ್ಮನ್ನು ಆತ್ಮದೊಂದಿಗೆ ಜೋಡಿಸುತ್ತದೆ. ಪರಮಾತ್ಮನೊಂದಿಗೆ ಐಕ್ಯವಾಗಲು ದಾರಿ ತೋರುತ್ತದೆ ಎಂದು ವಿವರಿಸುತ್ತಾನೆ.
|| ಸರ್ವೇ ಜನಾಃ ಸುಖಿನೋ ಭವಂತು ||
|| ಶ್ರೀ ಕೃಷ್ಣಾರ್ಪಣಮಸ್ತು ||-
27 NOV 2020 AT 7:23
28 JAN 2021 AT 7:34
ನಡೆಯುವಾಗ ಕಾಲು ಜಾರಿದರೆ ಕೆಲವು ದಿನಗಳ ನೋವು
ಮಾತಿನಲ್ಲಿ ನಾಲಿಗೆ ಜಾರಿದರೆ ಮನಸ್ಸುಗಳ ಸಾವು
-
8 MAR 2021 AT 22:32
ನನ್ನನ್ನು ನಾನು
ನೋಯಿಸಿಕೊಂಡಷ್ಟು
ಇನ್ಯಾರನ್ನು ನೋಯಿಸಿಲ್ಲ!
ನಿನ್ನನ್ನು ನಾನು ಪ್ರೀತಿಸುವಷ್ಟು
ನನ್ನನ್ನು ನಾನೇ ಪ್ರೀತಿಸಿಲ್ಲ!-
30 SEP 2020 AT 23:55
ಅವರು ನಿನ್ನ ಸರ್ವಸ್ವ ಅಥವಾ ನಿನ್ನ ಜಗತ್ತು ಆಗದಿರಬಹುದು.
ಆದರೆ ಅವರಿಗೆ ನೀನೇ ಸರ್ವಸ್ವ ಆಗಿರಬಹುದು!
-
28 NOV 2020 AT 10:05
ಮರೆಯಾಗಿ
ಹೋಗಿ ನೋಡು ಒಮ್ಮೆ,
ಅರಿಯುವೆ ನೀನಾಗ
ನಿನ್ನ ಮರೆತವರು,
ನಿನ್ನ ಮರೆಯದವರು,
ನೀ ಮರೆಯಲಾಗದವರು,
ಯಾರೆಂದು...
-
26 NOV 2020 AT 7:52
ಕಷ್ಟ ಕಾಲದ ಕತ್ತಲಲ್ಲಿ ಹೆಚ್ಚು
ಉಜ್ವಲವಾಗಿ ಹೊಳೆದು
ತುಂಡಾಗದೆ ಇರುವ ಸಂಬಂಧವೇ
ಮನಸ್ಸುಗಳ ನಡುವಿನ ನಿಜವಾದ ಅನುಬಂಧ.
-
23 AUG 2020 AT 20:09
ಸುಖ ಜೀವನ ಸೂತ್ರ
ಪ್ರತಿಯೊಬ್ಬರೂ ಅನುಸರಿಸಬೇಕಾದ ಮಂತ್ರ
ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು ❌
ನಾವು ಅವರನ್ನು ಅರ್ಥ ಮಾಡಿಕೊಳ್ಳಬೇಕು ✅-
24 DEC 2020 AT 7:45
ಇರದಿದ್ದಾಗ ನೆನಪಾಗುವುದು ಸಾಮಾನ್ಯ.
ಇದ್ದಾಗಲೂ ನೆನಪಾಗುತ್ತಿದ್ದರೆ,
ಅದು ಮನಸ್ಸಿನಿಂದ ಮನಸ್ಸಿಗಿರುವ ಸೆಳೆತ.-