ಪಂಜರದ ಪಕ್ಷಿ ಅಲ್ಲದಿದ್ದರೂ
ಮನವು ಕೆಲವೊಮ್ಮೆ
ಹಾರ ಬಯಸುತ್ತದೆ.
ತನಗೆರಡು ರೆಕ್ಕೆಗಳು
ಇಲ್ಲದಿದ್ದರೂ ಮನವು
ಆಕಾಶದಲ್ಲಿ ಆನಂದವಾಗಿ
ಹಾರಾಡುವುದನ್ನು
ನಾವು ಅನುಭವಿಸುತ್ತೇವೆ.-
3 AUG 2021 AT 14:10
2 NOV 2020 AT 20:02
ಕಂಡಿಲ್ಲ ನಾನೆಂದು ಸುಳ್ಳನು
ಪ್ರವಾದಿಯ ಚರಿತ್ರೆಯ ಪುಟವನ್ನು ತೆರೆದಾಗ,
ಹದೀಸುಗಳ ಜೋಡಣೆಯಿಂದ ಮನದಟ್ಟಾಗುತ್ತದೆ,
ಪ್ರವಾದಿ ಮೊಹಮ್ಮದ್ (ಸ. ಅ) ನಮ್ಮ ಆದರ್ಶ ಮಾರ್ಗದರ್ಶಕ.
ಮರೆತೇ ಹೋಯಿತು ನನ್ನಯ ನೋವು,
ನೆನಪಿಸಿದಾಗ ಆ ನನ್ನ ಪ್ರವಾದಿಯು ಸಹಿಸಿದ ನೋವು.
ಮುಸ್ಲಿಮೇತರು ಅಂದರು ಯಶಸ್ಸಿನ ಮೂಲ ಖಡ್ಗವಲ್ಲ,
ಅವರು ಓದಿದ ನಂತರ ಪ್ರವಾದಿಯ ಚರಿತ್ರೆಯನು.
ಜೀವನದುದ್ದಕ್ಕೂ ಸರಳತೆ ಸಮಾನತೆ ಶಾಂತಿಯ ಹಿಂದಿದ್ದ ಪ್ರವಾದಿಯು,
ಶತ್ರುವಿಗೂ ಕಂಡಿತು ಪ್ರೀತಿಯ ಮುಗುಳ್ನಗೆಯೊಂದು,
ಕರಗಿತು ಶತ್ರುವಿನ ಮನುವು ಸ್ವೀಕರಿಸಿದರಂದು ಇಸ್ಲಾಂ ಧರ್ಮವನು.
ಮದುವೆಯು ಅವರದು ಆಗಿತ್ತು ಹೆಣ್ಣಿನ ರಕ್ಷಣೆಗಾಗಿ
ಅದರಲ್ಲೊಂದುತ್ತು ಉತ್ತಮ ಸಂದೇಶ,
ನೋಯಿಸದಿರು ನೀ ಆ ಮನವು
ಕಾಣುವೆ ಇಹಪರ ವಿಜಯವು.
-ಶಹೀಮ ಫಾತಿಮಾ.
-
21 JUN 2020 AT 14:33
ದೇಹದ ಆರೋಗ್ಯವನ್ನು ಕಾಪಾಡುವ ಯೋಗವನ್ನು ನೆನಪಿಸಿ,
ದೇಶದ ಗಡಿಯನ್ನು ಕಾಪಾಡಿದ ಯೋಧರನ್ನು ಮರೆಯಬಾರದಿತ್ತು.-
30 NOV 2020 AT 21:59
ಮುಗಿಯದ ಪರೀಕ್ಷೆಗಳೂ
ಪಠ್ಯಪುಸ್ತಕ ಗಳಿಲ್ಲದೆಯೇ
ಬರುವ ಪ್ರಶ್ನಾವಳಿಗಳೇ ಜೀವನ.
-