Mission and Vision
without specific goals
and tasks is just a dream.
ನಿರ್ದಿಷ್ಟ ಗುರಿಗಳು
ಮತ್ತು ಕಾರ್ಯಗಳಿಲ್ಲದ
ದ್ಯೇಯ ಮತ್ತು ದೃಷ್ಟಿ
ಕೇವಲ ಕನಸು.
ದೇವ್ ಗಡ್ವಿ.— % &-
Goals have no souls
without Vission, Mision
and Purpose.
ದೃಷ್ಟಿ, ಧ್ಯೇಯ ಮತ್ತು
ಉದ್ದೇಶವಿಲ್ಲದೆ ಗುರಿಗಳಿಗೆ
ಆತ್ಮಗಳಿಲ್ಲ.
ದೇವ್ ಗಡ್ವೀ.— % &-
ಯಶಸ್ಸು ಎಂದರೆ
ಉತ್ಸಾಹವನ್ನು ಕಳೆದುಕೊಳ್ಳದೆ
ಒಂದು ವೈಫಲ್ಯದಿಂದ
ಇನ್ನೊಂದು ವೈಫಲ್ಯದೆಡೆಗೆ
ಸಾಗುವ ಸಾಮರ್ಥ್ಯ.
-- ವಿಲ್ಸನ್ ಚರ್ಚಿಲ್-
ನಿಮ್ಮ ಗೊಂದಲಗಳಿಂದ
ನಿಮ್ಮನ್ನು ನೀವು ಪ್ರತ್ಯೇಕಿಸದಿದ್ದರೆ,
ನಿಮ್ಮ ಗೊಂದಲಗಳು ನಿಮ್ಮ
ಗುರಿಗಳಿಂದ ನಿಮ್ಮನ್ನು ಪ್ರತ್ಯೇಕಿಸುತ್ತವೆ.
# ಕನ್ನಡಿಗ ರಾಜ ಭಾರತೀಯ.-
ನಿಮ್ಮಲ್ಲಿ ಇಲ್ಲದಿರುವ ಬಗ್ಗೆ
ಚಿಂತಿಸುವ ಬದಲು,
ಇದಾಗಲೇ ನೀವು ಹೊಂದಿರುವ
ಬಗ್ಗೆ ಕೃತಜ್ಞರಾಗಿರಲು ಪ್ರಾರಂಭಿಸಿದರೆ,
ನೀವು ಅನುಭವಿಸುವ
ಏಕೈಕ ಭಾವನೆ ಸಂತೋಷ.
ಕನ್ನಡಿಗ ರಾಜೇಶ್ ನಾಯಕ್-
ನಿಮ್ಮ ಗುರಿಗಳನ್ನು ನೀವು ಎಷ್ಟು ಜಾಗರೂಕತೆಯಿಂದ ಯೋಜಿಸಿದರೂ ನೀವು ಅವುಗಳನ್ನು ಉತ್ಸಾಹದಿಂದ ಬೆನ್ನತ್ತಿ ಮುಂದುವರಿಸದ ಹೊರತು ಅವು ಎಂದಿಗೂ ನಿದಿರೆಯ ಕನಸುಗಳಿಗಿಂತ ಹೆಚ್ಚಾಗುವುದಿಲ್ಲ.
ಕನ್ನಡಿಗ ರಾಜೇಶ್ ನಾಯಕ್-
ನೋಡೋಕ್ ಇವ್ನ್ ಸಿಂಪಲ್ಲು..!
ಇವ್ನ್ ಕೆನ್ನೆ ಮೇಲೊಂದ್ ಡಿಂಪಲ್ಲು..!!
ಪೋಟೋ ಅಂದ್ರೇ ಇವ್ನ್ ಸ್ಟಿಲ್ಲು..!
ಇಷ್ಟ ಇವ್ನಿಗ್ ಫೈನ್ಆ್ಯಪಲ್ಲು..!!
ಕಣ್ಣು ನೋಡೋಕ್ ಈಗಲ್ಲು..!
ಶಾರ್ಪು, ಸ್ಟ್ರೈಟು ವಂಡರ್ಪುಲ್ಲು..!!
ಇಂದೇ ಇವ್ನ್ ಬರ್ತಡೇ,
ಕಳೆದ ಹತ್ರಲ್ಲು ನೀವ್ ಮಾಡಿದ್ ವಿಷ್ ಸಿಕ್ತ್ರಲ್ಲೋ..!
ನೋಡ್ತಾ ನೋಡ್ತಾ ಹನ್ನೊಂದ್ ಕೂಡ ಬಂತ್ರಲ್ಲೋ..!!
ಕಾಯ್ತಾ ಅವ್ನೆ ನಿಮ್ ಆಶೀರ್ವಾದಕ್ ನಿಂತ್ಕೊಂಡಲ್ಲೇ..!
ಮರಿಬೇಡಿ ನಿಮ್ ವಿಷ್ ಇವ್ನ್ ಪವರ್ ಕುಂತಲ್ಲೇ..!!
ಜನುಮದಿನದ ಶುಭಾಶಯಗಳು ರಿತಿಕ್..😍💓💓💓-
ನಾವು ವಾಸ್ತವಕ್ಕಿಂತ ಹೆಚ್ಚಾಗಿ ಕಲ್ಪನೆಗಳಿಂದ ಬಳಲುತ್ತೇವೆ.
ಕನ್ನಡಿಗ ರಾಜೇಶ್ ನಾಯಕ್.-
ಹಣತೆ, ನೀನೇಕೆ ಆ ದೇವನ
ಗುಡಿಯಲಿ ಕಾಯುತಾ ಕುಳಿತೆ.?
ಜಗದಿ ಕಾದಿರುವ ಆಶಾವಾದಿಗಳ
ಮನವ ಬೆಳಗಿಸುವುದ ನೀನೇಕೆ ಮರೆತೆ.?
ಹಣತೆ, ಬೆಳಗಬೇಕಿಂದು ನೀ ನಿನಗಾಗಿ
ಕಾದಿರುವ ಕರೋನ ಆಶಾವಾದಿಗಳ ಸಂತೆ..!
ಮನನವಾಗಲಿ ನಿಮ್ಮೀ ಹೃದಯಗಳಲೇ ಕುಳಿತಿಹನು
ಬಂಧಿಯಾಗಿ, ಆ ದೇವನೂ ಅಂತೆ..!!
ಸಾಮಾಜಿಕ ಅಂತರ ಕಾಯ್ವವನೊಬ್ಬನೇ
ಭವಿಷ್ಯದಲ್ಲಿ ಜೀವಂತ ಬದುಕುವವನಂತೆ..!!
ಜೋಪಾನ..! ನೀವೂ ಬದುಕಿ ಬಾಳಿ
ಭವಿತವ್ಯದ ನೂರಾರು ಸಂವತ್ಸರಗಳ ಕಂತೆ..!!
#ಕನ್ನಡಿಗ_ರಾಜೇಶ್_ನಾಯಕ್.-