Shashwatha K  
276 Followers · 238 Following

Joined 20 April 2018


Joined 20 April 2018
29 APR 2023 AT 11:41

ಖಾಲಿಯಾಗದ ಅಂದದ ಅಕ್ಷಯ ಪಾತ್ರೆ ನೀನು,
ಬಡಿಸಿ ಉಣಬೇಕಿದೆ ಬೆಳದಿಂಗಳ ಪುಟ್ಟ ಕಣ್ ಬಟ್ಟಿಲಲ್ಲಿ..
ಕಳೆದು ಹೋದ ಕವಿತೆಯ ಪದಪುಂಜ ಸಾಲ ನೀನು
ಸ್ತಬ್ಧ ನಾ ತೀರದ ಮುಗುಳುನಗೆಯ ನೋಡುತ್ತಿರಲು..

ಶಾಶ್ವತ

-


4 APR 2023 AT 11:43

ಮತ್ತೆ ಒಲವಾಗಿದೆ ಚೂರು ನಿನ್ನ ಕಾಡಿಗೆಯು ಕಾಡಿದಾಗ,
ನನ್ನನ್ನೇ ನೋಡುತ ನಿನ್ನ ಜುಮುಕಿಯು ಕೂಗಿಲಿ ಈಗ,
ಗರಿಬಿಚ್ಚಿ ನವಿಲಾಗುವೆ ನೀ ನಲಿಯುವಾಗ,
ಮುಂಗುರಳು ಮುಂದಾಗಿವೆ ಮಂದವೇಗದಿ ನಿನ್ನ ನೋಡಲು ಬೇಗ..

ಶಾಶ್ವತ

-


25 SEP 2022 AT 16:26

ಸುಪ್ತ ಮನಸಿನ ಸಪ್ತ ಸ್ವರ ನೀನು,
ಆರೋಹಣ ಅವರೋಹಣದಿ ಆಮಂತ್ರಣ ನೀಡಿದ ನೀ ಗುಪ್ತಗಾಮಿನಿಯು..

ಶಾಶ್ವತ

-


16 JUL 2022 AT 18:10

ಮುಂಗಾರಿಗೂ ಮಿಸುಕದ ಈ ಮನದ ನೌಕೆಯ,
ಮುಂಗುರುಳಲೇ ಅಲುಗಿಸಿದಳು ಆಕೆ..

ಶಾಶ್ವತ

-


3 JUL 2022 AT 23:11

ಎಲ್ಲವ ತೊರೆದು ಹುಡುಕುತ ಹೊರಟೆ ತಂಗುದಾಣದ ನೆಲೆ,
ಅಲ್ಲಿಯೂ ನನ್ನ ಬಿಡದ ನೀ ಮಲೆನಾಡ ಕುಂಭದ್ರೋಣ ಮಳೆ..

ಶಾಶ್ವತ

-


16 JAN 2022 AT 12:57

ಮನದ ನೀರವತೆಗೆ ಭಾವನೀಯ ಭಂಗ ನೀನು ..
ಸಾರಂಗದ ಮನವು ಓಡದೆ ನಿಂತಿದೆ ಸಾಕಷ್ಟು ರಾಗಕೆ ಶ್ರುತಿ ನೀಡಲು ...

ಶಾಶ್ವತ

-


8 OCT 2021 AT 13:27

ಕ್ಷಣ ಚಿತ್ತ ನಾನು, ಕ್ಷಣ ಪಿತ್ತ ನೀನು,
ಅನಿರೀಕ್ಷಿತ ಭಾವನೆಗೆ ಪರಿಚಿತಳು ನಾನಿನ್ನು..
ಬುದ್ಧ ಈ ಮನಸಿಗೆ ಭಯೋತ್ಪಾದನೆ ನೀನು,
ಕಂಗಾಲಾಗುವ ನಿನ್ನ ಪರಿಗೆ ಕನವರಿಸುತ ಕಾಯುವೆನು..

ಶಾಶ್ವತ

-


20 MAY 2021 AT 22:50

ಸಾವಿರ ಸದ್ದಿನ ಗದ್ದಲದ ನಡುವೆ,
ನಿನ್ನ ಮೌನದ ಗೊಂದಲವು ಸೆಳೆಯಿತು ಕೊನೆಗೆ..

ಶಾಶ್ವತ

-


9 APR 2021 AT 20:23

ದೂರದಿ ಮನವು ನಿರ್ಲಿಪ್ತತೆಯ ಬಯಸಿದಾಗ..
ಶೂನ್ಯ ಚಿತ್ತದ ಕಥನವು ಗಸ್ತು ಮಾಡಿತು ಈಗ.....

ಶಾಶ್ವತ

-


4 JAN 2021 AT 21:23

Khwahish thi ki tere khayaal ki mehmaan ban jao..
Socha nahi tha ki tumne to mujhe apne jazbaat ki mehfill bana liya...

-


Fetching Shashwatha K Quotes