ನಾಗಲಕ್ಷ್ಮೀ ಕಡೂರು   (ನಾಗಲಕ್ಷ್ಮೀ ಕಡೂರು)
204 Followers · 16 Following

Joined 28 September 2017


Joined 28 September 2017

#ಕೊಡುಗೆ!
ಯಾವುದೇ ಸಂಬಂಧ ಬೆಸೆಯುವುದು ಬಲು ನಿಧಾನದ ಪ್ರಯಾಸದ ಕೆಲಸ
ಯಾರೊಬ್ಬರ ನಡುವೆ ತಂದಿಟ್ಟು ತಮಾಷೆ ನೋಡುವುದು ಬಲು ಸುಲಭದ ಕೆಲಸ
ತಮಗೆ ಆ ಅನುಭವವಾದಾಗಲೇ ನೋವು ಸಾಗರದಷ್ಟು ವಿಶಾಲ ಎನಿಸಿ ಬೇಸರ
ಇನ್ನೊಬ್ಬರ ನೋವಿಗಿಲ್ಲ ಯಾವುದೇ ಮೌಲ್ಯ ನಲಿವಿಗಿಲ್ಲ ಸಂಭ್ರಮ ಸಡಗರ!
ಅನ್ಯರಿಗೆ ನೀವು ನೀಡುವ ಕೊಡುಗೆಯೇ ನಿಮಗೂ "ತಲೆಗೆ ಬಿದ್ದ ನೀರು ಕಾಲಿಗೆ ಬಂದೇ ಬರುವಂತೆ" ಬರುವುದೆಂದ ಎಂದ ತಂದೆ ಶ್ರೀರಾಮ 🙏
- ನಾಗಲಕ್ಷ್ಮೀ ಕಡೂರು

-



#ಹುಸಿ
ನಿರೀಕ್ಷೆ ಸದಾಕಾಲ ಒಳಿತನ್ನೇ ನೀಡುವುದೆಂದು ವಿಶ್ವಾಸವಿಡಲಾಗದು
ನಿರೀಕ್ಷಿಸದಿದ್ದರೂ ಬಂದೆರಗುವ ಘಟನೆಗಳು ಆಕಸ್ಮಿಕ ಅಪಘಾತವೆನಿಸುವುದು
ನಿರೀಕ್ಷಿಸಿದ ಹೆಚ್ಚಿನವು ನಡೆಯದಿದ್ದಾಗ ಉಂಟಾಗುವ ಮಾನಸಿಕ ಆಘಾತವದು
ನಿರೀಕ್ಷಿಸಿದಂತೆಯೇ ನಾವು ನಡೆದರೆಲ್ಲವೂ
ಭಗವಂತನ ನೆನಪು ತಪ್ಪಿಯೂ ಬಾರದು
ಅನಿರೀಕ್ಷಿತವಾಗಿ ನಡೆವ ಸಕಲ ಕಾರ್ಯಗಳಿಗೂ ಕಾರಣೀಕರ್ತವಾಗಿ ಪ್ರಬಲ ಶಕ್ತಿಯೊಂದಿಹುದೆಂದ ಪ್ರಭುವು ಶ್ರೀರಾಮ!

-



#ಪಶ್ಚಾತ್ತಾಪ!

ಕಳೆದ ದಿನಗಳ ನೆನೆದು ಮರುಕಪಡುವುದ ತೊರೆದು
ಉಳಿದ ಜೀವನದ ಬಗೆಗೆ ಯೋಚಿಸುವುದ ಮರೆತು
ಅಳಿದುಳಿದ ಸ್ನೇಹ ಸಂಬಂಧಗಳ ಮರು ಕಸಿಮಾಡಿ ಚಿಗುರಿಸಿ
ಉಳಿದಿರುವನಕ ಜೀವಿಸಲು ಬೇಕಾದ ಆಮ್ಲಜನಕವನ್ನಾಗಿಸಲು
ಕ್ಷಮೆಯಷ್ಟೇ ಪಶ್ಚಾತ್ತಾಪವೂ ಮುಖ್ಯವೆಂದ ಕರುಣಾಗ್ರಣಿ ಶ್ರೀರಾಮ! 🙏

-



#ಕೊಡುಗೆ!

ಕೆಲವೊಮ್ಮೆ ಯಾರಿಗೆ ಯಾರೂ ಇಲ್ಲವೆಂಬ ಅನಾಥಪ್ರಜ್ಞೆ, ನೋವು
ಇನ್ನುಕೆಲವೊಮ್ಮೆ ಎಲ್ಲರಿಗೂ ಯಾರೋ ಒಬ್ಬರು ಇದ್ದೇ ಇರುತ್ತಾರೆನ್ನುವ ಅಭಯ, ನಲಿವು
ಕೆಲವರಿಗೆ ತಾವಲ್ಲದೆ ಯಾರೇ ಸಂತೋಷವಾಗಿದ್ದರೂ ಸಹಿಸಲಾರದಷ್ಟು ಉದರಬೇನೆ,
ಕೆಲವರಿಗೋ ಎಲ್ಲರೂ ಸಂತೋಷವಾಗಿ ಇರಬೇಕೆಂದು ದೇವರಲ್ಲಿ ಪ್ರಾರ್ಥನೆ,
ಇವೆಲ್ಲ ಭಿನ್ನತೆಯನ್ನು ಕಂಡು ಪರರಿಗೆ ಬಯಸಿದ್ದೇ ನಿಮಗೂ ವರವಾಗಿ ದೊರಕುವುದೆಂದ ಕರುಣಾನಿಧಿ ಶ್ರೀರಾಮ! 🙏
- ನಾಗಲಕ್ಷ್ಮೀ ಕಡೂರು

-



#ಮೌಲ್ಯ!

ಹಣವಿದ್ದ ಮಾತ್ರಕೆ ಗುಣವ ಕೊಳಲಾಗದು
ಋಣವ ತೀರಿಸಲಾಗದು,
ಮಣಗಟ್ಟಳೇ ಪುಣ್ಯ ಮೊದಲೇ ಗಳಿಸಲಾಗದು ಹಣ ಎಣಿಸಿದಂತೆ,
ಗುಣ ವಿಶೇಷಗಳನರಿತು ಅರ್ಹರಿಗೆ ನೀಡದಿರೆ ಮೌಲ್ಯವಿರದಿದಕೆ,
ಕಣಕಣಕು ಬೆಲೆಯಿಹುದು ಗಣಿಯಾಗು, ಸಂಗ್ರಹಣಿಯಾಗು, ದಾನಮಾಡಲು ಅಗ್ರಗಣಿಯಾಗಿ ಹೊಣೆಯರಿತು ನಡೆಯೆಂದ ಕರುಣಾಗ್ರಣಿ ಶ್ರೀರಾಮ!🙏
- ನಾಗಲಕ್ಷ್ಮೀ ಕಡೂರು

-



#ಸಂತೋಷ!
ಅವರಿಲ್ಲ ಇವರಿಲ್ಲ ಎಂದು ನೋವಿನಿಂದ ಕೊರಗದಿರೋಣ,
ಇರುವವರೆಲ್ಲರೂ ನಮ್ಮವರೆಂದು ತೃಪ್ತಿಯಿಂದ ಸಂತೋಷಪಡೋಣ,
ತಮ್ಮವರಿಂದಲೇ ನೋವನ್ನು
ಅನುಭವಿಸದಿರೋಣ,
ತಮ್ಮವರಿಂದಲೇ ಖುಷಿಪಡುತ್ತಾ ಸಂತೋಷ ಹಂಚುತ್ತಾ ನೆಮ್ಮದಿ ಕಾಣುವವರಾ ಕಂಡು,
ಸಂತೋಷ ಎನ್ನುವುದು ಸ್ನೇಹ ಸಂಬಂಧ, ಹಣಕಾಸು-ಆಸ್ತಿ ಅಂತಸ್ತಿನಲ್ಲಿಲ್ಲ, ನಲಿಯುವ ಮನದಲ್ಲಿಹುದೆಂದ ಗೆಲುವಿನ ದೊರೆ ಶ್ರೀರಾಮ! 🙏

- ನಾಗಲಕ್ಷ್ಮೀ ಕಡೂರು

-



#ಸುಖ! 😍

ಶ್ರಮಿಸುವವರ ಕಷ್ಟಕಂಡು ಒಳಿತಾಗಲೆಂದು ಹಾರೈಸುವವರ,
ಜೊತೆಗಾರರ ಪ್ರಗತಿಗೆಂದು ಸಲಹೆ ನೀಡುತ್ತಾ ಹುರಿದುಂಬಿಸುವವರ,
ಕೊಂಚ ಕೊಂಚವೇ ಆದರೂ ಹಂಚಿ ತಿನ್ನುವುದರಲ್ಲಿನ ಅಮಿತ ಸುಖವನು ಸಾರುವವರ,
ತನ್ನವರೆಲ್ಲರೊಂದಿಗೆ ತನ್ನ ಸುಖವನ್ನು ಕಾಣಲು ಬಯಸುವವರಾ ಕಂಡು,
ಊಟಕ್ಕೆ ಶುದ್ಧತುಪ್ಪ, ಖರ್ಚಿಗೆ ಕೋಟಿ ಕೋಟಿ ಇರದಿದ್ದರೂ ಪರಿಶುದ್ಧವಾದ ಮುಗ್ಧ ಮನಸಿರಲೆಂದ ಪ್ರಬುದ್ಧ ಶ್ರೀರಾಮ! 🙏

-



#ವಿಶ್ವಾಸ!
ಕೆಲವರ ಪ್ರೀತಿ ಆತ್ಮೀಯತೆ ಹಾಲಿನಂತಲ್ಲ, ಶುದ್ಧತುಪ್ಪದಂತೆ ಪರೋಕ್ಷ
ಸಣ್ಣ ಉರಿಯಲ್ಲಿ ದಪ್ಪನಾಗಿ ಕೆನೆಕಟ್ಟಿದ ಹಾಲಿಗೆ ಹೆಪ್ಪಿಟ್ಟು,
ಗಟ್ಟಿಯಾದ ಮೊಸರನ್ನು ಸಮಾಧಾನದಿಂದ ಕಡಗೋಲಿನಲ್ಲಿ ಕಡೆದು,
ತೆಗೆದ ಬೆಣ್ಣೆಯನ್ನು ತೊಳೆದು ಹದವಾಗಿ ಕಾಯಿಸಿ ವೀಳ್ಯದೆಲೆ, ಅರಿಶಿನ ಹಾಕಿದಾಗ ಘಮ ಬರುವ ಮರಳು ಮರಳಾದ ತುಪ್ಪದಂತೆ,
ವಿಧಾನ ನಿಧಾನವಾದರೂ ಖಂಡಿತವಾಗಿಯೂ ನಂಬಿಕೆಗೆ ಅರ್ಹರಾದವರೆಂದ ವಿಶ್ವಾಸಿ ಶ್ರೀರಾಮ!👍👌

-



#ದುರ್ಲಭ!

ಯಾರೊಬ್ಬರ ನಿರ್ಮಲವಾದ ಪ್ರೀತಿ ವಿಶ್ವಾಸ ವಾತ್ಸಲ್ಯ ಆತ್ಮೀಯತೆ ಕಾಳಜಿ
ನಿರೀಕ್ಷೆ ಇಲ್ಲದ ಅಭಿಮಾನ ಸ್ನೇಹ ಸಹಾಯ ಸಹಕಾರ ಮನೋಭಾವ
ಇದ್ದಲ್ಲಿದ್ದಾಗಲೂ ಎಲ್ಲಿಯೇ ಹೋದಾಗಲೂ ಆತ್ಮೀಯವಾಗಿ ದೊರಕುವ ಅನ್ನಾಹಾರ
ಸದಾ ಆರೋಗ್ಯವಾಗಿ ಖುಷಿಯಾಗಿ ಜೀವನ್ಮುಖಿಯಾಗಿರಲಿ ಎಂಬ ಗುರುಹಿರಿಯರ ಆಶೀರ್ವಾದ
ಎಲ್ಲರಿಗೂ ಸುಲಭವಾಗಿ ದೊರಕುವುದಲ್ಲ, ಅದಕ್ಕೂ ಯೋಗವಿರಬೇಕೆನ್ನುವ ಅದೃಷ್ಟವಂತ ಶ್ರೀರಾಮ!🙏

-



#ಸಂಪತ್ತು 😍

ಮಾತು ಕೇಳದಾ ಮನಸು, ನೀತಿ ನಿಯಮ ಇಲ್ಲದಾ ಸಮಾಜ
ರೀತಿ ನೀತಿ ಇಲ್ಲದಾ ಬದುಕು, ಪ್ರೀತಿ ನೀಡದಾ ನಮ್ಮವರು
ಜಾತಿಯ ಬೆನ್ನತ್ತಿ ಪ್ರೀತಿಗೆ ಬೆಲೆಕೊಡದ ಸಂಕುಚಿತ ಮನೋಭಾವದವರು
ಸ್ವಾರ್ಥಸಾಧನೆಗಾಗಿ ಪೋಷಕರನ್ನೇ ಮರೆತ ಸ್ವೇಚ್ಛಾಚಾರಿ ವಿದ್ಯಾವಂತರು
ಇವು ಮನೆಗೆ ಮಾರಿ, ಸಮಾಜಕ್ಕಲ್ಲ ಮಾದರಿ, ಸ್ನೇಹವೃಂದಕ್ಕಲ್ಲ ಸಿರಿಯೆಂದ ಸೀತಾರಮಣ ಶ್ರೀರಾಮ! 💚

-


Fetching ನಾಗಲಕ್ಷ್ಮೀ ಕಡೂರು Quotes