26 JUN 2019 AT 16:55


ರಾಟೆ ತಿರುಗುತ್ತದೆ,
ಮೇಲೇರಿ ಕೆಳಗಿಳಿಯುತ್ತದೆ.
ಮೇಲೇರಿದ್ದು ಕೆಳಗಿಳಿಯಲೇಬೇಕು.
ಕೊಯ್ಲುಗೆ ಬಂದ ಹಾಲು ತುಂಬಿದ ತೆನೆ,
ಬಾಗಿ ಭೂಮಿ ಕಡೆ ನೋಡುತ್ತದೆ.
ಹಣ್ಣಾದ ಮಾವಿನ ಹಣ್ಣು ಬಾಗಿ,
ತೊಟ್ಟು ಮುರಿದು ಭೂಮಿಯ ಮೇಲೆ ಬೀಳುತ್ತದೆ.
ಮನುಷ್ಯ ತುಂಬಿದ ಕೊಡದಂತಿರಬೇಕು.
ಮಿತಿ ಮೀರಿದ ಹಣದ ಸಂಪಾದಿಸಿ,
ಕೊಡು ಕೈ ದಾನಿಯಾಗಿರಬೇಕು.
ದರ್ಪ ಮಾಡುತ್ತಾ ಜಿಪುಣನಾಗಬಾರಧು.
ದಾಸರು ಹೇಳಿರುವಂತೆ,
ಕೆರೆಯ ನೀರನು ಕೆರೆಗೆ ಚೆಲ್ಲಿ.

- Praloinche