ಅವನು ನಿನ್ನ ಹೂವೆನ್ನುವ
ನವಿಲೆನ್ನುವ, ಬಳುಕಿ ಹರಿವ
ನದಿಯೆನ್ನುವ, ಲತೆಯೆನ್ನುವ
ತುಂಬು ಹುಣ್ಣಿಮೆಯು ನೀನೆ
ಕಲ್ಪನೆಯು, ಕಾವ್ಯವು ನೀನೆನ್ನುವ.,
ನೆನಪಿಡು ಗೆಳತಿ., ಯಾವೊಬ್ಬ
ನಿನ್ನನು ಹೆಣ್ಣಾಗಿ ಕಾಣ್ವನೋ
ಅವನಷ್ಟೇ ನಿನ್ನವನಾಗಲು ಅರ್ಹ.!-
19 MAY 2020 AT 16:43
29 MAY 2020 AT 19:52
ನೀ ಕಲಿಯಲೇ ಬೇಕು ಹುಡುಗಿ.,
ಸೊಡರಿನಂತೆ ಸುಟ್ಟು ಬೆಳಗುವುದನು
ಗಂಧದಂತೆ ತೇಯ್ದು ಘಮಿಸುವುದನು
ಸುಣ್ಣದಂತೆ ಬೆಂದು ಹದವಾಗುವುದನು
ಅವನಿಯಂತೆ ನೊಂದು ನಲಿಯುವುದನು.,
ಶಿಶಿರನಂತೆ ಬೆರೆತು ಒಂಟಿಯಾಗುವುದನು
ಕತ್ತಲಂತೆ ಕಲೆತು ಕರಗಿ ಮುಗಿಯುವುದನು.!-