TULASI NAVEEN 🌦   (©Writer Sindhu Bhargava)
2.3k Followers · 2.1k Following

read more
Joined 16 June 2018


read more
Joined 16 June 2018
27 AUG AT 9:09

ಹೇ ಗಣಪ,
ಅಜ್ಞಾನ ಸರಿದಂತೆ
ತೋರುವೆ ನಿನ್ನಯ ದರುಶನವ,
ಧೈರ್ಯದ ದಾರಿಯಲ್ಲಿ
ದೀಪವನ್ನು ಬೆಳೆಸುವ,
ಒಂದು ಕೈಯಲ್ಲಿ
ಸಿಹಿಲಡ್ಡು ಹಂಚುತ,
ಇನ್ನೊಂದು ಕೈಯಲ್ಲಿ
ಭಯದ ನೆರಳು ನೀಗಿಸು ಬಾ..

-


26 AUG AT 23:03

ಚಂದ್ರ ಕಿರೀಟ ಧರಿಸಿದ ವಿನಾಯಕನೇ,
ದುಃಖ ಓಡಿಸುವ ದಯಾಳು ದೇವನೇ
ಬೆಳಗಿನ ಕಿರಣದಂತೆ ನಿನ್ನ ಕಣ್ಣು ಹೊಳೆಯುತ
ಪ್ರಾರ್ಥನೆಯ ಹಾದಿಯಲ್ಲಿ ಭಕ್ತರ ಹೃದಯ ಬೆಳಗುವವನೇ..
ನಿನಗೆ‌ ನನ್ನ ಕೋಟಿ ಪ್ರಣಾಮಗಳು

-


26 AUG AT 23:00

ಓ ಗಣಪನೇ,
ಭಕ್ತರಿಗೆ ಹಾದಿ ತೋರಿಸುವವನೇ,
ಕನಸುಗಳ ಕಾವಲುಗಾರ‌ ನೀನೇ..
ಹೃದಯದಲ್ಲೇ ನಿನಗಿದೆ‌ ಅರಮನೆ..,
ನಿನ್ನ ನಾಮದ ಜಪವು ಗಗನವ ತಲುಪಿದಾಗ,
ಅಂಧಕಾರವನ್ನು ಬೆಳಕಾಗಿಸುವವನೇ..

-


26 AUG AT 22:56

ಹೇ ಗಣೇಶ,
ನಿನ್ನ ಪಾದದ ಬಳಿ ಕುಳಿತಿರುವ ಚಿಕ್ಕ ಇಲಿ,
ಸಣ್ಣದಿದ್ದರೂ ಮಹಾ ಶಕ್ತಿಶಾಲಿ,
ನಿನ್ನಗಲ ಕಿವಿಗಳು ಹೇಳುತಿವೆ ಸಂದೇಶವ
“ಶಾಂತವಾಗಿ ಕೇಳು, ನಂಬಿಕೆಯೇ ಶ್ರೇಷ್ಠ ಇಲ್ಲಿ..

-


26 AUG AT 22:48

He who worships Ganesha with devotion
finds peace in the journey of life. Ganesha
is the symbol of wisdom, patience, and
new beginnings. In every prayer to
Ganesha, lies the strength to start afresh.

-


26 AUG AT 22:46

Where Ganesha is remembered, success
and happiness follow. Invoke Ganesha
before you begin, for he is the
Remover of all obstacles.

-


26 AUG AT 22:45

Lord Ganesha removes obstacles and paves the path to wisdom and prosperity. Surrender to Ganesha with a pure heart, and he will guide you through every hurdle.

-


22 AUG AT 14:37

ತುಪ್ಪದನ್ನಕ್ಕೆ ಚಿಟಿಕೆ
ಉಪ್ಪು ಬೆರೆಸಿದೊಡೆ
ರುಚಿಕರಗೊಳಿಸುವಂತೆ,
ಕೃತಜ್ಞತಾಭಾವವು
ಬದುಕನ್ನು
ಸುಗಂಧಮಯಗೊಳಿಸುತ್ತದೆ.
(ಉಪ್ಪಿನ ಋಣ) - ನುಡಿಸಿಂಧು🍁

-


22 AUG AT 14:35

ನಿಶ್ಚಲ ಸ್ಥಿತಿ- ತಪಸ್ವಿ

ನಿಶ್ಯಬ್ದ ಮನವೀಗ
ನಿಶ್ಚಲ ಹಂತಕೆ ತಲುಪಿ
ನಿಶ್ಚಿತ ಗುರಿಯಿಲ್ಲದೇ
ದಾರಿ ಕಾಣದಾಗಿದೆ!!

ದುಃಖ ದುಮ್ಮಾನಗಳಿಂದ
ಖಿನ್ನತೆಗೆ ಒಳಗಾಗಿ
ಒಂಟಿತನವೇ
ಕತ್ತುಹಿಸುಕಿದಂತಾಗಿದೆ!!

-


21 AUG AT 10:15

ಹೊಸತನದ ತೀರ

ಮಳೆ ಸುರಿಸಿ ನಿಂತರೆ
ಮನದ ಭಾರ ಇಳಿದಂತೆ..
ಕಣ್ಣೀರ ಧಾರೆಗೆ ಇನ್ನಿಲ್ಲ ಚಿಂತೆ..

ವರ್ಷಧಾರೆ ನದಿಯಾಗಿ
ಕಡಲ ಸೇರುವುದು ತಾನೆ?
ಹೊರಡಲು ಬಿಡಿ ಮನಕೆ
ಹೊಸ ತೀರವ ಸೇರಲಿ ಹಾಗೆ..

ಇಲ್ಲಸಲ್ಲದ‌ ನೆವವು
ಕಾಡುವುದು ಅನುದಿನವು
ಸೊಲ್ಲನಾಡದ ತುಟಿಗೆ
ಹೊಂದುವುದೇ ನಗುವು ?
- ಇನ್ನೂ ಇದೆ

-


Fetching TULASI NAVEEN 🌦 Quotes