QUOTES ON #KANNADAQUOTES

#kannadaquotes quotes

Trending | Latest
10 OCT 2018 AT 6:49

ಇನ್ನೊಂದು ಮನೆಯ ಹೆಣ್ಣವಳು,ಕಣ್ಣವಳು
ನಿಂದಿಸದಿರು,ನೋಯಿಸದಿರು
ಮತ್ತೊಂದು ಮನೆ ಬೆಳಗೋ ಬೆಳಕವಳು.

-


23 JAN AT 20:34

ಜೀವನ ಅಂದ್ರೆ ನಿಮ್ಮನ್ನು ನೀವು ಹುಡುಕಾಡೋದಲ್ಲ...ನಿಮ್ಮನ್ನು ನೀವು ರೂಪಿಸಿಕೊಳ್ಳೋದು...

-ಮಗುವನ್ನು
ಮಮತೆಯಿಂದ
ಮುದ್ದಿಸಿ
ಮಾನವಿಯತೆಯನ್ನು
ಮನಕರ್ಥೈಸಿ
ಮನುಷ್ಯನನ್ನಾಗಿ
ಮಾರ್ಪಡಿಸುವವಳು
ಮಾತೆಯೊಬ್ಬಳೆ....

-


30 SEP 2019 AT 13:27

ಎಷ್ಟೋ ಸಲ, ಕಟುನಿರ್ಧಾರಗಳೇ ಬದುಕಿನ ದಾರಿ ಸುಗಮವಾಗಿಸೋದು...

-


23 JUN 2019 AT 20:36

ಅವನು ಪ್ರೇಮ ಕಾವ್ಯ ಪಂಡಿತ,
ಅವನ ಮಾತುಗಳೆಲ್ಲ ಶೃಂಗಾರ ರಸದಿಂದಲೇ ಅಲಂಕೃತ, ಮುದ್ದು ಮಾಡೆನ್ನ ಮುನಿಸನ್ನು
ತಣಿಸುವದವನಿಗೆ ತುಂಬಾನೇ ಕರಗತ
ಅವನೆನ್ನ ಅಣುಅಣುವನಿಲ್ಲೂ ಅನವರತ
ಹರಿಸುತ್ತಿರುವ ಅನುರಾಗದಮೃತ

-


21 SEP 2019 AT 18:37

ಜೀವನದಲ್ಲಿ ಅನುಮಾನ, ಅವಮಾನ ದಾಟಿದ ಮೇಲೇ ಸನ್ಮಾನ...

-


16 DEC 2019 AT 19:43

ಬದುಕಿರುವ ತನಕ ಸಾಯೋ ಯೋಚನೆ ಮಾಡ್ಬೇಡಿ... ಬದುಕೇ ಸಾವನ್ನು ಸಾಯಿಸಿ, ನಿಮ್ಮನ್ನು ಬದುಕಿಸುತ್ತದೆ....

-


19 SEP 2019 AT 6:49

ಸೋಲನ್ನು ಸೋಲಿಸುವುದೇ ಗೆಲುವಿನ ಗುರಿ...

-


14 DEC 2019 AT 20:48

ತುಳಿದು ಬೆಳೆಯುವುದು,
ಬೆಳೆದು ಬೆಳೆಸುವುದಕ್ಕಿಂತ...
ಬೆಳೆಸಿ ಬೆಳೆಯುವುದು ಶಾಶ್ವತ....

-


19 SEP 2019 AT 6:20

ಬದುಕೊಂಥರಾ ಭಾವಗೀತೆ... ಕೇಳಿದಷ್ಟೂ ಕೇಳಬೇಕೆನಿಸೋ ಹಾಗೆ ಬದುಕಿದಷ್ಟೂ ಬದುಕಬೇಕೆನಿಸುತ್ತೆ...

-