ದತ್ತ ಪದ: ದೇಶ
ದತ್ತ ಪ್ರಕಾರ: ತಿಲಕ ವೃತ್ತ
ಶೀರ್ಷಿಕೆ:ಜೋಪಾನ.
ಸೋಪಾನವ ಹತ್ತುತ್ತಾ ಬರುವೆನ್
ಜೋಪಾನವ ಮಾಡುತ್ತಾ ನಿಲುವೆನ್
ಕಾಪಾಡುವ ದೇಶಕ್ಕೇ ನಮಿಪೆನ್
ಕೋಪಾಗ್ನಿಯ ಕೊಲ್ಲುತ್ತಾ ಗೆಲುವೆನ್
ಈಶ್ವರಲಿಂಗ ಸಂಪಗಾವಿ ಕಕ್ಕೇರಿ.-
ಮುಕ್ತಕ :
ಹೊಲಿಗೆಯಾ ಯಂತ್ರವದು ಕಲ್ಪತರು ಬಾಳಿನಲಿ
ತಲೆಯನುಪಯೋಗಿಸಲು ಬದುಕೊಂದು ಹಸನು
ಬಲವಾಗಿ ಕೈಹಿಡಿವ ಗಳಿಕೆಯಾ ಮೂಲವಿದು
ಬೆಲೆ ಪಡೆದ ಕುಶಲ ಕಲೆ ಬಸವತನಯ.
ಈಶ್ವರಲಿಂಗ ಸಂಪಗಾವಿ. ಕಕ್ಕೇರಿ.
13-06-2025.-
ಸೈನಿಕ ವೃತ್ತ.
ರ ಜ ರ ಲ ಗು.(ಗು ಲ ಗು /ಲ ಗು ಲ /ಗು ಲ ಗು /ಲ ಗು /)
ಮಟ್ಟ ಹಾಕು.
ಕಾಡುಗ/ಳ್ಳರನ್ನು/ ಮಟ್ಟ ಹಾ/ಕಿ/ ರೈ /
ಬೇಡಿ ತೊ/ಟ್ಟು ಜೈಲು/ ಸೇರಿ ಬೀ/ಳ/ಲೈ /
ಬೀಡುಬಿ/ಟ್ಟ ಜೀವ/ಜಂತು ಬಾ/ಳ/ಲೈ /
ಪೀಡೆ ದೂ/ರವಾಗಿ/ ಶಾಂತಿ ದ/ಕ್ಕ/ಲೈ /
ಈಶ್ವರಲಿಂಗ ಸಂಪಗಾವಿ. ಕಕ್ಕೇರಿ.
08-06-2025-
ಮುಕ್ತಕ.
ಪ್ರತ್ಯೂಷ.
ಗಗನದಲಿ ಪ್ರತ್ಯೂಷ ಹೊಂಬಣ್ಣ ಸಿಂಪಡಿಸಿ
ಖಗಮೃಗಕೆ ಆನಂದ ಹಂಚಿ ಸಂಭ್ರಮಿಸಿ
ಮಿಗಿಲಾದ ಕಾಯಕದ ಒಲವನ್ನು ಹೆಚ್ಚಿಸುವ
ಸೊಗಸಾದ ಅನುಭವವು ಬಸವತನಯ.
ಈಶ್ವರಲಿಂಗ ಸಂಪಗಾವಿ ಕಕ್ಕೇರಿ.
05-06-2025
-
ಮುಕ್ತಕ.
ಪ್ರತ್ಯೂಷ.
ಗಗನದಲಿ ಪ್ರದೂಷ ಹೊಂಬಣ್ಣ ಸಿಂಪಡಿಸಿ
ಖಗಮೃಗಕೆ ಆನಂದ ಹಂಚಿ ಸಂಭ್ರಮಿಸಿ
ಮಿಗಿಲಾದ ಕಾಯಕದ ಒಲವನ್ನು ಹೆಚ್ಚಿಸುವ
ಸೊಗಸಾದ ಅನುಭವವು ಬಸವತನಯ||
ಈಶ್ವರಲಿಂಗ ಸಂಪಗಾವಿ ಕಕ್ಕೇರಿ.
05-06-2025
-
ದತ್ತ ಪ್ರಕಾರ: ಸೈನಿಕ ವೃತ್ತ.
ದತ್ತ ಪದ/ದತ್ತ ವಿಷಯ: ಶಾಂತಿ.
ಶೀರ್ಷಿಕೆ:ಟೊಂಕ ಕಟ್ಪು
ರ ಜ ರ ಲ ಗು
ಗು ಲ ಗು/ಲ ಗು ಲ /ಗು ಲ ಗು /ಲ ಗು/
ದೇಶ ಕಾ/ಯಲಿಕ್ಕೆ /ಟೊಂಕ ಕ/ಟ್ಟು/ತಾ/
ಮೋಸಗಾ/ರರನ್ನು/ನಾಶಮಾ/ಡು/ತಾ/
ಕೋಶವ/ನ್ನು ಕಾಯ /ಬೇಕು ದೇ/ಶ/ದಾ/
ದ್ವೇಷ ವ/ನ್ನು ನೀಗಿ/ ಬಾಳು ಮಾ/ನ/ವಾ/
ಈಶ್ವರಲಿಂಗ ಸಂಪಗಾವಿ ಕಕ್ಕೇರಿ.
01-06-2025-
ದತ್ತ ಪ್ರಕಾರ: ಸೈನಿಕ ವೃತ್ತ.
ದತ್ತ ಪದ/ದತ್ತ ವಿಷಯ: ಶಾಂತಿ.
ಶೀರ್ಷಿಕೆ:ಟೊಂಕ ಕಟ್ಪು
ರ ಜ ರ ಲ ಗು
ಗು ಲ ಗು/ಲ ಗು ಲ /ಗು ಲ ಗು /ಲ ಗು/
ದೇಶ ಕಾ/ಯಲಿಕ್ಕೆ /ಟೊಂಕ ಕ/ಟ್ಟು/ನೀ /
ಮೋಸಗಾ/ರರನ್ನು/ನಾಶಮಾ/ಡು/ತಾ/
ಕೋಶವ/ನ್ನು ತುಂಬ/ಬೇಕು ಬೀ/ಗು/ತಾ
ದ್ವೇಷ ವ/ನ್ನು ನೀಗಿ/ ಬಾಳು ಮಾ/ನ/ವಾ/
ಈಶ್ವರಲಿಂಗ ಸಂಪಗಾವಿ ಕಕ್ಕೇರಿ.
-
ಚಂದ್ರಿಕಾವೃತ್ತ .(ನ ನ ರ ಲ ಗು)
ಮಮತೆ.
ದೇವತೆ.
ಜನನಿ ಮಮತೆ ಬಂಧಭದ್ರ ಕಾ
ರಣ ತಿಳಿಸುತ ಜೀವ ತೇಯುತಾ
ಮನವ ತನಿಸಿ ಸೇವೆ ಮಾಡುತಾ
ಜನುಮ ಸವೆಸಿ ದೇವರಾದಳೂ..
ಈಶ್ವರಲಿಂಗ ಸಂಪಗಾವಿ. ಕಕ್ಕೇರಿ.
25-05-2025-
ಚಂದ್ರಿಕಾ ವೃತ್ತ.
ಗೆಲುವು.
ನಿಯಮ.
ಲ ಲ ಲ/ಲ ಲ ಲ/ಗು ಲ ಗು/ಲ/ಗು/
ಶೀರ್ಷಿಕೆ :ಸಂತಸ.
ಗೆಲುವು/ ಮನಕೆ /ತೋಷ ತಂ/ದಿ/ದೇ/
ಬಲವು/ ಸಹಜ /ಮೂಡಿ ಬಂ/ದಿ/ದೇ/
ಕಲಹ/ ಮನುಜ/ ಬಂಧ ಸೀ/ಳಿ/ತೈ/
ಜಲದ/ ತೆರದಿ/ ರಕ್ತ ಚಿ/ಮ್ಮಿ/ ತೈ/
ಈಶ್ವರಲಿಂಗ ಸಂಪಗಾವಿ. ಕಕ್ಕೇರಿ.
-
ಜಳೋದ್ಧತ ಗತ ವೃತ್ತ.
ನಿಯಮ :ಜ ಸ ಜ ಸ.
ವಿಶಾಲ.
ಹೇಯ ಕೃತ್ಯ.
ಕರಾಳಮಯ ಕೃತ್ಯ ಮಾಡಿರುವರೈ
ಭರಾಟೆಯಲಿ ದೈತ್ಯ ರಾಗಿರದಲೇ
ನರಾಧಮ ವಿಶಾಲ ಭಾವ ತಳೆಯೈ
ದುರಾಸೆಯ ಕುಕಾರ್ಯ ಮೂರ್ಖತನವೈ.
ಈಶ್ವರಲಿಂಗ ಸಂಪಗಾವಿ ಕಕ್ಕೇರಿ.-