QUOTES ON #ಮಿತ್ರ

#ಮಿತ್ರ quotes

Trending | Latest
24 NOV 2020 AT 17:42

ಹೃದಯ_ನುಚ್ಚುನೂರಾಯಿತು =೦೧

"ಮರ್ಯಾದೆಯ ಜೊತೆ ಮಣ್ಣಾಗಲು ಬಯಸಿತು ಹಿರಿಯ ಜೀವ ಮರ್ಯಾದೆಯನ್ನೆ ಮಣ್ಣಾಗಿಸಿ ನಿಂತಿದ್ದ ಮಗನೆಂಬ ಮಹಾನುಭಾವ"

-


22 FEB 2021 AT 11:59

ಅನಿವಾರ್ಯ ಕೆಲಸಕ್ಕ
ಮುಂದ ಬಂದ ದೋಸ್ತ
ಅಂದ್ರ ಗೆಳೆತನ ಅಲ್ಲ
ಕಷ್ಟ ನು ಸುಖನು ಯಾವತ್ತು
ಜೊತೆಗಿರೊನು ಆಪ್ತಮಿತ್ರ

-



ಸ್ವಹಿತಕ್ಕಿಂತ ನಮ್ಮ ಹಿತವೇ
ಹೆಚ್ಚೆನ್ನುವವ ಸ್ನೇಹಿತ,
ಎಳೆಯ ಮುಗ್ಧ ಮನದಿಂದ
ಆದರಿಸುವವ ಗೆಳೆಯ,
ಬದುಕಿನಲ್ಲೊಂದು ಅಂದದ
ಚಿತ್ರ ಬಿಡಿಸುವವ ಮಿತ್ರ,
ತನ್ನತನಕ್ಕಿಂತ ಗೆಳೆಯನ ಸ್ನೇಹ
ಮುಖ್ಯ ಈ ಗೆಳೆತನ,
ಕತ್ತಲಲ್ಲೂ ಬೆಳಕಾಗಿ
ಬೆಳಕಿನಲ್ಲಿ ದಾರಿಯಾಗಿ
ನಿತ್ಯವೂ ಜೊತೆಯಾಗಿರುವ
ಅತ್ಯಾಪ್ತ
ನಿತ್ಯತೃಪ್ತ.

-



ಭಾವನೆಗಳಲಿ ಬಂಧಿಯಾಗಿಸುವ ಮನಸು ನಿಮ್ಮದು
ಸಾಧನೆಯ ಸಾರ್ಥಕತೆಯೆಡೆಗೆ ಸಾಗುವ ದಾರಿ ನಿಮ್ಮದು
ಬರಹಗಳಲಿ ಭಾವತುಂಬಿ ಬರೆಯುವ ಸಂಕಲ್ಪ ನಿಮ್ಮದು
ಸಮಾಜದ ಒಳಿತು ಕೆಡುಕುಗಳ ಕುರಿತು ಯೋಚಿಸುವ ಮನ ನಿಮ್ಮದು
ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಹೃದಯ ನಿಮ್ಮದು
ಇನ್ನೊಬ್ಬರ ಮನಸಿನ ನೋವಿಗೆ ಸಂತೈಸುವ ಪ್ರೀತಿ ನಿಮ್ಮದು
ಕನಸುಗಳ ಅರಮನೆಯಲ್ಲಿ ಜೀವಿಸುವ ಭಾವ ನಿಮ್ಮದು
ಕಲ್ಪನೆಯ ಲೋಕದಲ್ಲಿ ಪಯಣಿಸುವ ಪ್ರೇಮ ನಿಮ್ಮದು
ಕಾಣದ ಪ್ರೀತಿಯ ತೋರುವ ಭಾವನೆಯೂ ನಿಮ್ಮದೇ
ಹೀಗೆ ಸಾಗಲಿ ಜೀವನದ ಸಾಧನೆಯ ಸಾರ್ಥಕತೆಯೆಡೆಗೆ
ಸಾಧನೆಯ ಯಶಸ್ಸಿನ ಪಯಣ ನಿಮ್ಮದಾಗಲಿ
ಹಾಗೇಯೇ ನೆಮ್ಮದಿಯ ಸಂತಸದ ಕ್ಷಣಗಳೂ ನಿಮ್ಮದಾಗಲಿ..

ಹ್ಯಾಪಿ ಹುಟ್ದಬ್ಬ ಸಹೋದರ...

-


18 DEC 2020 AT 22:23

ಹೆಪ್ಪುಗಟ್ಟಿದ ನೋವನ್ನು ಒಳಗೆ
ಹಿಡಿದಿಡುವ ಕಲೆ ಕಲಿತುಕೊಂಡಿದ್ದೆ
ಆದರೆ ಪ್ರೀತಿಯ ನಿಸ್ವಾರ್ಥ ಕಂಗಳನ್ನು
ಕಂಡಾಗಲೆಲ್ಲಾ ನನ್ನ ಕಂಬನಿಗಳ
ತಡೆಯಲಾಗದೆ ಸೋಲುತ್ತಿರುವೆನೇಕೆ..?

-



ಈ ಕಾಲದಲ್ಲಿ..
ನಿಜ ಹೇಳ್ಕೊಂಡು
ನಿಯತ್ತಾಗಿರುವವರಿಗೆ
ಶತ್ರುಗಳು ಜಾಸ್ತಿ..
ಸುಳ್ಳು ಹೇಳ್ಕೊಂಡ್
ಡಬಲ್ ಗೇಮ್
ಆಡೋ ನನ್ ಮಕ್ಳಿಗೆ
ಮಿತ್ರರು ಜಾಸ್ತಿ.....

-


22 JUL 2022 AT 7:28

ನಕ್ಕಂತೆ ತೋರಿತಿಂದು ನಭದ ನಕ್ಷತ್ರ
ನೆನಪಿನಂಗಳದಲ್ಲಿ ನಕ್ಕಿದ್ದ ಮಿತ್ರ
ಮನದಿ ಕನಸುಗಳು ಅಳುತಿದ್ದವು
ಮರೆತಿರುವೆನೆಂಬ ಭ್ರಮೆಯೇ ವಿಚಿತ್ರ.

-


27 AUG 2018 AT 14:48

ಮನಕ್ಕೆ ನೋವಾದಾಗ
ಮಾತು
ಮುಖಾಗಿ
ಮೊರೆಹೊಗುವುದು
'ಮೌನ'ಎಂಬ
ಮಿತ್ರನಿಗೆ
ಮಾತ್ರ...
ಮಾತಲ್ಲಿ ಹೇಳಲಾಗದ
ಮನದ ನೋವಿಗೆ
ಮೊಲಾಮು ಹಚ್ಚಿ
ಮನಸಂತೈಸುವುದು
ಮೌನ...
"ಮೌನಕ್ಕಿರುವ ಬೆಲೆ
ಮಾತಿಗಿಲ್ಲ"
"ಮೌನಕ್ಕಿಂತ ಒಳ್ಳೆಯ
ಮಿತ್ರನಿಲ್ಲ"
ಮನಸ್ಸಿನಲ್ಲಿ ನೋವಿದ್ದರು
ಮಗುಳ್ಳನಗುವಂತೆ
ಮಾಡುವುದು
"ಮೌನ"...
ಮೊಂಡ
ಮೌತಿಗಿಂತ
ಮೌನದ ವ್ರತವೇ ಲೇಸು...!


-


4 OCT 2019 AT 23:50

ಮನಸು
ಮನಸು ‌ಮಾಡಿ
ಮನದಾಳದ
ಮಿತ್ರನಾಗಿ
ಮನದಲ್ಲಿ
ಮೂಡುವ
ಮಧುರ ಭಾವನೆಗಳಿಗೆ
ಮೂಲಕಾರಣವಾಗಿಹುದು.

-



ಭಾವಗೀತೆ
(View caption)

-