5 SEP 2018 AT 9:02

“ಗುರು ನಮನ”
ನಾ ಗುರುಗಳಿಗಾಗಿ ಬರೆದಿರುವೆ ಈ ಪುಟ್ಟ ಕವನ,,
ಆರಂಭದಲ್ಲಿಯೇ ನಾ ಹೇಳುವೆ
ಹೃದಯವಂತ ಗುರುಗಳಿಗೆಲ್ಲ
ಹೃದಯಪೂರ್ವಕ ನಮನ,,
ಕಾರಣ ಇವರೆಲ್ಲ ನಮಗೆ ದೇವರ ಸಮಾನ,,
ಭೂಮಂಡಲದಲ್ಯಾರಿಲ್ಲ ಗುರುಗಳ ಸಮಾನ,,
ದೇವರು ಕೊಟ್ಟ ಅಪರೂಪದ ಈ ವರದಾನ,,
ಗುರುಗಳೆಲ್ಲರೂ ನೀಡುವರು ಜ್ಞಾನದ ಅಭಿದಾನ,,
ಗುರುಗಳಿಗೆಲ್ಲರಿಗೂ ನಮ್ಮೆಲ್ಲರ ಭಾವದಾನ,,
ವಿದ್ಯಾರ್ಥಿಗಳ ಹೃದಯವೆಂಬ ನೆಲಕೆ
ಗುರುಗಳೆಲ್ಲರು ಬಿತ್ತುವರು ಜ್ಞಾನದ ಬೀಜಾನ,,
ನೆಲವೆಂಬ ಹೃದಯದಿ
ಫಲವೆಂಬ ಜ್ಞಾನವ ಬೆಳೆಸುವುದು ಗುರುಗಳ ಮನ,,
ಗುರುಗಳ ಪರಿಚಯ ನಮಗೆ ದೈವದತ್ತ ಬಹುಮಾನ,,
ನಾ ಹೃದಯದಿಂದೇಳುವೆ ಕೊನೆವರೆಗೂ ಗುರುಗಳಿಗೆ
ಕೋಟಿ ಕೋಟಿ ಮನ ಪೂರ್ವಕ ನಮನ!!

- ಆತ್ಮೀಯ ಕಣದಮನೆ🖌