ಸುಂದರ ಮುಗುಳ್ನಗೆಯನು ಹೊತ್ತು
ಸಂತಸವನು ಹರಡುತ್ತಾ
ಸಹಜ ಪ್ರಕೃತಿಯನು ಆರಾಧಿಸುವನಾಗಿ
ಧನಾತ್ಮಕ ಕಂಪನಗಳು ಸಾರುತ್ತಾ
ತಾನು ಬೆಳೆದು ಮತ್ತಷ್ಟರನ್ನು ಬೆಳೆಸುವನಾಗಿ
ಬರಹದ ಲೋಕದಲಿ ಭಾವಗಳನು ಅಕ್ಷರವಾಗಿಸುವಂತ
ಸ್ನೇಹಪೂರ್ಣ ಹೃದಯದವನು ಈ ಜೋಗಿ-
ಸೂರ್ಯ ಸಮುದ್ರಗಳ ಹಾಂಗೆ
ಪಕ್ಕದಲ್ಲೆ ಇದ್ದರೂ ಕೈಗೆ ಸಿಗುವುದಿಲ್ಲ
ಚಂದ್ರ ತಾರೆಗಳ ಹಾಂಗೆ
ಜೀವನವೇ ಹಾಗೆ ಸಂಶಯವೇ ಇಲ್ಲ
ಕಣ್ಣಿಗೆ ಕಂಡು ಆಸೆ ಇಡಿಸುವ ಹಾಂಗೆ
ಹುಡುಕುತ್ತಿರ ಬೇಕು ಮೂಲೆಗಳೆಲ್ಲ
ಕಣ್ಣಾಮುಚ್ಚಾಲೆ ಆಟದ ಹಾಂಗೆ-
ನಿಸರ್ಗದ ಕಡೆ ಎಳೆದಿತು ಮನ
ತಣ್ಣನೆ ಗಾಳಿಯಲಿ ಪಡೆಯಬೇಕು ರೋಮಾಂಚನ
ನೋಡಬೇಕು ಸೂರ್ಯನ ಕಿರಣಗಳಲಿ ಹೊಳೆಯುತ್ತಿರುವ ವನ
ಹೊನಲುಗಳು ಹರಿಯುವ ಹಾದಿಯಲ್ಲಿ ನೀರಿನ ಇಂಚರ ಆಲಿಸುತ್ತಾ ಬರೆಯಬೇಕು ಕವನ
ಸಮಯ ಸಿಕ್ಕರೇ ಸಾಕು ಹೊರ ತೆಗೆಯುವೆವು ವಾಹನ
ಹೀಗೇ ಆನಂದಿಸೋಣ ಜೀವನ
-
ಪ್ರೀತಿಯ ಸನಿಹದಲಿ!
ಕುಂಚ ಕದಲಿದ್ದು
ಪ್ರಕೃತಿಯ ಮಡಲಿನಲಿ!
ರಚನೆಗಳು ಕಾಂತಿಸಿದ್ದು
ಅಲೆಗಳ ನಾದದ ಸ್ವಾರಸ್ಯದಲಿ!
ಆನಂದ ಪರವಶಗೊಳಿಸಿದ್ದು
ಬಹುವರ್ಣ ಹೂದೋಟದ ಪ್ರಾಂಗಣದಲಿ!
ಮೈಮರೆತು ಮೆರೆದಿದ್ದು
ಮಧುರ ಗಾನದ ರಾಗದಲಿ!
ಕಣ್ಣುಗಳು ಬೆರೆಗಾಗಿದ್ದು
ಬೆಳದಿಂಗಳ ಚೆಲುವಿನಲಿ!-
!
ಆತ್ಮವಿಶ್ವಾಸವಾ? ಅಹಂಕಾರವಾ?
ಆತ್ಮವಿಶ್ವಾಸವಾದರೇ ಅದು ಭೇಷಾದ ಓರುವಳವು
ಅಹಂಕಾರವಾದರೇ ಅದು ವಿಪರೀತ ಬುದ್ಧಿಯ ಛದ್ಮವೇಷವು
ತಿಳಿದು ವ್ಯವಹರಿಸ ಬೇಕು, ತಳಿದು ಬಾಳ ಬೇಕು!-
ಶ್ರಮಿಸುವರೇ ಜನರು?
ವಿದ್ಯೆ ಹಾಗು ಜೀವನವು
ಆಗುತಿತ್ತು ಲಗಾಮಿಲ್ಲದ ಕುದುರೆಗಳ
ದಿಕ್ಕು ತಿಳಿಯದ ಸುಳಿದಾಟ
ಈ ಪರಿ ಪರೀಕ್ಷೆಗಳು ಇದ್ದಾಗಲೆ
ಅಹಂಕಾರದಿ ಮೆರೆಯುತಿಹರು
ಮಾಪಕವೇ ಇಲ್ಲದೆ ಹೋದರೆ
ಎಲ್ಲರೂ ಮಹಾರಾಜರೇ
ಇರುತ್ತಿರಲಿಲ್ಲ ಯಾರು ಸಾಮಾನ್ಯರು!-
ಸಿಹಿಕಹಿ ಜೀವನವ ಗುರುತಿಸಲೆಂದು
ಹೊಸ ಹೆಸರ ಹೊತ್ತು ಬರುವೆನೀ ಅಂದು
ವರುಷದ ಕಾಲ ಚಕ್ರವ ಉರುಳಿಸಿ
ಮತ್ತೊಂದು ಚಿಗುರಲಿ ಚೈತನ್ಯವಾಗುವೆ!
ಮಾವಿನ ತೋರಣ ಬೇವಿನ ಹೂವು
ಅಂಕುರವಾದ ಎಲೆ ಎಲೆಯಲ್ಲು ಕಂಡಿತು
ಚೈತ್ರದ ಚಂದದಲಿ ಹಬ್ಬದ ಜೋರು
ಹೋಳಿಗೆ ಚಿತ್ರಾನ್ನಗಳ ಸ್ವಾದನೀನಾಗುವೆ!
ಹೊಸ ಬಟ್ಟೆ ತೊಡಗಿ ಪ್ರೀತಿಯಿಂ ಆಹ್ವಾನಿಸುವೆ
ತರತರ ಅಡುಗೆಮಾಡಿ ನೈವೇದ್ಯವ ನೀಡುವೆ
ಬಂದಿರುವೆ ಪ್ಲವನಾಗಿ ದಡ ಸೇರಿಸೆಂದು ಬೇಡುವೆ
ಆತ್ಮೀಯರಿಗೆಲ್ಲ ಎದೆ ತುಂಬ ಹಾರೈಸುವೆ
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 🎉💐-
ಪುಟಗಳು ತುಂಬಿದ ತೋಟ
ನೀ ಹೌದು ಜ್ಞಾನದ ಸಂಪುಟ
ವಿಕಾಸಗೊಳಿಸುವೆ ವಿವೇಕ
ತೋರುವೆ ವಿಶ್ವದ ವಿನ್ಯಾಸ
ಗ್ರಂಥಾಲಯದಲಿ ಮುಖ್ಯಸ್ಥ
ವಿಶ್ವವಿದ್ಯಾಲಯದಲಿ ಶ್ರೇಷ್ಠ
ಶಾಲೆಯ ಮಕ್ಕಳಿಗೆ ಆಧಾರ
ವಿದ್ಯಾಭ್ಯಾಸಕೆ ಸ್ಥಿತ ಮೂಲ
ಶಾರದಾಂಬೆಯ ಪ್ರತಿರೂಪ
ವಂದಿಸುವೆ ದಿನ ದಿನ
ಬದಲಾದರೂ ನಿನ್ನ ರೂಪ
ಕೀರ್ತಿ ಎಂದಿಗೂ ಅಪಾರ
-
ಭಾವನೆಗಳು ತಾಳುವ ಶಕ್ತಿಯನು ಮಿತಿ ಮೀರಿದ ಪರಿಸ್ಥಿತಿ ಬಂದಾಗ ಅನುಭವಿಸುವ ವಿಪರೀತ ಭಾವ
-
ಕಳೆದುಕೊಂಡದ್ದು ಎಷ್ಟೋ
ಕಲಿತುಕೊಂಡದ್ದು ಎಷ್ಟೋ
ಅಸ್ತವ್ಯಸ್ತ ಸ್ಥಿತಿಗಳ ಶಾಖೆ
ತಿಳಿಸಿಕೊಟ್ಟ ಪಾಠಗಳಿನ್ನೆಷ್ಟೋ
ದಾನವತನದ ಕಡೆ
ಮಾನವನ ಗಮನ
ವಿಪರೀತ ಬುದ್ಧಿಗಿದು
ವಿನಾಶದ ವಿಶ್ವರೂಪ
ಮಾನವೀಯತೆಯನು ಅಭ್ಯಸಿಸು
ಪುನಃ ಧರಣಿಯು ಚೇತರಿಸುವಳು
ಮನಸುಗಳನು ಜರಡಿ ಹಿಡಿದರೇ
ಸಿಗುವ ಸದ್ಬುದ್ಧಿಯೇ ಸ್ಥಿತಿಗೆ ಮದ್ದು-