Desperately wishing our dreams come true at least in our day dreams
-
ಯೋಜನೆಗಳು ಸಿದ್ಧಿಸುತ್ತವೆ
ಹೇಗೆ ಕಟ್ಟಡಕ್ಕೆ ಬುನಾದಿ ಮುಖ್ಯ
ಹಾಗೆ ಯೋಜನೆಗಳಿಗೆ
ಸತ್ಕರ್ಮ ಸುಬುದ್ಧಿಗಳೇ
ಧೃಢವಾದ ಅಡಿಪಾಯ
ಇಲ್ಲದಿರೆ ಮರಳಿನ ಗುಡಿಸಲು
ತುಸು ಗಾಳಿ ಬೀಸಿದರೂ
ಅಲುಗಾಡಿ ನೆಲ ಕಚ್ಚುವುದು-
ಮನಸು ಹಗುರಾಯಿತು
ಈ ಪ್ರಕೃತಿಯ ಮಡಿಲಲ್ಲಿ
ಮಗುವಾದೆ ಈ ಸಂಜೆಯಲಿ
ಮುಳುಗುವ ಸೂರ್ಯನ ಕೆಂಪು
ಭುವಿಯ ಉಸಿರಿನ ಕಂಪು
ನನ್ನೆದೆಗೆ ಎರೆದಿದೆ ತಂಪು
ಇಲ್ಲಿಂದ ಹೋಗಲು ಮನಸಿಲ್ಲ
ಮರಳಿ ಗೂಡಿಗೆ ಹೋಗಬೇಕಲ್ಲ
ಮತ್ತೆ ಬರುವೆ ನಾಳೆ ಎಂಬುದಿದೆಯಲ್ಲ
-
ಆಯಸ್ಕಾಂತದಂತೆ ಸೆಳೆಯಿತೀಗ
ಎದೆಯಲ್ಲಿ ಎಂಥದೋ ಆವೇಗ
ಮಾತನಾಡಿಸಲೇ ನಾನೀಗ
ಗುಂಪಿನಲ್ಲಿ ಮರೆಯಾದಳಾಗ
ಬೇಸರದಿ ಚಡಪಡಿಸುವಾಗ
ಮತ್ತೊಮ್ಮೆ ಎದುರಾದಳಾಗ
ಮುಖಾ ಮುಖಿ ಭೇಟಿಯಾದಾಗ
ಕಣ್ಣು ಕಣ್ಣು ಕಲೆತಾಗ
ಮೌನವೇ ಮಾತಾಯಿತಾಗ
-
ಮುಂದಿನ ಏಳಿಗೆಗೆ ದಾರಿಯಲ್ಲವೇ
ಖಂಡಿತಾ ಅದು ತರುವುದು ಗೆಲುವೇ
ಸೋಲು ಗೆಲುವಿಗೆ ಮೆಟ್ಟಿಲು ಕೇಳಿಲ್ಲವೇ
ಬಿದ್ದನೆಂದು ನಗುವವರು ನಗಲಿ
ಗೆದ್ದು ಅಂಥವರ ಮುಂದೆ ಬೀಗಲಿ
ನಮ್ಮ ನಡೆ ಇತರರಿಗೆ ಮಾದರಿ ಆಗಲಿ
ಬಿದ್ದು ತಾನೇ ಮಗು ನಡೆಯಲು ಕಲಿವುದು
ನಡೆವವನು ಸಹಜ ಎಡವುವುದು
ಹಾಗಂತ ನಡೆಯುವುದೇ ಬಿಡಲಾಗದು
ನಡೆ ಮುಂದೆ ನಡೆ ಮುಂದೆ ಗುರಿ ನಮ್ಮದು
-