Old_Monk   (VI_raw_GI)
1.6k Followers · 1 Following

⚫ಭಾಷೆ ಕನ್ನಡ ಭಾವನೆ ಕನ್ನಡಿಗ
#respectwomen
Joined 25 April 2018


⚫ಭಾಷೆ ಕನ್ನಡ ಭಾವನೆ ಕನ್ನಡಿಗ
#respectwomen
Joined 25 April 2018
Old_Monk 3 HOURS AGO

ಮೌನ ಕರಗಿ ಜುಳು ಜುಳು ಹರಿವ ಮಾತಿನ ಝರಿ ಹುಟ್ಟಲಿ
ಕಾಲುವೆ ನದಿಗಳಂತೆ ಜನರ ಮನ ತಣಿಸಿ
ಭಾವಂತರಂಗದ ಸಾಗರ ಸೇರಲಿ

-


31 likes · 6 comments · 1 share
Old_Monk 16 HOURS AGO

ಚೂರು ತಡವಾದರೂ ಪರವಾಗಿಲ್ಲ
ಕೊರಗಬೇಡಿ,ಕರಗಬೇಡಿ
ಬದುಕುವುದನ್ನು ಕಲಿಯಿರಿ
ಖುಷಿಯಾಗಿ ಇರುವುದನ್ನು ಕಲಿಯಿರಿ

-


52 likes · 10 comments · 4 shares
Old_Monk 11 NOV AT 19:02

ಇಳಿಸಂಜೆ ಹೊಳೆ ದಂಡೆ ತೇಲಿ ಬರುವ ತಂಗಾಳಿ ನೀನು
ನಸುಕಲ್ಲಿ ಮಂಜಿನ ಮುಸುಕಲ್ಲಿ ಮೈ ತಾಕೊ ಇಬ್ಬನಿಯು ನೀನು
ತುಸು ಮೈ ಕುಸುಕಿದಾಗ ಖುಷಿಯಿಂದ ಹೊರಳಾಡಿ
ತನು ಮನ ತಣಿಸುವೆ ನೀನು
ತಂಗಾಳಿಗೆ ತೇವ ಬೆರೆಸಿ,ಇಬ್ಬನಿಗೆ ಬೆವರು ಹರಸಿ
ತನು ದಣಿಸಿ ಮನ ಕುಣಿಸುವ ಮಾಯೆ ನೀನು

-


35 likes · 2 comments
Old_Monk 10 NOV AT 19:28

ನೆನಪಿದೆ ನನಗೆ,
ನೀ ಮುಂಗುರುಳು ಸರಿಸಿ ನಕ್ಕಿದ್ದು
ನಾ ಕದ್ದು ನಿನ್ನ ನೋಡಿದ್ದು
ನೆನಪಿದೆ ನನಗೆ
ಕಣ್ಣು ಕಲೆತು ಮನಸು ಬೆರೆತದ್ದು
ಎದೆಯ ಮೇಲೆ ತಲೆ ಇಟ್ಟು ಒಬ್ಬರನ್ನೊಬ್ಬರು ಸಾವರಿಸಿದ್ದು
ನೆನಪಿದೆ ನನಗೆ
ಕೆರೆ ದಂಡೆ ನನ್ನ ಕಾಯಿಸಿದ್ದು
ಕೋಪಾಗೊಂಡಾಗ ಕೆನ್ನೆ ಹಿಂಡಿ ಸಿಹಿ ಮುತ್ತು ಕೊಟ್ಟಿದ್ದು
ನೆನಪಿದೆ ನನಗೆ
ಅದೇ ಕೆರೆ ದಂಡೆ ಕಣ್ಣೀರು ಹಾಕಿ ನನಗೆ ವಿದಾಯ ಹೇಳಿದ್ದು
ನೆನಪಿದೆ ನನಗೆ
ನಿನಗಿಂತ ಒಳ್ಳೆ ಹುಡುಗಿ ಸಿಗುವಳೆಂದು ನೀನೇ ನನಗೆ ಹೇಳಿದ್ದು

-


36 likes · 8 comments
Old_Monk 7 NOV AT 19:52

ಬಯಲು ರಂಗದಿ ಬದಲಾಯಿತು ಬಣ್ಣ
ಬಿಳುಪಿದ್ದದ್ದು ಕಡುಗಪ್ಪು ನೋಡಿದರೆ
ಕೆರೆಯಾಚೆ ಎಲ್ಲೋ ಕಾಮನಬಿಲ್ಲು
ಹುಡುಕುತ್ತ ಹೊರಟರೆ ಅಲ್ಲೂ ಬಯಲು

ಅಲ್ಲಿಗಲ್ಲಿಯ ಬದುಕು,ನಡುವೆ ಸ್ವಲ್ಪ ತೊಡಕು, ಕೆಲವೊಮ್ಮೆ ಕೆಡುಕು.
ಸೋಮರಿಯಂತಿರುವ ಸರ್ವಜ್ಞ ನೀನು, ಸುಧಾರಿಸಲಾಗದ ಎಡವಟ್ಟು.
ನಾಲ್ಕು ದಿನದ ಸಂತೆಯಲಿ,ಮೂರು ಮುಕ್ಕಾಲು ವ್ಯಾಪಾರ ನಿನದು.
ಸಂತೆಯಲಿ ಕಳೆದು ಹೋದ ನಿನ್ನ ನೀನೇ ಹುಡುಕು

"ಬಣ್ಣ ಬದಲಾಯಿತು ಭಿನ್ನ ಬದುಕಿಗೆ,
ಸಿಕ್ಕವರೆಲ್ಲ ಸ್ನೇಹಿತರೆ,
ಬಂದವರೆಲ್ಲ ಬಂಧುಗಳೇ,
ಪ್ರತಿಕ್ಷಣ ಇದ್ದದ್ದು ಪ್ರೀತಿಯೆ"

-


42 likes · 8 comments
Old_Monk 7 NOV AT 8:22

ಮಳೆ ಬಂದು ಕೊಳೆ ತೊಳೆದು
ಹಾದಿಯಲಿ ಮಿಂಚು
ಮನದ ಮೂಲೆ ತಂಪು

-


42 likes · 6 comments
Old_Monk 6 NOV AT 8:11

ಉಸಿರ ಉಸಿರ ಮಧ್ಯ ಚೂರು ಅಂತರವಿರಲಿ
ಅಂತರ ನಿರಂತರವಾಗದಿರಲಿ
ಉಸಿರು ಬೆರೆಸುವ ಕಾರ್ಯ ನಿಂತು ಹೋಗದಿರಲಿ

-


41 likes · 8 comments
Old_Monk 5 NOV AT 18:55

ಹರೋ ಹಕ್ಕಿ ನೋಡಿ ನಾಯಿ ಬೊಗಳೆ ಬೋಗಳತ್ತೆ
ಹಂಗಂತ ಹಾರೋದನ್ನ ನಿಲ್ಸಕ್ ಆಗತ್ತಾ??😎

"ಬೋಗಳೋರು ಬೋಗಳ್ತ ಇರ್ಲಿ ನಾವ್ ಬೆಳೀತಾ ಇರೋಣ"

-


36 likes · 10 comments
Old_Monk 5 NOV AT 17:40

ದುಃಖ
ಕಣ್ಣೀರಿನಲ್ಲಿ ಶುರುವಾಗಿ ಮುಗುಳ್ನಗೆಯೊಂದಿಗೆ ಕೊನೆಯಾಗುತ್ತದೆ.

-


46 likes · 17 comments
Old_Monk 5 NOV AT 11:57

ನಿನ್ನ ಗತ್ತು ನಿನ್ನ ಸ್ವತ್ತು
ಇರಲಿ ನಿನ್ನ ಮೇಲೆ ನಿನಗೆ ನಿಯತ್ತು

-


46 likes · 6 comments · 5 shares

Fetching Old_Monk Quotes

YQ_Launcher Write your own quotes on YourQuote app
Open App