ಕಲ್ಪಿಸಿ ಕೊಳ್ಳಲೇ ನಿನ್ನ
ನಾ...
ನಡೆದು ಬಂದ
ಹಾದಿಯ,,-
ಹರನ ಪೂಜಿಸುವವರು ಒಂದು ಕುಲವಂತೆ,
ಹರಿಯ ಭಕ್ತರೇ ಮತ್ತೊಂದು ಕುಲವಂತೆ,
ದೇವರಲ್ಲಿಯೇ ಇಲ್ಲದಿರುವ ಕುಲ,
ನಮ್ಮಲ್ಲಿ ಯಾಕಯ್ಯಾ?
ಮಾಂಸ ತಿಂದವ ಒಂದು ಕುಲವಂತೆ,
ತಿನ್ನದೇ ಇರುವವನು ಇನ್ನೊಂದು ಕುಲವಂತೆ,
ತಿನ್ನುವುದರಲ್ಲೇನಿದೆ ಸ್ವಾಮಿ ಕುಲಗಳು?
ಮದುವೆಯಲ್ಲಿ ಭಿನ್ನತೆ ಇರಲಿ ತಪ್ಪೇನಿಲ್ಲ,
ಅದು ಕುಲವ ನಿರ್ಧರಿಸಿದರೆ ಹೇಗೆ ಅಯ್ಯಾ?
ಆತ್ಮವಿಲ್ಲದ ದೇಹವನು,
ಹೂಳಿದರೆ ಒಂದು ಕುಲವಂತೆ,
ಅಗ್ನಿಗೆ ಅರ್ಪಿಸಿದರೆ ಒಂದು ಕುಲವಂತೆ,
ನಾ ಕುಲದ ಬಗ್ಗೆ ಮಾತಾಡಿದರೆ,
ಅಜ್ಞಾನಿ ಎನ್ನುವರು,
ಬರವಣಿಗೆಯಲ್ಲಿ ವಾಸ್ತವ ಬೇಕಲ್ಲವೇ?
ದಾನಗಳಿಗೆ ಅಂಟದ ಕುಲ,
ಬದುಕಿಗೆ ಏಕಯ್ಯಾ?
ಸ್ನೇಹಕ್ಕೆ ಕುತ್ತು ತರದ ಕುಲ,
ಪ್ರೀತಿಗೆ ಏಕಯ್ಯಾ?,,-
There are a hundred ways
to hate a person,
but we neglect at least one way
of loving them,,-
ನೀನು ಯಾರು ಎಂಬುದು ತಿಳಿದೂ
ತಿಳಿಯದ ಹಾಗೆ ನಟಿಸಿದ್ದೆ,
ಅದೇನೋ ಅಷ್ಟು ಆತುರ
ನಿನ್ನ ನೋಡುವ ಕುತೂಹಲ
ಹಾಗೆ ನೋಡುತ್ತಲೇ ನಿಂತಿದ್ದೆ,
ನೀನೇ ಮೊದಲು ಮಾತಾಡಿಸಿ
ಮುರಿದೆ ಮೌನವ ನನ್ನಲ್ಲಿ,
ಜಾರಿಮಾಡಿಕೊಟ್ಟೆ ನೀ
ಪ್ರೇಮದ ಸುಳಿವು ಮನದಲ್ಲಿ,,-
ವಿರಾಮ ಕೊಡುವಿರಾ ಎನಗೆ,
ದಯೆಯಿಲ್ಲದ ಮಾಯಾಜಾಲ,
ಹಿಂಸಿಸದೇ ಕುಗ್ಗಿಸುತ್ತಿದೆ,
ದೂಷಿಸದೇ ದೂರುತ್ತಿದೆ,
ಪೋಷಿಸದೇ ಮದ್ದೇರಿಸುತ್ತಿದೆ,
ಆರಾಮದಾಯಕ ಪಾಶವೆಂದರೆ,
ಇದೇ..ಯೇನು!!
ಈ ಚಕ್ರವ್ಯೂಹದ ಒಡೆಯನೇ,
ಆ ದೇ...ವರೇನು!
ಬಂದು ಹೋಗುವಲ್ಲಿ,
ದಕ್ಕಿದ್ದೇ ದುಃಖ,
ಪರರ ನಿಂದನೆಯೇ ಇಲ್ಲಿನ ಸುಖ,,-
There are some marks on my face,
that are indicators of my journey,,-
Saying what is right for you
does not mean that you
criticize someone else,
but rather that it should look
right in the eyes of justice,,-
Weak minds are still eating shit of society,
let's have our most innovative minds,,-