꧁༺֎ಏಕಾಂಗಿ֍༻꧂🖤 1⃣7⃣9⃣8⃣   (𝑵𝑨𝑮𝑨𝑹𝑨𝑱_𝑯𝑨𝑳𝑳𝑰𝑮𝑬𝑹𝑰 🖤)
1.3k Followers · 31 Following

read more
Joined 5 January 2019


read more
Joined 5 January 2019

♦೮೦೦* ನೇ ಬರಹ♦
❤❤❤❤❤❤❤
ಆಗೊಮ್ಮೆ ಈಗೊಮ್ಮೆ
ಅತಿಥಿಯಾಗಿದ್ದ ನಿನ್ನ
ಕನಸುಗಳು ಈಗ
ಹೃದಯದಲ್ಲಿ ಖಾಯಂ
ನಿವಾಸಿಗಳಾಗಿವೆ,🔹
ಒಂದೇ ಭೇಟಿಯಲ್ಲಿ
ಮನವ ದೋಚಿ
ನನ್ನೆಲ್ಲಾ ಚಿತ್ತವನ್ನು
ಸೆಳೆದು ಎಲ್ಲವನ್ನು
ಮರೆಸಿ ಬಿಟ್ಟಿರುವೆ, 🔹
ಮತ್ತೊಮ್ಮೆ ಯಾವಾಗಲಾದರು
ಭೇಟಿಯಾದರೆ ಮರಳಿ
ನೀಡು ನನ್ನ ಮನವನ್ನು
ಇಲ್ಲವಾದರೆ ತುಸು
ಜಾಗ ನೀಡು ನಿನ್ನ ಹೃದಯದಲಿ..!!💎

-


Show more
53 likes · 37 comments

# ನಮ್_ಜನಾನೇ_ಹಿಂಗೆ

ಅವಮಾನ ಮತ್ತು ಸನ್ಮಾನ ಎರಡೂ ನಮ್ಮವರೇ ನೀಡುವರು,
ಮೊದಲನೆಯದು ಸೋಮಾರಿ ಆದಾಗ, ನಂತರದ್ದು ಸಾಧಕನಾದಾಗ..!!

-


Show more
67 likes · 4 comments

♦♦♦ ರುಬಾಯಿ ♦♦♦

ಸಂಗೀತ ಸ್ವರಗಳ ಇಂಪು
ಕುಸುಮವು ಸುಸುವ ಕಂಪು
ಸವಿಯುತಿದ್ದರೆ ನಾವೆಲ್ಲಾ
ದಿನ ಚೈತನ್ಯದ ಹೊಳಪು

-


Show more
71 likes · 1 comments

ಈ ಸಂಜೆ ಹೊತ್ತಲ್ಲಿ
ಯಾರಿಲ್ಲ
ಅಕ್ಕ ಪಕ್ಕದಲ್ಲಿ,🔸
ನೀಡು ಕೆನ್ನೆಯ ಮೇಲೆ
ಒಂದಿಷ್ಟು
ಗುರುತುಗಳನು,🔸
ಕೊಟ್ಟ ಅಸಲಿನೊಂದಿಗೆ
ಬಡ್ಡಿ ಕಟ್ಟಿ
ಪಾವತಿಸುವೆ,🔸
ಕೊಂಚ ಸಿಹಿಯ ಬೆರಸಿ
ಒಂದೊಂದಾಗಿ
ಮರಳಿ ಕೊಡುವೆ..!!🔸

-


Show more
76 likes · 11 comments

ಜರಿವ ಜನರು ಇದ್ದಾಗಲೇ ಸುತ್ತಲು,
ಅವರ ಮಾತುಗಳೇ ಪ್ರೇರಣೆ ಜಯಿಸಲು..!!

-


Show more
62 likes · 6 comments

ಕಷ್ಟಗಳ
ಕಡಲಲ್ಲಿ
ನಗುವೆಂಬ
ದೋಣಿಯೊಂದಿಗೆ
ಸಾಗಿದರೆ
ಸುಖದ
ನಿಲ್ದಾಣ
ಬೇಗ ಸಿಗುವುದು..!!

-


Show more
70 likes · 4 comments

ಮದುವೆ ಮನೆಯಲ್ಲಿ
ಅತ್ತಿಂದಿತ್ತ ಚಿಟ್ಟೆಯಂತೆ
ಓಡಾಡುತ್ತಿದ್ದಳು, 🔹
ಎದುರಾದಳು ಕಣ್ಣ ಮುಂದೆ
ಅವಳನು ನೋಡುತ
ಕಲ್ಲಾಗಿ ಹೋದೆ ನಾನು, 🔹
ಪದೇ ಪದೇ ಕಣ್ಣ ಮುಂದೆ
ಬಂದು ನಿಲ್ಲುವ ಮುಂಗುರುಳು,
ಉಯ್ಯಾಲೆಯಂತೆ ತೂಗಾಡುತ್ತಿದ್ದ
ಕಿವಿಯೋಲೆಗಳು,🔹
ಕೆಳದುಳಿಯ ಎಡಗಡೆ
ಒಂದು ಕಪ್ಪು ಚುಕ್ಕೆ
ನಡೆದು ಬರುವಾಗ
ಅಪ್ಸರೆಯಂತೆ ಕಾಣುವ
ರೂಪಸಿ ಅವಳು,🔹
ನಗುವಾಗ ಚುಕ್ಕಿಗಳಂತೆ
ಹೊಳೆವ ದಂತಗಳು,🔹
ನನ್ನತ್ತ ನೋಡಿದಾಗ
ಹೃದಯಕ್ಕೆ ನಾಟುವ ನೋಟಗಳು,🔹
ಮನವ ಸೆಳೆದ
ಮೌನಿ ಅವಳು, 🔹
ಹೇಳದೇ ಕೇಳದೇ
ಹೃದಯವ ಕದ್ದಳವಳು,
ಪೆದ್ದು ಹುಡುಗನ
ಮನವ ಗೆದ್ದವಳು..!!♦

-


Show more
68 likes · 11 comments

ಬಯಸಿದರೆ,♦
ಆಗಸಕ್ಕೆ
ಏಣಿ ಹಾಕಿ,🔸
ಚುಕ್ಕಿ ಚಂದಿರರನ್ನು
ಹೊತ್ತು ತರುವ
ನನ್ನನ್ನು,🔸
ಬೇಕಂತಲೇ
ಪದೇ ಪದೇ
ತಿರಸ್ಕರಿಸುವುದು
ಸರಿ ಅಲ್ಲ..!!🔸

-


Show more
90 likes · 5 comments

ಸೋರುವ ಸೂರಿನಡಿ
ನೆನೆಯದಂತೆ ಸೆರಗಿನಿಂದ
ಬಚ್ಚಿಟ್ಟವಳು,♦

ಕೊರೆವ ಚಳಿಯಲ್ಲಿ
ನಡುಗದಂತೆ ಕಂಬಳಿಯಿಂದ
ಹೊದ್ದಿಸಿದವಳು,♦

ಸುಡುವ ಬಿಸಿಲಲ್ಲಿ
ಕಾಲು ಸುಡದಂತೆ
ಹೊತ್ತು ನಡೆದವಳು,♦

ಬೇಡದೇ ನೀಡುವ
ದೇವರು ಬಳಿಯಿರುವಾಗ
ಬಡವ ನಾನಲ್ಲ..!!♦

-


Show more
92 likes · 28 comments · 2 shares

# ಚಂದಿರನ ನಾಚಿಸುವಂತಹ ಚೆಲುವಿ ನನ್ನವಳು ❤

ನಡುರಾತ್ರಿ ವೇಳೆಯಲಿ
ಸಾಗುತಿದ್ದೇವು ಜೊತೆಯಲಿ
ಹುಣ್ಣೀಮೆಯ ಬೆಳಕಲ್ಲಿ
ನನ್ನವಳನು ಕಂಡ ಚಂದಿರನಲ್ಲಿ
ಒಂದು ಪಟ್ಟು ಹೆಚ್ಚು ನನಗಿಂತ ಚಲುವಿನಲ್ಲಿ
ಎನ್ನುತ ಅವಿತು ಕುಳಿತ ಮೋಡದ ಮರೆಯಲಿ

-


Show more
74 likes · 4 comments · 1 share

Fetching ꧁༺֎ಏಕಾಂಗಿ֍༻꧂🖤 1⃣7⃣9⃣8⃣ Quotes

YQ_Launcher Write your own quotes on YourQuote app
Open App