ಮಾತೆಲ್ಲಾ ಇನ್ನು ಮುಗಿದ್ಹೋದರೇನು
ಮೌನದೊಳಗಿರುವರ್ಥವರಿಯೆ ಏನು!?
ಮಾತು ಮೌನಗಳಿಂದ ಮೀರಿದಾ ಭಾವದಲಿ
ಭಾವಾನುಬಂಧವದು ಬೆಸೆದಿಲ್ಲವೇನು!?
ಹೃದಯ ಮಿಡಿತದ ಲಯವು ಮೌನದಿ ನುಡಿದಾಗ
ಮೌನವೇ ಮುತ್ತಾಗಿ ಮನದುಂಬದೇನು?
ಭಾವ ಲಹರಿಯಲೇ ತೇಲುತಿಹ ಮನಸಿಗೂ
ಕನಸು ನನಸಿನ ಅರಿವು ಮೂಡಬೇಕೇನು!?— % &-
ಎನ್ನ ತೊರೆದಾ ಬಂಧು ಬಾಂಧವರೇ
ಇಗೋ ನಿಮಗೆ ವಂದನೆ
ನಿಮ್ಮಿಂದಲೇ ಕಲಿತೆ,
ತೊರೆದು ಜೀವಿಸುವುದನೇ
ರಾಗದ್ವೇಷಗಳ ಮಡುವಲ್ಲಿ
ನಿಜ ಪ್ರೀತಿಯನು ಅರಿತೆ
ನಿಮ್ಮಿಂದ ದೂರಾಗಿ
ಭಗವಂತನಾ ಪಡೆದೆ.
ಎನ್ನ ತೊರೆದ ಬಂಧು ಬಾಂಧವರೇ
ಇಗೋ ನಿಮಗೆ ವಂದನೆ
ನಿಮ್ಮಿಂದಲೇ ಕಲಿತೆ
ಬಾಳಿನ ನಿಜ ಅರ್ಥವನೇ-
ಜೋಗಿ ಒಬ್ಬ ವ್ಯಕ್ತಿ ಅಲ್ಲ
ಆದರೇ ಒಂದು ಶಕ್ತಿ ಅಂತೂ ನಿಜ
ನಮ್ಮ ಬರವಣಿಗೆಯನ್ನ ಪ್ರೋತ್ಸಾಹ ಮಾಡುವ
teacher ಅಂತಹ ಶಕ್ತಿ
ಆಲೋಚನೆಗಳು ಬೇಕಾದಾಗ
Friend ತರ ಇರುವ ಶಕ್ತಿ
ನಮ್ಮ ಭಾವನೆಗಳನ್ನು ಮತ್ತೆ ಮತ್ತೆ
ಬಡಿದೆಬ್ಬಿಸುತ್ತಿರುವ ಶಕ್ತಿ
ಆ ಎಲ್ಲಾ ಶಕ್ತಿಗಳು ಒಂದು ಮಾನವ ರೂಪ ತಾಳಿದರೆ
ಬಹುಶಃ ಅದೇ ಜೋಗಿ
A pen mate.-
ಹೆಗಲಮೇಲೊರಗಿ ಮನದ ಭಾರವನಿಳಿಸಿ
ಹಗುರಾಗಿ ಹಾಯಾಗಿ ಹಾರಾಡುವಾಸೆ
ಮಡಿಲೊಳಗೆ ಮಲಗಿ ಮಗುವಂತೆ ನಗುತ
ನಿನ್ನೊಲವ ತೇರಲ್ಲಿ ತೇಲಾಡುವಾಸೆ
ಹರಿವ ನದಿಯಂತೆ ನಿನ್ಮನವನರಸಿ
ತಿಳಿಯಾಗಿ ನಿನ್ನೊಳಗೆ ಬೆರೆಯುವ ಆಸೆ
ನನ್ನ ನಾ ಮರೆತು ನೀನಾಗಿ ನಿಂತು
ಆನಂದದನುಭವದಿ ಮಿಂದೇಳುವಾಸೆ.-
Thanks to those who always hate me
Because of you I now know what love is
Thanks to those who made me cry
Because of you I know the value of smile
Thanks to those who thought me weak
Because of you I found my strength
Thanks to those who wanted me to wither
Because of you I learnt to bear any weather
Thanks to those who left me in storm
Because of you I learnt to stand alone calm.-
ಚಂದಿರನ ತಂಪಲ್ಲು ಮನವು ಸುಡುತಿಹುದಿಲ್ಲಿ
ಪ್ರೀತಿಯೇ ನೀನೆನ್ನ ಜೊತೆಯಿಲ್ಲದೆ
ಹಾಲ್ಬೆಳಕ ಬೆಳಕಿನಲಿ ಹೂವೆಲ್ಲಾ ಅರಳಿದರು
ಮನವಿಲ್ಲಿ ಕೊರಗಿಹುದು ನೀನಿಲ್ಲದೇ
ನಗುವೊಂದು ಮರೆಯಾಗಿ ಕಾಯುವಿಕೆ ತಪವಾಗಿ
ದಿನದಿನವು ಕಳೆಯುತಿದೆ ನೆನಪಿನಲ್ಲಿ
ಒಲವಿನಂಬರದಲ್ಲಿ ಕಟ್ಟಿದ್ದ ಕನಸುಗಳು
ಉರುಳಿ ಬಿದ್ದಿಹುದೇನು ಇಂದು ಇಲ್ಲಿ?
ಕೈಹಿಡಿದು ಕುಣಿದಿದ್ದ ಅಂಗಳವು ಬರಿದಾಗಿ
ನಗುತಿಹುದು ನೋಡೆನ್ನ ಪ್ರೀತಿಯನ್ನು
ನೀ ಬಂದು ಈಗ, ಅಪ್ಪಿ ಬಿಡು ಬೇಗ
ಮತ್ತೊಮ್ಮೆ ಅಣುಕಿಸುವ ವಿರಹವನ್ನು
ಕಟ್ಟಳೆಯನೊಡೆದು ನೆಪಗಳನು ತೊರೆದು
ಬಾರಯ್ಯ, ಬೇಗನೇ ಕಾದಿರುವೆನು
ನೀನಿತ್ತ ಮಾತುಗಳನೆಣಿಸುತಲಿ ನಿಂತಿಹೆನು
ನಿನ್ನ ನೆನಪಲ್ಲೇ ಉಸಿರಾಡುತಿಹೆನು-
ಉಡುಗೊರೆಯ ಬೇಡಿದೆನು ಪ್ರೀತಿಯಿಂದಲಿ ನಾನು
ನೋವೆಂಬ ಉಡುಗೊರೆಯ ನೀಡಿದೆ ನೀನು
ಸಹಿಸಲಾರೆನು ನಾನು ಕುಂದಿಹೆನು ಇನ್ನೂ
ಮತ್ತೆಂದೂ ನೀಡದಿರು ಈ ಉಡುಗೊರೆಯನ್ನು.-
ಅರಿಯದಾದೇ ಏನು ಮನದ ಆಸೆಗಳನ್ನು
ಬಿಟ್ಟು ಹೋದೆಯ ನೀನು ಬರಿಯ ನೆನಪನ್ನು
ಕರೆದರೂ ಆಲಿಸದೆ ಮೌನದೊಳು ಬೆರೆತಿರುವೆ
ಕರುಣೆ ತೋರುತಲೊಮ್ಮೆ ಬರಬಾರದೇನು!?
ನೀನಿರದ ಲೋಕದಲಿ ಬಡವಿಯಾಗಿಹೆ ನಾನು
ನಗುವೆಂಬೊಡವೆಯನು ತೊಡಿಸು ಬಾ ನೀನು
ನಿನ್ನೊಲವಿನಮೃತವ ನೀಡಿ ಕಾಪಾಡುತಲಿ
ಬದುಕಿಸಲು ಬಾರೆಯ ಬರಿದಾದ ಮನವನ್ನು.-
ನೀನಿದ್ದರೂನು ಒಂಟಿಯಾಗಿಹೆ ನಾನು
ನೀನೆನ್ನ ಸನಿಹದಲಿ ಇರದೆ ಇನ್ನು|
ಮನದ ತುಂಬೆಲ್ಲಾ ನಿನ್ನದೇ ನೆನಪುಗಳು
ಕಾಡುತಿಹುದೆನ್ನನು ಬಿಡದಂತೆ ಇನ್ನು||
ನಗುವೆಲ್ಲಾ ಅಳುವಾಗಿ ಕಣ್ತುಂಬಿ ತುಳುಕಿಹುದು
ಕಾಣದಾಗಿದೆ ಏಕೆ ನಿನಗಿನ್ನು|
ಕರೆಯದಿದ್ದರು ಅಂದು ಆಲಿಸಿದ ಮನವಿಂದು
ಕಿವುಡಾಯಿತೇನು ಕರೆದರೂ ನಾನು||
ಒಮ್ಮೆ ಬರಬಾರದೆ ಎನ್ನೊಲಿಸಬಾರದೇ
ಭಾರವಾದೆನೆ ನಾನು ಒಲವಿಗಿನ್ನು|
ನಿನ್ನೊಲವಿನಂಗಳದಿ ದೀಪವಾಗಿಹೆ ನಾನು
ಎನ್ನ ಬೆಳಗಿಸಲು ಬರಬಾರದೇನು||
-
ಶ್ರೀ ಎಂದರೆ ಲಕುಮಿಯು, ಶ್ರೀ ಎಂದರೆ ಶುಭವು
ಶ್ರೀ ಎಂದರೆ ಶಕ್ತಿಯು ತ್ರಿಗುಣಾತ್ಮಕ ಚಿಹ್ನೆಯು
ಶ್ರೀ ಇದ್ದರೆ ಗೌರವ, ಶ್ರೀ ನೀಡಲು ವರವ
ಸಿರಿಮಯವು ಜಗವೆಲ್ಲ, ಶ್ರೀ ಇರದೆ ಇಲ್ಲ
ಶ್ರೀ ಎಂದರೆ ಒಲವು ಶ್ರೀ ಎಂದರೆ ನಲಿವು
ಶ್ರೀ ಇರದೆ ಬಾಳೆಂದೂ ಪೂರ್ಣವಲ್ಲ
ಶ್ರೀ ಎಂದರೆ ತಪವು ಶ್ರೀ ಎಂದರೆ ಉಸಿರು
ಶ್ರೀಮಯವು ಜಗವೆಲ್ಲ ಶ್ರೀ ಇರದೆ ಇಲ್ಲ.-