Siddarajguru   (📝ಸಿದ್ದರಾಜಗುರು ಎಸ್ ವಡ್ನವರ, ಹೆಸ್ಕಾಂ ಗದಗ)
116 Followers · 79 Following

ಬದುಕಿಗೆ ಬರಬಹುದು ತ್ರಾಸ
ಬರಿಯೋದು ಬಿಡೋದಿಲ್ಲ ಪ್ರಾಸ 1993,
Joined 22 May 2019


ಬದುಕಿಗೆ ಬರಬಹುದು ತ್ರಾಸ
ಬರಿಯೋದು ಬಿಡೋದಿಲ್ಲ ಪ್ರಾಸ 1993,
Joined 22 May 2019
Siddarajguru 6 HOURS AGO

ನಿನ್ನ ನೋಡಿ ನನ್ನೆ ನಾ ಮರೆತೆ
ಎದೆಬಡಿತ ಜೋರಾಗಿ ಹೋಯಿತೆ
ನನ್ನೊಳಗೆ ನೀನೇಕೆ ಬೆರೆತೆ
ನಿನ್ನ ಮುಗ್ಧ ಪ್ರೀತಿಗೆ ನಾ ಮನಸೋತೆ

ಬಂಧಿಯಾಗಿರುವೆನು ನೀನ ಪ್ರೀತಿಯ ಅಲೆಯಲಿ
ಕಳೆದು ಹೋಗಿರುವೆನು ನಿನ್ನ ಪ್ರೀತಿಯ ಕನಸಲಿ
ಇರಲಾರೆ ಈಗ ನಿನ್ನ ಅಗಲಿ
ಜೊತೆಯಾಗಿರುವೆ ಸೋಲಿರಲಿ ಗೆಲುವಿರಲಿ ಈ ಬಾಳಲಿ

ನನ್ನ ಜೀವನದಲ್ಲಿ ದಿವ್ಯಜ್ಯೋತಿ ಆಗಿ ನೀ ಬಂದೆ
ಕತ್ತಲು ಇದ್ದ ಬದುಕಿಗೆ ಬೆಳಕು ಹೊತ್ತು ತಂದೆ
ನಿನ್ನ ಉಸಿರಿಗೆ ಉಸಿರಾಗಿರುವೆ ಹಗಲು-ಇರುಳು
ಪ್ರತಿಕ್ಷಣ ನಿನ್ನ ನೋವು-ನಲಿವುಗಳಿಗೆ ಆಗುವೆನು ನೆರಳು
ಕೊನೆವರೆಗೂ ಜೊತೆಯಾಗಿರಲಿ ಅಗಲದಂತೆ ನನ್ನ ನಿನ್ನ ಕಿರುಬೆರಳು
📝ಸಿದ್ದರಾಜಗುರು ಎಸ್ ವಡ್ನವರ, ಹೆಸ್ಕಾಂ ಗದಗ


-


Show more
7 likes
Siddarajguru 10 HOURS AGO

ನೀನೆ ನನ್ನ ಹೃದಯ ದೇಗುಲದಲ್ಲಿ ಪೂಜೆಗೆ ಮೀಸಲಿಟ್ಟಿರುವ ಹೂವು
ಕೊನೆಯವರೆಗೂ ಕಾಪಾಡುವೆನು ಬರೆದಂತೆ ನಿನಗೆ ನೋವು

-


ಹೃದಯ ದೇವತೆ #YourQuoteAndMine
Collaborating with Netravati Sogalad

16 likes · 2 comments
Siddarajguru 10 HOURS AGO

ನಾನು ಏನು ಎಂಬುದು ಇನ್ನೊಬ್ಬರಗೆ ಒತ್ತಾಯಪೂರ್ವಕವಾಗಿ ತಿಳಿಸುವ ಅವಶ್ಯಕತೆ ಇಲ್ಲ
ನನಗೆ ನಾನೇ ಎಲ್ಲಾ
ನಾವು ಅವರಂತೆ, ಅವರ ತಾಳಕ್ಕೆ ಕುಣಿದರೆ ಎಲ್ಲವೂ ಸಿಹಿ ಬೆಲ್ಲ
ನೇರ ನುಡಿ, ಇದ್ದದ್ದು ಇದ್ದಂಗೆ ಹೇಳಿದರೆ ಉರಿಯುತ್ತದೆ ಅವರಿಗೆ ಎಲ್ಲಾ
ಸತ್ಯದ ದಾರಿಯಲ್ಲಿ ಬದುಕುವವನಿಗೆ ಇಲ್ಲಿ ಸರಿಯಾದ ಸ್ವಾತಂತ್ರವಿಲ್ಲ

-


ವಾಸ್ತವ ಜೀವನ

11 likes · 2 comments
Siddarajguru 17 OCT AT 6:04

ಮಾಡಿಸದಿದ್ದರೆ ಪರವಾಗಿಲ್ಲ ನೀ ನನಗೆ ಎಣ್ಣೆ ಸ್ನಾನ
ನಾನು ಈಗಲೂ ಮಾಡುತ್ತಿರುವೆ ನಿನ್ನದೆ ಧ್ಯಾನ
ಕೇಳುತ್ತೇನೆ ನಮ್ಮ ಅಮ್ಮನ ಹತ್ರ
ಹೂಂ ಅಂದರೆ ಬುಕ್ ಮಾಡ್ತೀನಿ ಈ ದಿನವೇ ಮದುವೆ ಛತ್ರ
ನೀನೇ ನನ್ನ ಬದುಕು ಬೆಳಗುವ ಮಿನುಗುವ ನಕ್ಷತ್ರ

-


22 likes · 6 comments · 1 share
Siddarajguru 16 OCT AT 23:22

ಹೇಳಬೇಕೆಂದಿರುವ ನೂರು ಮಾತು ಉಳಿದಿವೆ ಎದೆಯಾಗ

-


ಮಾತು ಮೌನ.... #YourQuoteAndMine
Collaborating with Sneha Meti

13 likes
Siddarajguru 16 OCT AT 22:50

ಹುಡುಗಿಯರ ಪಾಲಿನ ಕನಸಿನರಾಜ
ನನ್ನ ಯುವರಾಣಿಗೆ ಮಾತ್ರ ನಾನು ಯುವರಾಜ

-


Show more
12 likes · 2 comments
Siddarajguru 16 OCT AT 19:01

ಚಂದವಾದ ಎರಡೂ ಸಾಲು ಬರೆಯಿರಿ

-


ನಿನ್ನ ಕಾಲ್ಗೆಜ್ಜೆ

12 likes · 3 comments
Siddarajguru 16 OCT AT 9:43

ಸೌಂದರ್ಯದ ಗಣಿ ನೀನು ಕನಕ
ನೀನು ಒಂತರಾ ಸುಕ್
ನಿನ್ನ ನೋಡಿದಾಗೆಲ್ಲ ಏರುತ್ತಾ ಕಿಕ್

-


ಸುಕ್Vsಕಿಕ್

11 likes · 1 share
Siddarajguru 15 OCT AT 22:58

ನನ್ನವಳು ತಲೆಕೆಳಗೆ ಮಾಡಿ ನಡೆಯುತ್ತಿದ್ದರೆ ತಲೆ ಮೇಲೆ ಎತ್ತುವುದಿಲ್ಲ ಅವಳು ಒಂದು ತರ ಕುರಿ
ಆದರೆ ಬುದ್ಧಿಯಲ್ಲಿ ಮಾತ್ರ ಜಾಣ ನರಿ

-


ಜಾಣ ನರಿ

12 likes · 2 comments · 1 share
Siddarajguru 15 OCT AT 18:21

ನಿಸರ್ಗದ ನೋಟವೇ ನಯನ ಮನೋಹರ
ಅದಕ್ಕೆ ಮೆರಗು ನೀಡುತ್ತಿರುವನು ಹುಣ್ಣಿಮೆಯ ಬೆಳದಿಂಗಳ ಚಂದಿರ
ಕೇಳಲು ಇಂಪು ಹಕ್ಕಿಗಳ ಚಿಲಿಪಿಲಿ ಕಲರವ
ಸಪ್ತಸಾಗರಗಳ ಜುಳುಜುಳು ಸಂಗೀತೋತ್ಸವ
ಕವಿಯ ಮನಕ್ಕೆ ಸ್ವರ್ಗದನುಭವ

ಮುಸುಕಿನ ಮುಂಜಾನೆ ಪ್ರಾಣಿ-ಪಕ್ಷಿ ಸಂಕುಲಕ್ಕೆ ಸಂಭ್ರಮದೊತ್ಸವ
ಅಳಿವಿನಂಚಿನಲ್ಲಿರುವ ಪ್ರಾಣಿಸಂಕುಲ ಉಳಿವಿಗಾಗಿ ಮಾಡೋಣ ಘಟಿಕೋತ್ಸವ
ಪ್ರತಿಯೊಬ್ಬರಲ್ಲಿ ಮೂಡಬೇಕು ಈ ಮಹತ್ವಪೂರ್ಣ ಕಾರ್ಯಾನುಭವ

ಅಳಿದು ಹೋಗಲಿ ಪ್ರಾಣಿ-ಪಕ್ಷಿಗಳ ಮೇಲೆ ಮಾಡುವ ಕ್ರೂರತನ
ಜೀವರಾಶಿಗಳ ಸಂರಕ್ಷಣೆ,ಮಾನವ ಸಂಪನ್ಮೂಲ
ಸಂಪತ್ಭರಿತವಾಗಿ ನೋಡಲು ಚಂದ ಅದರ ಸಂತಾನ
ಒಮ್ಮೆ ವಿಮರ್ಶೆ ಮಾಡಿಕೊಳ್ಳಿ ನಿಮ್ಮ ಮನ
ಆಗ ತಿಳಿಯುವುದು ನಿಮ್ಮ ಮೂರ್ಖತನ
ಅರಿತುಕೊಂಡರೆ ಕೊನೆವರೆಗೂ ಉಳಿಯುವುದು ನಮ್ಮತನ

-


Show more
16 likes · 1 share

Fetching Siddarajguru Quotes

YQ_Launcher Write your own quotes on YourQuote app
Open App