QUOTES ON #SANAKANNADAWRITTINGS

#sanakannadawrittings quotes

Trending | Latest
20 JUN 2021 AT 15:08

ನಿನ್ನ ಪಾದದ ಮೇಲೆ ಕಾಲಿಟ್ಟೆ ,
ನಾ ನಡೆಯಲು ಕಲಿತದ್ದು.
ನೀ ಹೆಗಲ ಮೇಲೆ ಕೂರಿಸಿಕೊಂಡಾಗಲೆ,
ನಾ ಜಗವ ಕಂಡಿದ್ದು.

ನಿನ್ನ ಬೆರಳ ಹಿಡಿದು ನಡೆವಾಗ,
ಹೆಜ್ಜೆಗಳು ಬಲಗೊಂಡಿದ್ದು.
ನಿನ್ನ ಪ್ರೀತಿಯ ಅಪ್ಪುಗೆಯಲ್ಲಿ
ನಾ ಒಲವ ಕಂಡಿದ್ದು.

ಬೆನ್ನ ಹಿಂದೆ ನೀನಿರಲು
ಭಯ ದೂರವಾಗಿದ್ದು.
ತಲೆಯ ಮೇಲೆ ಕೈಯನಿಡಲು,
ಜಗತ್ತೇ ನನ್ನದು ಅನಿಸಿದ್ದು.

ಹೆತ್ತವಳು ಅಮ್ಮನಾದರು,
ನೀನಲ್ಲವೇ ಪೊರೆದವನು.
ಕಣ್ಣ ಹನಿ ಜಾರಲು ಬಿಡದವನು,
ಪ್ರೀತಿಯ ಮಳೆ ಸುರಿದವನು.






-


6 MAY 2021 AT 18:28

ಅಮ್ಮನ ಜೋಗುಳ ಸಂಗೀತ;
ಅಪ್ಪನ ಬೈಗುಳ ಸಂಗೀತ!

ಹಕ್ಕಿಯ ಚಿಲಿಪಿಲಿ ಸಂಗೀತ;
ಚುಕ್ಕಿಯ ಕಲರವ ಸಂಗೀತ!

ಗುನುಗದ ಪಲ್ಲವಿ ಸಂಗೀತ;
ದನಿಯಾಗದ ಸಾಲು ಸಂಗೀತ!

-


4 DEC 2021 AT 0:50

ಹೊಳೆಯುವ ಕಂಗಳು ಒಲವಿನ ಆಗರ,
ಸುಗುಣ, ಸುನಡತೆಯ ಸಾಗರ!
ಅವಳೊಂದಿಗೆ ಕಳೆಯುವ ಕ್ಷಣಗಳು ಮಧುರ,
ಅವಳು ಜೊತೆಗಿದ್ದರೆ ಬದುಕೇ ಸುಂದರ!

ಅವಳ ಸ್ನೇಹ ಸಂಪಿಗೆಯ ಕಂಪು,
ಅವಳ ಒಡನಾಟ ಬೆಳದಿಂಗಳಿನ ತಂಪು!
ಸವಿಯಾದ ನುಡಿ ಸಂಗೀತದಂತೆ ಇಂಪು,
ಒಮ್ಮೆ ತಲೆಗೇರಿದರೆ ಬಿಡದು ಅವಳ ಪ್ರೀತಿಯ ಜೊಂಪು!

ದೇವಲೋಕದಿಂದ ಇಳಿದಳೇನೋ ಚೆಲುವೆ,
ಮಂದಸ್ಮಿತೆ ಅವಳು, ನಗುವೇ ಅವಳೊಡವೆ!
ಮನಗಳ ನಡುವೆ ಸ್ನೇಹ ಬೆಸೆಯುವ ಸೇತುವೆ ,
ಇಂತಹ ಸೃಷ್ಟಿ ಜಗದಿ ಅಪರೂಪವೆ!

ಮಮತಾಮಯಿ, ವಾತ್ಸಲ್ಯ ತುಂಬಿದ ದೇವತೆ,
ನೀ, ತುಂತುರಲ್ಲಿ ಮಿಂದ ಹೃದಯ ಸಂತಸದಿ ಹಾಡುವ ಕವಿತೆ!

-


6 NOV 2020 AT 18:53

ವರ್ಣಿಸಲಾಗದ ಮಾಯಿ
ನಿನ್ನುಟ್ಟಿನೊಂದಿಗೆ ಮರಳಿ ಹುಟ್ಟುವಳು
ನಿನ್ನುಳಿವಿಗೆ ಕಾರಣವೇ ಇವಳು..
ಪ್ರೀತಿ ಧಾರೆಯೆರವ ದೇವತೆ
ಸಾಲದು ನಿನಗೆ ನನ್ನೀ ಕವಿತೆ
ತೊಂಬತ್ತು ವರುಷವೆ ಬದುಕಿದರು ತಾಯೇ
ನಿನ್ನೊಡಲ ಆ ಒಂಬತ್ತು ತಿಂಗಳ
ಆನಂದ ಜಗದದೆಲ್ಲು ಸಿಗದು..

-


1 NOV 2020 AT 20:55

ಬದುಕಿನಲಿ ಬರಿ ತಿರುವುಗಳೆ..
ಬಯಸಿದಂತೆ ಮುನ್ನಡೆಯಲು ಸಿಗುತ್ತಿಲ್ಲ ಸುಳಿವುಗಳೆ..
ಹಿಂದಿರುಗಿ ನೋಡಿದರೆ ಬಾರಿ
ನೋವಿನ ಕುರುಹುಗಳೆ..
ಯಾಕಿಗೆ ಮಾಡಿದೆಯೆಂದು
ದೇವರನೊಮ್ಮೆ ಕೂಗಿ ಕೇಳಲೇ...

-


3 JAN 2021 AT 11:14

ಗೆದ್ದಾಗ ಹಿಂದೆ ಇರುವವರು,
ಸೋತಾಗ ಕೆಳಗೆ ತುಳಿಯುತ್ತಾರೆ,
ದೇವರನ್ನೇ ಮೆಚ್ಚಲಿಲ್ಲ ಈ ಜನ,
ನಿನ್ಯಾವ ಲೆಕ್ಕ,
ಇಲ್ಲಿ ಯಾರನ್ನು ಮೆಚ್ಚಿಸ ಬೇಕಿಲ್ಲ,
ನಿನ್ನಂತೆ ನೀನೀರು,
ನಿನ್ನ ಆತ್ಮಸಾಕ್ಷಿಗೆ ನ್ಯಾಯವಾಗಿ ನಡೆ,
ನಿನಗೆ ಸರಿ ಅನಿಸಿದ್ದು ಮಾಡು,
ಯಾರಿಗಾಗಿ ಯು ಬದಲಾಗಬೇಕಿಲ್ಲ,
ಅನ್ನುವವವರು ಅನ್ನುತ್ತಲೆ ಇರುತ್ತಾರೆ,
ತಲೆ ಕೆಡಿಸಿಕೊಳ್ಳಬೇಡಿ,
ನ್ಯಾಯದ ದಾರಿಯಲ್ಲಿ ನಡೆಯಿರಿ,
ಎಲ್ಲ ತಿರುಗಿ ನಿಮ್ಮೆಡೆಗೆ ನೋಡುವ ದಿನ ಬರುವುದು,
ನೀವಾಗಿ ಬದುಕಿ, ನಿಮಗಾಗಿ ಬದುಕಿ.


-


3 DEC 2021 AT 21:40

ಹೊರಗೆ ಹುಸಿ ನಗೆ ಬೀರುತ್ತಾ,
ಒಳಗೆ ಅಳುತ್ತಿರುವ ಹೃದಯಕ್ಕೆ ಸಾಂತ್ವನ ನೀಡುತ್ತಾ,
ಜೀವನದ ಪ್ರತಿ ಹಂತವನ್ನೊಮ್ಮೆ ನೆನೆದು,
ದಿಗಂತದೆಡೆಗೆ ನೋಡುತ್ತ ನಿಟ್ಟುಸಿರು ಬಿಡುವಾಗ
ಕಣ್ಣಿಂದ ಜಾರುವ ಭಾರವಾದ ಹನಿಗಳೇ, ಜೀವನ.

-


5 JUN 2021 AT 20:28

ಅವನೆಂದರೆ,
ಕಾಣದೂರಿನ ಒಲವವನು, ಕಲ್ಪನೆಯ ನನ್ನವನು.
ಹೊಳೆವ ಚಂದ್ರನ ಮೊಗದವನು,ಚಿಗುರು ಮೀಸೆಯ ಅಂಚಲಿ ನಗುವವನು.

ಹೃದಯದ ಬಾಗಿಲ ಬಡಿದವನು, ಕೇಳದೇ ಒಳ ಬಂದವನು .
ಹೊಂಗನಸ ಚಾದರ ಎಳೆದವನು, ನಿದಿರೆಯ ಕದ್ದ ಕನಸವನು.

ನೋವ ದೂರ ನೂಕಿ, ಮನದಿ ಉಲ್ಲಾಸ ತುಂಬಿದವನು,
ಸುರಿವ ಮಳೆಯ ಹನಿ ಇವನು, ಸಡಗರದಿ ಸನಿಹ ಸೆಳೆದವನು.


-


19 FEB 2022 AT 19:18

ಸಂಜೆಗಳ ಮಡಿಲಲಿ, ಸಂಗಮದ ಬಯಕೆಯಲಿ, ಸವೆಸಿದ ಕ್ಷಣಗಳೆಷ್ಟೋ..!
ನೀ ಸುಳಿಯಲೇ ಇಲ್ಲ, ಕಾತರಿಸುತ್ತಿದ್ದ ಕಂಗಳ ಹಾದಿಯಲಿ.— % &

-


13 MAY 2021 AT 16:51

ತುಕ್ಕು ಹಿಡಿದ ಕಿಟಕಿಯ ಸರಳ
ಸಂದಿಯಿಂದೆಲ್ಲೋ,
ಸೂರ್ಯನ ಕಿರಣ ಮೈಯ ತಾಗಿ,
ರಸ್ಟು ಹಿಡಿದ ಕಬ್ಬಿಣದ ಮಂಚದ
ಮೇಲೆ ಮಗುವಂತೆ ಮಲಗಿದ್ದ
ಅವನು,ಬೆಳಗಾಯಿತು ಎಂದು ಅರಿತು,
ನಿದ್ದೆಯ ಜೊಂಪು ತಲೆಯ ಆವರಿಸಿರಲು,
ದಣಿದ ಕಂಗಳು ಜಗವ
ನೋಡಲು ಅನುಮತಿ ನೀಡಿದಿರಲು,
ದಿನದ ಕಾಯಕವ ನೆನೆದು ;
ಹಾಸಿಗೆಯಿಂದ ದೇಹವನೆಳೆದು;
ಕೊರೆವ ಚಳಿಯಲಿ ನಾಲ್ಕು
ಸೌದೆಯ ಸುರಿದು ಗಾಳಿಯ ಕಣ್ತಪ್ಪಿಸಿ
ಕಡ್ಡಿಯ ಗೀರಿ, ಒಲೆಯ ಊದಿ;
ನೀರ ಬಿಸಿಗೊಳಿಸಿ, ಸುಡುವ ಉದಕದಿ
ಮೈಯ ಕೊಳೆಯ ತೊಳೆದು,
ಶರಟು ಪ್ಯಾಂಟಿನೊಳಗೆ ದೇಹವ ತುರುಕಿ,
ಕಂಕುಳಲ್ಲಿ ಒಂದು ಬ್ಯಾಗಿರಿಸಿ,
ಅಲ್ಲೆಲ್ಲೋ ಯಾವುದೋ ಉಪಹಾರ
ಮಂದಿರದಿ ಎರಡು ದೋಸೆಯ ಮುರಿದು
ಬಾಯೊಳಿರಿಸಿ, ಕೈಯ ಗಡಿಯಾರವು
ತಿಳಿಸೆ ಸಮಯ ಓಡುತಿಹದೆಂದು,
ತಂಬಿಗೆಯ ನೀರ ಕುಡಿದು
ಗಂಟಲ ಸರಿಗೊಳಿಸಿ, ಮೇಲೆದ್ದು ಕಾಲ್ಕಿತ್ತು,
ಓಡುತೋಡುತ ಜನರ ಗುಂಪಿನ
ನಡುವೆ ಮರೆಯಾದ ನೋಡಿ ಮಾನವ.





-