QUOTES ON #SUJI_LOVE

#suji_love quotes

Trending | Latest
19 NOV 2020 AT 12:07

ಗಡಸು ದನಿಯ ಹಿಂದೆ ಆತ್ಮೀಯತೆ
ಒರಟು ಹಿಡಿತದಲ್ಲಿ ಕಾಣುವ ಭದ್ರತೆ
ಮೊಗೆದಷ್ಟೂ ಬತ್ತದ ಒಲವಿನ ಒರತೆ
ತನ್ನವರಿಗಾಗಿ ದುಡಿವ ತ್ಯಾಗಶೀಲತೆ
ಗಂಡುಹೃದಯದಿ ತೋರುವ ತಾಯಿಮಮತೆ ಇದೆಲ್ಲದರ ಮತ್ತೊಂದು ಹೆಸರೇ ಪುರುಷನಂತೆ

🌷187🌷

-


19 JUL 2020 AT 14:19

ಗಾಳೆಯಲಿ ತೇಲಿಸಿದೆನು ನಾನು
ಮಳೆಯಲಿ ತೋಯಿಸಿದಿ ನೀನು
ಮಳೆ ಗಾಳಿಯ ಪರಿವೇ ಇಲ್ಲದೇ
ಅನುದಿನವೂ
ತೊಯ್ದೆವು - ತೇಲಿದೆವು
ಒಲವಿನಾಸರೆಯಲಿ ಬಳಿ ಹಾಯಲಿಲ್ಲ ದುಷ್ಟ ಶಕ್ತಿ
ಎಲ್ಲರೊಡನೆ ಹಾಯಾಗಿ ಬದುಕುಳಿದು
ಪಡೆಯುವಾ ಮುಕ್ತಿ.

🌷158🌷

-


12 OCT 2020 AT 20:42

ನಿನ್ನ ಪ್ರೀತಿ ಎಂದರೆ
ಹೃದಯಾಪ್ತ ಪುಸ್ತಕದಂತೆ
ಪುಸ್ತಕ ಕಪಾಟಿನಲಿದ್ದರೆ
ನಿನ್ನ ಒಲವು ನನ್ನ ಹೃದಯಕೆ
ಪ್ರೀತಿಸುವೆ ನಾ ಓದುವೆ.

🌷176🌷

-


28 JUL 2020 AT 17:33

ಈ ಅನುಬಂಧಗಳೇ ಹೀಗೆ
ಗೊತ್ತಿಲ್ಲದೇ ಬೆನ್ನಿಗೆ ಬಿದ್ದು
ಬಿಡಿಸಲಾಗದಷ್ಟು ತಳವೂರುವದು ;
ಹೆಮ್ಮರದ ತಳವೂರಿದ ಬೇರಿನಂತೆ.
ನಾನು ಎಲೆ ; ನೀನು ಕಾಂಡ
ಬಿಡಲಾಗದ ಅನುಬಂಧ
ನಮ್ಮೀ ಪ್ರೀತಿ.

🌷164🌷

-


29 APR 2020 AT 18:44

ಮಾತಿನ ತೋಟಕೆ
ಮೌನದ ಬೇಲಿ
ಬೇಡ ಗೆಳೆಯಾ
ಬೇಲಿ ದಾಟಲೇ?
ನಿನ್ನೊಳೊಂದಾದ ಮೇಲೆ
ಬೇಲಿಯ ಹೆದರಿಕೆ
ಎಂದಿಗೂ ಇಲ್ಲ.

🌷24🌷

-


3 NOV 2020 AT 7:09

ನಿನ್ನೊಲವ ನೆರಳಲಿ ಮನ
ಉಯ್ಯಾಲೆ ಏರಿದೆ
ವರುಷಗಳುರುಳಿದ ನೆನಪು
ನಿಮಿಷದಂತೆ ಸಾಗಿದೆ
ಕನ್ನಂಬಾಡಿಯ ತಿಳಿನೀರಿನ
ಮನ ನಿನ್ನದು
ಚಾಮುಂಡಿ ಬೆಟ್ಟದ ಹಸಿರಂತ
ಒಲವಿನ ಪ್ರೀತಿ ನಮ್ಮದು.

🌷183🌷

-


11 MAY 2020 AT 14:42

ಚಾಮುಂಡಿ ಬೆಟ್ಟಕಿಂತ
ಬದುಕಿನ ಕಾಲ ಘಟ್ಟ
ಹತ್ತಿಳಿಯುವುದೆಂದರೇ ಹೈರಾಣು
ನೀನು ಹತ್ತಿಯಂತೆ
ಹತ್ತಿಸಿದೆ ; ನಾ ಇಳಿಯದೇ
ನಿನ್ನಲೊಂದಾಗಿ ಇದ್ದು ಬಿಡುವೆ
ಗೆದ್ದು ಬರುವೆ .

🌷73🌷

-


13 DEC 2020 AT 16:43

ಮತ್ತೇನೂ ಮತ್ತಿನ ಆಶೆಯಿಲ್ಲ
ನೀ ಸುತ್ತಲಿರುವಾಗ
ಕನ್ನಂಬಾಡಿ ಕಟ್ಟೆಯಲಿ ಈಸುವಾಗ
ಕೆರೆಗಳ ನೆನಪೇಕೆ ಮಾಡಲಿ ?
ನೀನೆಂದರೆ ಪ್ರೀತಿ ; ನೆನಪಿನ ರೀತಿ.

🌷194🌷

-


20 JUL 2020 AT 23:00

ಅಂದೂ ನಾನು ಕೇಳದ
ಇಂದೂ ನೀನು ಹೇಳದ
ಅಂತರಾಳದ ಮಾತು
ಎಂದೂ ನೀನು ಪ್ರಶ್ನಿಸದ
ಮುಂದೂ ನಾನು ಉತ್ತರಿಸದ
ಎದೆಯಾಳದ ಗುಟ್ಟು.
ಕೆಲವು ಭಾವಗಳಿಗೆ
ಪದಗಳ ಹಂಗಿಲ್ಲ.

🌷160🌷

-


13 MAY 2020 AT 15:54

ಈ ಬಾಳ ತ್ರಾಣ
ನೀನಿರದ ಜೀವನ
ಬರಿದು ಶೂನ್ಯ
ಪರಸ್ಪರ ಪೂರಕ
ಅತಿ ಅವಶ್ಯಕ

🌷78🌷

-