ಕಿವಿ ಓಲೆಯ ಉಯ್ಯಾಲೆಯಲ್ಲಿ ನಿನ್ನ ಭಾವನೆಗಳು.
ಮುತ್ತಿನ ಕಾಲ್ಗೆಜ್ಜೆಯ ನಡೆದಾಡೋ ಅಭಿವ್ಯಕ್ತಿ...!!
ಅಪರಂಜಿಯ ಪಾವಗಡದ ಸೊಗಸು.
ಕರಾವಳಿಯ ಯಕ್ಷಗಾನದ ಹೊಳಪು.
ಕನ್ನಡಾಂಬೆಯ ಪ್ರೀತಿ ಗೌರವದ ಕುವರಿ.
ಕನ್ನಡ ಸಾಹಿತ್ಯ ಸೌಂದರ್ಯವನ್ನು
ಅಣುವಣುವಿನಲ್ಲಿ ತುಂಬಿರುವ ಅಚ್ಚಸ್ವಚ್ಛ ಕನ್ನಡತಿ...!!-
ಬಾರದ ಮಳೆ ಬರ ತರುವುದು
ಬಂದ ಮಳೆ ನೆರೆ ತರುವುದು
ಸಾಲದೊರೆಯ ಹೊತ್ತ ರೈತ
ಬೇಪ್ಪಾಗಿ ಕೂಡುವನು ಇತ್ತ...!
ಇದು ಕಲಿಯುಗದ ವಿಪರ್ಯಾಸ
ಹಿಡಿ ಅನ್ನಕ್ಕೆ ಅನ್ನದಾತನ ಸಂಕಷ್ಟ
ಉಳುವ ಭೂಮಿಯ ಒಡಲ ಕಾವಿಗೆ
ಬೆವರ ಬದಲು ರಕ್ತದ ತರ್ಪಣ...!
ಹಸಿರೆಲೆಯೆ ಉಸಿರೆಂದು ಹಲುಬಿದ
ವಸುದೆಗೆ ಬೀಜ ಬಿತ್ತಿ ವರುಣನ ಕರೆದ
ಗೋವಿನ ಗಂಜಲಲಿ ಗಣ್ಯತೆಯ ಕಂಡ
ಗತಿಸಿಗದೇ ನೇಳಿಗೆ ಕೊರಲೋಡ್ಡಿದ...!
ಇತ್ತ ಬೆಳೆಯಿಲ್ಲ ಅತ್ತ ಸಾಲ ತಪ್ಪಲಿಲ್ಲ
ಕೋಟಿ ಕೋಟಿ ಸಾಲಕ್ಕೆ ದೇಶ ಬಿಟ್ಟರೂ
ಸಾವಿರ ಸಾಲಕ್ಕೆ ಮನೆ ಮುಟ್ಟುಗೋಲು
ಹಸು ನೀಗಿಸುವ ಹಮ್ಮಿರಗೆ ಅವಮಾನ ಪಾಲು
ಭಾರತೀಯ ಬೆನ್ನಮೂಳೆ ನಾಮಾಂಕಿತ
ಶಾಂತಿಸೂತ್ರಕೆ ಸಿಲುಕಿ ಕ್ರಾಂತಿಗೆ ಬಲಿಯಾದ
ವ್ಯವಸಾಯದಿ ಬಿಸಿ ನೆತ್ತರ ಬಸಿದವ
ಕುಂತನಿಂದು ಕೈ ಹೊತ್ತು ಮಸ್ತಕಕ...!
-✍🏻 ಪ್ರಿಯಾಂಕಾ ಬಿಳ್ಳೂರ.
-
ಅವನ ಸ್ನೇಹದ ನೆನಪಿನಂಗಳದಲ್ಲಿ..👫
ಎನಗಿಲ್ಲ ಅವನ್ನೊರೆತು ಕಾಡಿಸಿ
ಪೀಡಿಸಿ ಮುನಿಸಿಕೊಂಡವರು ಜಾಸ್ತಿ..
ಕಂಗಳಿಗೆ ಕಾವಲುಗಾರನಾದ..
ಸ್ನೇಹಕ್ಕೆ ಸಂಪನ್ನ ಮೂರುತಿಯು ಅವನಾದ..
ಮುನಿಸಲ್ಲೂ ಕಂಡೆನು ಕಾಳಜಿಯೆಂಬ ಪದ..
ಕನಸಲ್ಲೂ ಅವನಾದ ಸ್ನೇಹಕೆ ಸ್ನೇಹದ ಭಾವ..
-
ಕೊನೆಯಿಲ್ಲದ ಪಯಣದಲ್ಲಿ
ಕೊನೆಗೆ ಸೇರುವ ಗುರಿ ಯಾವುದೋ...?
ಕೊನೆತನಕ ಯಾರುಬಾರದೆಂದರು
ಕೊನೆತನ ಬರುವ ಸಂಗಾತಿ ಯಾರೋ...?
ಹೋರಾಟದ ಬದುಕಿನಲ್ಲಿ
ನೆಮ್ಮದಿ ದಿನದ ಮೂಲ ಯಾವುದೋ...?
ಅಸಂಖ್ಯ ಜನರೆದುರು ನಿನಿಷ್ಟವಾದ
ಪರಿಯ ಬೆಸುಗೆ ಯಾವುದೋ...?
ಕಾರಣವಿಲ್ಲದಿದ್ದರು ನಡುರಾತ್ರಿ ಬರುವ
ನಿನ್ನ ನೆನಪಿನ ಮರ್ಮ ಯಾವುದೋ...?
ನೀ ತೊರೆದರೂ ನಾ ಬಿಡದಷ್ಟು ಬಯಸುವ
ನನ್ನ ಸ್ವಾರ್ಥ ವ್ಯಾಮೋಹ ಯಾಕೋ...?
ನಿರರ್ಥಕದ ನಡುವಲ್ಲಿಯೂ ನಗೆ ತರಿಸುವೆ
ನೀ ಕೋನೆಯೋರೆಗು ಇರುವೆಯೇ...?
ಗುರಿ ಗೊತ್ತಿಲ್ಲ ಗೂಡಿನ ದೂರ ತಿಳಿದಿಲ್ಲ
ಉಸಿರ ಕೊನೆಯೋರೆಗು ಬಯಸುವೇ ನಿನ್ನನ್ನೇ...!
ನೀನು........?-
ನೆಕ್ ಗೇ ನೆಕ್ಲೇಸ್ ಬೇಕನ್ನೊ
ಕಾಸ್ಟ್ಲಿ ಹುಡಗಿರ ಮಧ್ಯೇ..,
ಜಾತ್ರೆಲಿ ಜುಮ್ಕಿ ಕೊಡ್ಸಿದ್ರು
ಖುಷಿ ಪಡೊ ಸಿಂಪಲ್ ಹುಡ್ಗಿ ನನ್ನೊಳು...-
ಎರಡು ಜೀವಗಳ
ಪ್ರೇಮದಿಬ್ಬಣ
ಸಾಗಿದೆ ಎದೆಯಲ್ಲಿ
ಬೀಳದಿರಲಿ ಯಾರ ಕಣ್ಣು
ಕೊನೆಯಾಗದಿರಲಿ
ಪ್ರೀತಿಯ ಸದ್ದು......-
ಕನ್ನಡ ಭಾಷೆ..
ನಿನ್ನಯ ಪದಗಳ ಒಡಲು
ನನ್ನೆದೆಯ ಭಾವ ಕಡಲು..!
ನಿನ್ನಯ ಹಾಸ್ಯದ ಒಡಲು,
ಬಾಳಿನ ಹಾಲ ಕಡಲು...!
ನಿನ್ನಯ ಮಮತೆಯ ಒಡಲು
ನನಗೆ ತಾಯ ಮಡಿಲು...!!💕-