savita kamath   (ಸವಿತಾ ನರೇಶ್ ಕಾಮತ್(ಅಹನಿ))
759 Followers · 247 Following

read more
Joined 24 August 2018


read more
Joined 24 August 2018
18 FEB AT 23:25

ನಿಮ್ಮ ಪ್ರೀತಿ ತುಂಬಿದ ಕೋಪದ ಮಾತು
ಭಾವಗಳೇರಿಳಿತಗಳಲ್ಲಿ ಸಮವಾಗಿ ಸೋತು
ಕಷ್ಟ ಸುಖಗಳೆನ್ನುದಿರಿಸಿ ಜೊತೆಯಾಗಿ ಬೆರೆತು
ಒಲವಗಡಲಿನಾಳವನು ಒಂದಾಗಿ ಅರಿತು
ಹಳತಾಗದ ಪ್ರೀತಿಗೆ ಪ್ರತಿದಿನವೂ ಹೊಸತು
ನಿತ್ಯನಗುವಿನ ಶುಭವಾಗಲಿ,
ನಿಮ್ಮೊಲವು ನಮಗೆಲ್ಲ ನೆರಳಗಾಲಿ.

-


17 FEB AT 15:57

ಅವನೆದೆಯಲ್ಲಿ ತಲೆಯಿಟ್ಟು ಅತ್ತಾಗಲೇ
ಕಣ್ಣೀರಿಗೂ ಸಾರ್ಥಕತೆಯ ಮುಕ್ತಿ
ನೋವುಗಳಾಗುವುವು ನಾಳೆಗಳ ಶಕ್ತಿ

-


17 FEB AT 15:46

ಮುನಿಸಿನ ಮಹಾಶಿಖರವನ್ನು ಮುತ್ತಿನಂತ ಮಾತುಗಳ ಮಳೆಯಲ್ಲೆ ನಿರಾಯಸವಾಗಿ ನೆಲಸಮಗೊಳಿಸಬಲ್ಲ ನಿಸ್ಸೀಮನವನು

-


16 FEB AT 21:16

ತಿಳಿನೀಲಿಬಾನಂಗಳದಿ
ಬೆಳದಿಂಗಳಿನರಸನ
ಕಚಗುಳಿಯಾಟಕೆ ನಾಚುತ್ತ
ತಂಗಾಳಿ ಮುಗುಳುನಗೆ ಬೀರುತ್ತಿತ್ತು.

ಮುಸ್ಸಂಜೆಯ ರಂಗೆಲ್ಲ
ಕಡಲಲೆಗಳ ಸಂಗದಲ್ಲಿ
ಮೌನ ಸಂಭಾಷಣೆಗಿಳಿದು ಕರಗುತ್ತಿತ್ತು.

ದೂರದೂರಿನ ಗೆಳಯನ ನೆನೆದಿಲ್ಲಿ
ಸಖಿಯೊಬ್ಬಳೆದೆಯಲ್ಲುದಿಸವ ಸವಿಭಾವ
ಕವಿತೆಯ ಸಾಲೊಳಗೆ ಸೇರುತ್ತಿತ್ತು
(ಸ್ಪೂರ್ತಿ: ತಿಳಿ ಮುಗಿಲ ತೊಟ್ಟಿಲಲಿ)

-


16 FEB AT 21:09

ಮನಸು ಮುರಿಯುತ್ತಿದೆ
ಕನಸು ಕಮರುತ್ತಿದೆ
ಮತ್ತೆ ಮತ್ತೆ ನಿನ್ನ‌ ನೆನಪೊಂದೆ‌ ಕಾಡಿದೆ
ಹೇಗಿರುವೆ ದೂರ ನೀ ಗೆಳಯ
ಚುಚ್ಚುತ್ತಿದೆ ಚುಚ್ವುತ್ತಿದೆ
ಒಲವಿಂದು ಮುಳ್ಳಾಗಿ‌ ಚುಚ್ವುತ್ತಿದೆ
ಹೆಚ್ಚುತ್ತಿದೆ ಹೆಚ್ಚುತ್ತಿದೆ
ಮನಸಲ್ಲೆ ಗುದ್ದಾಟ ಹೆಚ್ಚುತ್ತಿದೆ

-


15 FEB AT 23:25

ಒಲವೊಂದನ್ನೆ ನಂಬಿ ಬದುಕನ್ನೆ ನೀಡಲು ಬಂದಿದ್ದಳು
ಬದುಕೇ ಬೇಡವೆನಿಸುವಷ್ಟು ನೊಂದು
ನೇಣಿಗೆ ಶರಣಾದಳು

-


15 FEB AT 20:11

ಬಲವಾಗಿ ನಿಲ್ಲಬೇಕಾದ ಒಲವೇ ನಮ್ಮ ಅತಿದೊಡ್ಡ ದೌರ್ಬಲ್ಯವಾದರೆ ಅದಕ್ಕಿಂತ ದೌರ್ಭಾಗ್ಯ ಮತ್ತೊಂದಿಲ್ಲ

-


15 FEB AT 18:22

ಪರಸ್ಪರ ಅರಿತಾಗ ಅನುರಾಗ ಅತಿಮಧುರ
ಮನಸುಗಳು ಒಡೆದಾದ ಮೇಲೆ ಅಷ್ಟೇ ಭಯಂಕರ

-


15 FEB AT 11:44

ಬದುಕಿನ ಬಗೆಗೆ ಆಸೆಕಟ್ಟಿಕೊಟ್ಟಿದ್ದು ಅದೇ ಒಲವು
ಬದುಕನ್ನೇ ಭಾರವಾಗಿಸುತ್ತಿರುವದು ಮತ್ತದೇ ಒಲವು

-


15 FEB AT 11:32

ಹಂಚಿಕೊಂಡಷ್ಟು ಹೆಚ್ಚು ಸಂತೋಷ
ಹೇಳಿಕೊಂಡಷ್ಟು ದುಃಖ ಕಡಿಮೆ ಎಂಬದು ಮಾತು.
ಆದರೆ ಎಲ್ಲಾ ಸನ್ನಿವೇಶಗಳಲ್ಲಿ ಈ ಮಾತು ನಿಜವಾಗವುದಿಲ್ಲ.
ಕೆಲವರ ಬಳಿ ನೋವು ಹೇಳಿಕೊಂಡಾಗ ಅವರ ಪ್ರತಿಕ್ರಿಯೆಗಳು,ಆಳತಿಳಿಯದೆ ನೋವು ಸಮಂಜಸವಾದದ್ದೆ ಅಲ್ಲ ಎಂದು ತೀರ್ಮಾನಿಸಿ ತೋರುವ ಉದಾಸೀನತೆ ನೋವಿಗೆ ಮುಲಾಮಾಗದೆ ಮತ್ತಷ್ಟು ನೋವೆ ಮಾಡುತ್ತವೆ.
ಸಂತೋಷವು ಅಷ್ಟೇ ಎಲ್ಲರೂ ನಮ್ಮವರೆಂದುಕೊಂಡು ಹಂಚಿಕೊಂಡಾಗ ಮನಸಲ್ಲೇ ಕೆಲವರಾದರು ಅಸೂಯೆ ಪಡದೆ ಇರಲಾರರು.
ಸುಖ-ದುಃಖವನ್ನು ಅರಿತುಕೊಳ್ಳುವವರಲ್ಲಿ ಮಾತ್ರವೇ ಹಂಚಿಕೊಳ್ಳುವೊದೊಳಿತು.

-


Fetching savita kamath Quotes